ಆಡಿ ಎ6 ವಿಶೇಷ ಆವೃತ್ತಿ ಲಾಂಚ್; ದರ 46.33 ಲಕ್ಷ ರು.

Written By:
ಜರ್ಮನಿಯ ಪ್ರೀಮಿಯಂ ವಾಹನ ಉತ್ಪಾದಕ ಸಂಸ್ಥೆಯಾದ ಆಡಿ, ಎ6 ವಿಶೇಷ ಆವೃತ್ತಿಯನ್ನು ದೇಶಕ್ಕೆ ಪರಿಚಯಿಸಿದೆ. ಅಂದ ಹಾಗೆ ನೂತನ ಆಡಿ ಎ6 ಸ್ಪೆಷಲ್ ಎಡಿಷನ್ ಎಕ್ಸ್ ಶೋ ರೂಂ ದರ 46.33 ಲಕ್ಷ ರು.ಗಳಾಗಿವೆ.

ಭಾರತದಲ್ಲಿ 6000 ಆಡಿ ಯುನಿಟ್‌ಗಳನ್ನು ಮಾರಾಟ ಮಾಡಿದ ಸಂಭ್ರಮದ ಬೆನ್ನಲ್ಲೇ ವಿಶೇಷ ಆವೃತ್ತಿಯು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇದರಂತೆ ಕೆಲವು ಆಕರ್ಷಕ ಐಷಾರಾಮಿ ಫೀಚರ್ಸ್‌ಗಳನ್ನು ಆಳವಡಿಸಲಾಗಿದೆ.

ಕಿಲೇಸ್ ಎಂಟ್ರಿ, ಎಲ್‌ಇಡಿ ಹೆಡ್‌ಲೈಟ್, ಎಂಟು ಏರ್ ಬ್ಯಾಗ್, ಏರ್ ಸಸ್ಫೆಷನ್, ಬೋಸ್ ಸೌರಂಡ್ ಸೌಂಡ್ ಸಿಸ್ಟಂ, ಮಲ್ಟಿಮೀಡಿಯಾ ಟಚ್ ಸಿಸ್ಟಂ, ಹವಾಮಾನ ನಿಯಂತ್ರಣ ಹಾಗೂ ಸೀಟ್ ಹೊಂದಾಣಿಸಬಹುದಾದ ನೂತನ ಸೌಲಭ್ಯಗಳು ಲಭ್ಯವಿರಲಿದೆ.

ಒಟ್ಟು ಎರಡು ಎಂಜಿನ್ ಆಯ್ಕೆಗಳಲ್ಲಿ ಆಡಿ ಎ6 ವಿಶೇಷ ಆವೃತ್ತಿ ಲಭ್ಯವಿರಲಿದೆ. 2.0 ಟಿಡಿಐ ಹಾಗೂ 3.0 ಟಿಡಿಐ ಎಂಜಿನ್ ಆಯ್ಕೆಯಿರಲಿದೆ.

English summary
Now that 6000 Audi A6 luxury saloons have been sold in India, thus proving its popularity, the automaker has decided make things slightly more exclusive, at least for a limited period of time, with the launch of the special edition Audi A6
Story first published: Friday, May 10, 2013, 11:37 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark