ಯಮಹಾ ಬೈಕುಗಳ ಮಾರಾಟ ಹೇಗಿದೆ ಗೊತ್ತೆ?

Yamaha posts 15.6% domestic sales growth in March
ಮಾರ್ಚ್ ತಿಂಗಳ ಸೇಲ್ಸ್ ರಿಪೋರ್ಟ್ ಕಾರ್ಡ್ ಬಂದಿದೆ. ಯಮಹಾ ಕಂಪನಿಯು ಮಾರ್ಚ್ 2012ರಲ್ಲಿ ದೇಶದಲ್ಲಿ ಸುಮಾರು 29,819 ಯುನಿಟ್ ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ತಿಂಗಳ 25,786 ದ್ವಿಚಕ್ರ ವಾಹನ ಮಾರಾಟಕ್ಕೆ ಹೋಲಿಸಿದರೆ ಶೇಕಡ 15.6ರಷ್ಟು ಪ್ರಗತಿ ದಾಖಲಿಸಿದೆ.

ಇದೇ ಸಮಯದಲ್ಲಿ ಕಂಪನಿಯು ಸುಮಾರು 12,067 ವಾಹನಗಳನ್ನು ರಫ್ತು ಮಾಡಿದ್ದು, ಕಳೆದ ವರ್ಷದ ಮಾರ್ಚ್ ತಿಂಗಳ 10,982 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಗಮನಾರ್ಹ ಪ್ರಗತಿ ದಾಖಲಿಸಿದೆ.

ಕಳೆದ ತಿಂಗಳು ಕಂಪನಿಯ ಒಟ್ಟಾರೆ ವಾಹನ ಮಾರಾಟ 41,886 ಯುನಿಟ್ ತಲುಪಿದೆ. ಕಳೆದ ವರ್ಷ ಮಾರ್ಚ್ ತಿಂಗಳ ಒಟ್ಟಾರೆ 36,768 ವಾಹನ ಮಾರಾಟಕ್ಕೆ ಹೋಲಿಸಿದರೆ ಕಳೆದ ತಿಂಗಳು ಶೇಕಡ 13.9ರಷ್ಟು ಪ್ರಗತಿ ದಾಖಲಾಗಿದೆ.

"ವೈಝಡ್ಎಫ್-ಆರ್15, ಎಫ್ ಝಡ್ ಮತ್ತು ಎಸ್ ಝಡ್ ಸೀರಿಸ್ ಬೈಕುಗಳ ನೆರವಿನಿಂದ ದ್ವಿಚಕ್ರ ವಾಹನ ಮಾರಾಟ ಹೆಚ್ಚಿಸಿಕೊಂಡಿದ್ದೇವೆ" ಎಂದು ಕಂಪನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಹಿರೊಯುಕಿ ಸುಜುಕಿ ಹೇಳಿದ್ದಾರೆ.

ಯಮಹಾ ಕಂಪನಿಯು ತನ್ನ ಗ್ರಾಹಕರೊಂದಿಗಿನ ಸಂಬಂಧವನ್ನು ಸಹ ವೃದ್ಧಿಸಿಕೊಂಡಿದೆ. ಯೆಸ್ ಯಮಹಾ ಕಾರ್ಯಕ್ರಮ ಇತ್ತೀಚಿನ ಉದಾಹರಣೆ. ಜೊತೆಗೆ ವಿದ್ಯಾರ್ಥಿ ಮತ್ತು ಮಕ್ಕಳಿಗಾಗಿ ಯಮಹಾ ಸೇಫ್ ರೈಡಿಂಗ್ ಸೈನ್ಸ್, ಯಮಹಾ ಸರ್ವಿಸ್ ಕ್ಯಾಂಪ್ ಇತ್ಯಾದಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

Most Read Articles

Kannada
English summary
Yamaha posts 15.6% domestic sales growth in March. It sold 29,819 units in March 2012 as against 25,786 units sold in March 2011 in the domestic markets. In the Export markets the company sold 12,067 units in March 2012 as compared to 10,982 units in the same month last year.
Story first published: Monday, April 2, 2012, 14:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X