ಹೋಂಡಾ ಕಂಪನಿಯಿಂದ ಹೊಸ ಡೀಸೆಲ್ ಎಂಜಿನ್

Posted By:
ಬಹುನಿರೀಕ್ಷಿತ ನೂತನ ಹೋಂಡಾ ಡೀಸೆಲ್ ಎಂಜಿನ್ ಜಿನಿವಾ ವಾಹನ ಪ್ರದರ್ಶನದಲ್ಲಿ ಅನಾವರಣಗೊಂಡಿದೆ. ಆದರೆ ಈ ಎಂಜಿನ್ ಭಾರತಕ್ಕೆ ಆಗಮಿಸುವ ಕುರಿತು ಯಾವುದೇ ಸೂಚನೆಯನ್ನು ಕಂಪನಿ ನೀಡಿಲ್ಲ.

ಅರ್ಥ್ ಡ್ರೀಮ್ಸ್ ಟೆಕ್ನಾಲಜಿ ಮೂಲಕ ನೂತನ ಡೀಸೆಲ್ ಎಂಜಿನನ್ನು ಹೋಂಡಾ ಪರಿಚಯಿಸಿದೆ. ಇದು ಸಾಕಷ್ಟು ಪರಿಸರ ಸ್ನೇಹಿ ಫೀಚರುಗಳೊಂದಿಗೆ ಬಂದಿದೆ. 1.6 ಲೀಟರಿನ ಈ ಡೀಸೆಲ್ ಎಂಜಿನಿಗೆ ಕಂಪನಿಯು ಐ-ಡಿಟಿಇಸಿ ಎಂದು ನಾಮಕರಣ ಮಾಡುವ ನಿರೀಕ್ಷೆ ಕಂಪನಿಯದ್ದು. ಇದು ಟರ್ಬೊ ಚಾರ್ಜ್ಡ್ ಎಂಜಿನ್ ಆಗಿದ್ದು, ಸಾಕಷ್ಟು ಇಂಧನ ದಕ್ಷತೆ ಹೊಂದಿದೆ.

ಪ್ರಸಕ್ತ ವರ್ಷ ಯುರೋಪ್ ಮಾರುಕಟ್ಟೆಗೆ ಆಗಮಿಸುವ ಹೋಂಡಾ ಸಿವಿಕ್ ಹ್ಯಾಚ್ ಬ್ಯಾಕ್ ಕಾರಿಗೆ ನೂತನ ಎಂಜಿನ್ ಅಳವಡಿಸುವ ನಿರೀಕ್ಷೆಯಿದೆ. ನೂತನ ಎಂಜಿನ್ 119 ಹಾರ್ಸ್ ಪವರ್ ಮತ್ತು 300ಎನ್ಎಂ ಟಾರ್ಕ್ ಪವರ್ ನೀಡಲಿದೆ.

ದೇಶದಲ್ಲಿ ಪೆಟ್ರೋಲ್ ಕಾರುಗಳು ಪ್ರಾಬಲ್ಯತೆ ಪಡೆದಿರುವ ಸಂದರ್ಭದಲ್ಲಿ ಕಂಪನಿಯು ಭಾರತಕ್ಕೆ ಈ ಎಂಜಿನ್ ಪರಿಚಯಿಸುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ. (ಕನ್ನಡ ಡ್ರೈವ್ ಸ್ಪಾರ್ಕ್)

English summary
Honda's much awaited diesel engine has been unveiled at the ongoing Geneva Motor Show. This new diesel engine is pivotal for Honda's performance in India where sales have declined sharply. Honda can be accused of being slow to market sentiments as it struck to its much loved i-VTEC petrol engines in India.
Story first published: Tuesday, March 13, 2012, 11:26 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark