ಅಧಿಕೃತ; 25ರಂದು ಹೋಂಡಾ ಸಿಟಿ ಜಾಗತಿಕ ಅನಾವರಣ

Written By:

ಇದೀಗ ಎಲ್ಲವೂ ಅಧಿಕೃತಗೊಂಡಿದ್ದು, ನೂತನ ಹೋಂಡಾ ಸಿಟಿ ನವೆಂಬರ್ 25ರಂದು ಜಾಗತಿಕ ಅನಾವರಣಗೊಳ್ಳಿಲದೆ ಎಂಬುದನ್ನು ಕಂಪನಿ ದೃಢೀಕರಿಸಿದೆ. ಆಟೋಮೋಟಿವ್ ಡಿಸೈನ್ ಹಾಗೂ ತಂತ್ರಜ್ಞಾನದ ಆಧಾರದಲ್ಲಿ ನೂತನ ಹೋಂಡಾ ಕಾರನ್ನು ಅಭಿವೃದ್ಧಿಗೊಳಿಸಲಾಗಿದೆ.

ಇನ್ನು ಹೆಚ್ಚಿನ ಆಸಕ್ತಿದಾಯಕ ವಿಚಾರವೆಂದರೆ ಮುಂದಿನ ತಲೆಮಾರಿನ ಹೋಂಡಾ ಸಿಟಿ ಕಾರಿನ ಚಿತ್ರಗಳನ್ನು ಕಂಪನಿ ಇದುವರೆಗೆ ಬಿಡುಗಡೆಗೊಳಿಸಿಲ್ಲ. ಇದು ಕಾರು ಪ್ರಿಯರಲ್ಲಿ ಕುತೂಹಲ ಇಮ್ಮಡಿಗೊಳಿಸಲು ಕಾರಣವಾಗಿದೆ.

To Follow DriveSpark On Facebook, Click The Like Button
 Honda City

ಈ ನಡುವೆ 2014 ಹೋಂಡಾ ಸಿಟಿ ಸೆಡಾನ್ ಕಾರಿನ ಮುಗಂಡ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿರುವ ಬಗ್ಗೆ ಮಾಹಿತಿಯಿದೆ. ಏತನ್ಮಧ್ಯೆ ಸದ್ಯ ಮಾರುಕಟ್ಟೆಯಲ್ಲಿರುವ ಹೋಂಡಾ ಸಿಟಿ ಮಾರಾಟ ಈಗಾಗಲೇ ಸ್ಥಗಿತಗೊಂಡಿದ್ದು, ಗ್ರಾಹಕರು ಹೊಸ ಕಾರಿನ ನಿರೀಕ್ಷೆಯಲ್ಲಿದ್ದಾರೆ.

ಅಂದ ಹಾಗೆ 2014 ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿರುವ ನೂತನ ಹೋಂಡಾ ಸಿಟಿ ತದಾ ಬಳಿಕ ಮಾರುಕಟ್ಟೆ ಪ್ರವೇಶಿಸಲಿದೆ.

ವೆರಿಯಂಟ್

ಪೆಟ್ರೋಲ್ ಹಾಗೂ ಡೀಸೆಲ್ ಸೇರಿದಂತೆ ಒಟ್ಟು ಎಂಟು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ.

ಎಂಜಿನ್

1.5 ಲೀಟರ್ ಐ-ವಿಟೆಕ್ ಹಾಗೂ 1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್.

ತಲಹದಿ- ಹೋಂಡಾ ಜಾಝ್ ತಲಹದಿಯಲ್ಲಿ ನಿರ್ಮಾಣ.

English summary
Honda has confirmed the unveiling of the next gen City sedan in New Delhi on 25th November 2013. The new car - codenamed 2CT will be carried with the same 1.5L i-VTEC Petrol engine along with the all new 1.5L Diesel engine.
Story first published: Saturday, November 16, 2013, 12:54 [IST]
Please Wait while comments are loading...

Latest Photos