ಸರ್ವಾಧಿಕಾರಿಯ ಕಾರು ಮುಟ್ಟಗೋಲು; 23 ಕೋಟಿಗೆ ಹರಾಜು

Posted By:

ಸಾರ್ವಜನಿಕ ನಿಧಿ ಮೋಸ ಪ್ರಕರಣದಲ್ಲಿ ಭಾಗಿಯಾಗಿರುವ ಆಫ್ರಿಕಾ ಖಂಡದ ಸರ್ವಾಧಿಕಾರಿಯೊಬ್ಬರ ಪುತ್ರನ ಐಷಾರಾಮಿ ಕಾರುಗಳನ್ನು ಮುಟ್ಟಗೋಲು ಮಾಡಲಾಗಿದ್ದು, ಆ ಬಳಿಕ ಹರಾಜಿನಲ್ಲಿ 1.7 ಕೋಟಿ ರು.ಗಳಿಗೆ ಮಾರಾಟ ಮಾಡಲಾಗಿದೆ.

ಆಫ್ರಿಕಾದ ಇಕ್ವೊಟೊರಿಯಲ್ ಗನಿಯಾ ರಾಷ್ಟ್ರದ ಅಧ್ಯಕ್ಷ ಟಿಯೊಡೊರೊ ಒಬೈಂಗ್ ಗುಯೆಮಾ ಮಸೊಗೊ ಪುತ್ರ ಟಿಯೊಡೊರೊ ಗುಯೆಮಾ ಒಬೈಂಗ್ ಮ್ಯಾಂಗೊ ಹಾಗೂ ಕುಟುಂಬವು 2011ರಲ್ಲಿ ಭಾರಿ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು.

To Follow DriveSpark On Facebook, Click The Like Button

ತೈಲ ನಿಕ್ಷೇಪವನ್ನು ಹೊಂದಿರುವ ಈತ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಒಟ್ಟು 11 ಕಾರುಗಳನ್ನು ಮುಟ್ಟಗೋಲು ಮಾಡಲಾಗಿದೆ. ಇದರಲ್ಲಿ ತಲಾ 2ರಂತೆ ಬುಕಾಟಿ ವೆರೊನ್ ಹಾಗೂ ಬೆಂಟ್ಲಿ ಮತ್ತು ತಲಾ ಒಂದರಂತೆ ಫೆರಾರಿ ಎನ್ಜೊ, ಮಸೆರಟಿ ಎಂಸಿ12, ಪೋರ್ಷೆ ಕರೆರಾ ಜಿಟಿ, ಫೆರಾರಿ 599 ಜಿಟಿಒ, ರೋಲ್ಸ್ ರಾಯ್ಸ್, ಮೇಬ್ಯಾಕ್ ಹಾಗೂ ಆಸ್ಟನ್ ಮಾರ್ಟಿನ್ ಸೇರಿಕೊಂಡಿದೆ.

ಈ ಎಲ್ಲ ಕಾರುಗಳನ್ನು ಇತ್ತೀಚೆಗಷ್ಟೇ ಪ್ಯಾರಿಸ್‌ನಲ್ಲಿ ಹರಾಜಿಡಲಾಗಿತ್ತು. ಫ್ರಾನ್ಸ್ ಅಧಿಕಾರಿಗಳಿಂದ ನಡೆದ ಈ ಹರಾಜಿನಲ್ಲಿ ಬರೋಬ್ಬರಿ 23 ಕೋಟಿ ರು. ಸಂಗ್ರಹಿಸಲಾಗಿದೆ.

English summary
The exploits of the dictatorial ruler of the African nation of Equatorial Guinea are well known. The 71 year old Teodoro Obiang Nguema Mbasogo and his family is one of the richest in the world thanks to the rich oil deposits found in the country. The family is also allegedly involved in several cases of public fund theft.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark