ಸದ್ಯದಲ್ಲೇ ಅಶೋಕ್ ಲೇಲ್ಯಾಂಡ್‌ನಿಂದ 'ದೋಸ್ತ್‌' ಪ್ರಯಾಣಿಕ ವಾಹನ

ನಿಸ್ಸಾನ್ ಹಾಗೂ ಅಶೋಕ್ ಲೇಲ್ಯಾಂಡ್ ಜಂಟಿ ಪಾಲುದಾರಿಕೆಯಲ್ಲಿ ನಿರ್ಮಾಣಗೊಂಡಿರುವ ಹಗುರ ವಾಣಿಜ್ಯ ವಾಹನ 'ದೋಸ್ತ್' ಕಳೆದೊಂದು ವರ್ಷದಲ್ಲಿ ಭಾರಿ ಯಶ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇದರಿಂದ ಹೆಚ್ಚು ಸ್ಪೂರ್ತಿ ಪಡೆದುಕೊಂಡಿರುವ ಹಿಂದೂಜಾ ಸಂಸ್ಥೆಯ ಅಶೋಕ್ ಲೇಲ್ಯಾಂಡ್, ನಿಕಟ ಭವಿಷ್ಯದಲ್ಲಿ ದೋಸ್ತ್ ತಲಹದಿಯಲ್ಲಿಯೇ ನೂತನ ಪ್ರಯಾಣಿಕ ವಾಹನ ಬಿಡುಗಡೆಗೊಳಿಸುವ ಯೋಜನೆ ಹೊಂದಿದೆ.

ದೇಶದ ಎರಡನೇ ಅತಿದೊಡ್ಡ ವಾಣಿಜ್ಯ ವಾಹನ ಉತ್ಪಾದಕರಿಂದ ನಿರ್ಮಾಣವಾಗಲಿರುವ ದೋಸ್ತ್ ಮಲ್ಟಿ ಪರ್ಪಸ್ ವಾಹನವು, ಟಾಟಾ ಮೋಟಾರ್ಸ್‌ನ ವಿಂಗರ್ ಆವೃತ್ತಿಗೆ ಪ್ರಬಲ ಪೈಪೋಟಿ ನೀಡಲಿದೆ.

ನೂತನ ದೋಸ್ತ್ ಪ್ರಯಾಣಿಕ ವಾಹನ ಸಿಎನ್‌ಜಿ ಸಹಿತ ಎಲೆಕ್ಟ್ರಿಕ್ ಮಾದರಿಗಳಲ್ಲೂ ಆಗಮನವಾಗುವ ಸಾಧ್ಯತೆಯಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಅಕ್ಟೋಬರ್ ವೇಳೆಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಅಶೋಕ್ ಲೇಲ್ಯಾಂಡ್‌ನ ಈ ಮಲ್ಟಿ ಪರ್ಪಸ್ ವೆಹಿಕಲ್‌‌ನಲ್ಲಿ (ಎಂಪಿವಿ) ಸಮಾನ 1.5 ಲೀಟರ್ 3 ಸಿಲಿಂಡರ್ ಟರ್ಬೊ ಡೀಸೆಲ್ ಆಳವಡಿಸಲಾಗುವುದು. ಇದು ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ಟಾಟಾ ವಿಂಗರ್‌ ಸವಾಲನ್ನು ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಸದ್ಯದಲ್ಲೇ ಲೇಲ್ಯಾಂಡ್‌ನಿಂದ 'ದೋಸ್ತ್‌' ಪ್ರಯಾಣಿಕ ವಾಹನ

ಅಂದ ಹಾಗೆ ಅಶೋಕ್ ಲೇಲ್ಯಾಂಡ್ ದೋಸ್ತ್ ಹಗುರ ವಾಣಿಜ್ಯ ವಾಹನವು ಟಾಟಾ ಏಸ್ ಹಾಗೂ ಮಹೀಂದ್ರ ಮಾಕ್ಸಿಮೋ ಆವೃತ್ತಿಗಳಿಗೆ ಎದುರಾಳಿಯಾಗಿ ಕಾಣಿಸಿಕೊಂಡಿತ್ತು.

ಸದ್ಯದಲ್ಲೇ ಲೇಲ್ಯಾಂಡ್‌ನಿಂದ 'ದೋಸ್ತ್‌' ಪ್ರಯಾಣಿಕ ವಾಹನ

ಇದೀಗ ಆಗಮನವಾಗಲಿರುವ ಲೇಲ್ಯಾಂಡ್ ದೋಸ್ತ್ ಪ್ರಯಾಣಿಕ ವಾಹನವು ನಗರ ಸೇರಿದಂತೆ ಹಳ್ಳಿ ಪ್ರದೇಶದ ಸಂಚಾರಕ್ಕೆ ಹೆಚ್ಚು ಹೊಂದಿಕೆಯಾಗಲಿದೆ.

ಸದ್ಯದಲ್ಲೇ ಲೇಲ್ಯಾಂಡ್‌ನಿಂದ 'ದೋಸ್ತ್‌' ಪ್ರಯಾಣಿಕ ವಾಹನ

ಹೊಸೂರು ಘಟಕದಲ್ಲಿ ದೋಸ್ತ್ ಪ್ರಯಾಣಿಕ ವಾಹನವು ತಯಾರಾಗಲಿದೆ. ಹಾಗೆಯೇ ಹೊಸದಾಗಿ ಆರಂಭವಾಗಲಿರುವ ಘಟಕಕ್ಕೆ ಇದು ವಿಸ್ತರಣೆಯಾಗಲಿದೆ.

ಸದ್ಯದಲ್ಲೇ ಲೇಲ್ಯಾಂಡ್‌ನಿಂದ 'ದೋಸ್ತ್‌' ಪ್ರಯಾಣಿಕ ವಾಹನ

ಇನ್ನು ಮುಂದಿನ ವರ್ಷ ನೂತನ ಹಗುರ ಭಾರದ ವಾಣಿಜ್ಯ ವಾಹನ ಬಿಡುಗಡೆ ಮಾಡುವ ಯೋಜನೆಯನ್ನು ಕಂಪನಿ ಹೊಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಸದ್ಯದಲ್ಲೇ ಲೇಲ್ಯಾಂಡ್‌ನಿಂದ 'ದೋಸ್ತ್‌' ಪ್ರಯಾಣಿಕ ವಾಹನ

ದೋಸ್ತ್ ಇಂಟಿರಿಯರ್

ಸದ್ಯದಲ್ಲೇ ಲೇಲ್ಯಾಂಡ್‌ನಿಂದ 'ದೋಸ್ತ್‌' ಪ್ರಯಾಣಿಕ ವಾಹನ

ಎಂಜಿನ್

ಸದ್ಯದಲ್ಲೇ ಲೇಲ್ಯಾಂಡ್‌ನಿಂದ 'ದೋಸ್ತ್‌' ಪ್ರಯಾಣಿಕ ವಾಹನ

ಇಂಟಿರಿಯರ್

ಸದ್ಯದಲ್ಲೇ ಲೇಲ್ಯಾಂಡ್‌ನಿಂದ 'ದೋಸ್ತ್‌' ಪ್ರಯಾಣಿಕ ವಾಹನ

ನಿಸ್ಸಾನ್ ಇವಾಲಿಯಾ ಮಾದರಿಯಲ್ಲಿ ದೋಸ್ತ್

Most Read Articles

Kannada
English summary
The Dost MPV is expected to make use of the same 1.5 liter 3 cylinder turbo diesel engine the load carrying model uses and will have a seating capacity of 14. The Dost MPV will face direct competition from Tata Winger, which is already a popular product.
Story first published: Monday, April 15, 2013, 9:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X