ಬಂದಿದೆ ರೈತ ಸ್ನೇಹಿ ಹೈ ಎಂಡ್ ಟ್ರಾಕ್ಟರ್

ದೇಶದ ಮುಂಚೂಣಿಯ ಕೃಷಿ ಉಪಕರಣ ತಯಾರಕ ಸಂಸ್ಥೆಯಾದ ಎಸ್ಕಾರ್ಟ್ಸ್, ದೇಶದಲ್ಲಿ ರೈತಾಪಿ ವರ್ಗದ ಜನರಿಗೆ ನೆರವಾಗುವಂತಹ ಅತಿ ನೂತನ ಹೈ ಎಂಡ್ ಫೆರಾರಿ ಟ್ರಾಕ್ಟರ್‌ಗಳನ್ನು ಪರಿಚಯಿಸಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಫೆರಾರಿ ಟ್ರಾಕ್ಟರ್ ದರ ಎಂಟು ಲಕ್ಷ ರು.ಗಳಾಗಿದ್ದು, ಇಷ್ಟೊಂದು ದೊಡ್ಡ ಮೊತ್ತವನ್ನು ರೈತರು ಎಲ್ಲಿಂದ ಸಂಪಾದಿಸಲಿದ್ದಾರೆ ಎಂಬುದು ಪ್ರಶ್ನೆಯ ವಿಷಯವಾಗಿದೆ.

ಒಟ್ಟು ಎರಡು ಹೈ ಎಂಡ್ ಟ್ರಾಕ್ಟರ್‌ಗಳನ್ನು ಎಸ್ಕಾರ್ಟ್ಸ್ ದೇಶಕ್ಕೆ ಪರಿಚಯಿಸಿದೆ. ಸಾಮಾನ್ಯ ಟ್ರಾಕ್ಟರ್‌ಗಳಿಗಿಂತಲೂ ವಿಭಿನ್ನವಾಗಿ ಹೆಚ್ಚು ಶಕ್ತಿಶಾಲಿಯಾಗಿರುವ ಈ ಟ್ರಾಕ್ಟರುಗಳು ರೈತರಿಗೆ ಹೆಚ್ಚು ಆರಾಮದಾಯಕವಾಗಿ ಕೃಷಿ ಚಟುವಟಿಕೆ ನಡೆಸಲು ನೆರವಾಗಲಿದೆ.

ಫೆರಾರಿಯ ಕೃಷಿ ಉಪಕರಣ ವಿಭಾಗ ಇಟಲಿಯ ಬಿಸಿಎಸ್‌ನಿಂದ ಮೊದಲ ಟ್ರಾಕ್ಟರ್ ನಿರ್ಮಾಣವಾಗಿದ್ದರೆ ಎರಡನೇಯದ್ದು ಹೊಸ ಫಾರ್ಮ್‌ಟ್ರಾಕ್ ಎಕ್ಸಿಕ್ಯೂಟೀವ್ ಸಿರೀಸ್‌ನದ್ದಾಗಿದೆ.

ಪ್ರಮುಖವಾಗಿಯೂ ಯುವ ಉದ್ಯಮಿಗಳನ್ನು ಗುರಿಯಾರಿಗಿಸಿಕೊಂಡು ಇಂತಹದೊಂದು ಗರಿಷ್ಠ ನಿರ್ವಹಣೆಯ ಟ್ರಾಕ್ಟರನ್ನು ದೇಶದಲ್ಲಿ ಪರಿಚಯಿಸಲಾಗಿದೆ. ಇದು ಖಂಡಿತವಾಗಿಯೂ ದೇಶದ ಕೃಷಿ ಚಟುವಟಿಕೆಗಳಲ್ಲಿ ದೊಡ್ಡ ಪರಿಣಾಮವನ್ನುಂಟು ಮಾಡುವ ನಿರೀಕ್ಷೆಯನ್ನು ಎಸ್ಕಾರ್ಟ್ಸ್ ಹೊಂದಿದೆ. ಹಾಗಿದ್ದರೆ ಬನ್ನಿ ಫೋಟೊ ಫೀಚರ್ ಮೂಲಕ ಹೆಚ್ಚು ತಿಳಿಯೋಣ...

Ferrari Tractor

Ferrari Tractor

ಪ್ರಸ್ತುತ ಫೆರಾರಿ ಟ್ರಾಕ್ಟರ್, ದ್ರಾಕ್ಷೆ ತೋಟಗಾರಿಕೆಗೆ ಹೆಚ್ಚು ಸಹಕಾರಿಯಾಗಲಿದೆ. ಇದರ ನಾಲ್ಕು ವೀಲ್‌ಗಳು ಸಮಾನ ಗಾತ್ರ ಹೊಂದಿರುವುದು ಮತ್ತೊಂದು ವಿಶೇಷತೆಯಾಗಿದೆ. ಈ ಎಡಬ್ಲ್ಯುಡಿ ಟ್ರಾಕ್ಟರ್, ಲೊ ಟರ್ನಿಂಗ್ ರೇಡಿಯಸ್ ಹಾಗೂ ಭಾರ ಹಂಚಿಕೆಗೆ ನೆರವಾಗಲಿದೆ.

Ferrari Tractor

Ferrari Tractor

ದ್ರಾಕ್ಷೆ ಸೇರಿದಂತೆ ದೇಶದ ಹಣ್ಣುಹಂಪಲುಗಳ ತೋಟಕ್ಕೆ ಸಹಕಾರಿಯಾಗಲಿರುವ ಈ 26 ಎಚ್‌ಪಿ ಟ್ರಾಕ್ಟರ್ ದರ ಎಂಟು ಲಕ್ಷ ರು.ಗಳಾಗಿವೆ.

Farmtrac Executive Series

Farmtrac Executive Series

ಇನ್ನು ಫಾರ್ಮ್‌ಟ್ರಾಕ್ ಸಿರೀಸ್ ನಿಮ್ಮ ಟ್ರಾಕ್ಟರಿನ ಪರಿಪೂರ್ಣತೆಯನ್ನು ಬದಲಾಯಿಸಲಿದೆ. ಇದರ ಐಷಾರಾಮಿ ಸಿಟ್ಟಿಂಗ್ ಸೌಲಭ್ಯವು ನೀವು ಕಾರಿನಲ್ಲಿ ಕುಳಿತುಕೊಂಡಂತೆ ಭಾಸವಾಗಲಿದೆ. ಆರಾಮದಾಯಕ ಚಾಲನೆ, ಸ್ಟೈಲಿಷ್ ವಿನ್ಯಾಸ ಹಾಗೂ ಸುರಕ್ಷತೆಗೆ ಹೆಚ್ಚಿನ ಮಹತ್ವ ಕೊಡಲಾಗಿದ್ದು, ಬ್ರೇಕ್ ಪೆಡ್ಯಾಲ್, ಡಿಜಿಟಲ್ ಸ್ಪೀಡೋಮೀಟರ್ ಹಾಗೂ ಎಲ್‌ಇಡಿ ಹೆಡ್ ಲ್ಯಾಂಪ್ ಹೊಂದಿರಲಿದೆ.

Farmtrac Executive Series

Farmtrac Executive Series

ಫಾರ್ಮ್‌ಟ್ರಾಕ್ ಟ್ರಾಕ್ಟರ್‌ಗಳು 45 ಎಚ್‌ಪಿ, 50 ಎಚ್‌ಪಿ ಹಾಗೂ 60 ಎಚ್‌ಪಿಗಳೆಂಬ ಮೂರು ಸಿರೀಸ್‌ಗಳಲ್ಲಿ ಲಭ್ಯವಿರಲಿದೆ. ಪ್ರಸ್ತುತ ಟ್ರಾಕ್ಟರ್‌ಗಳು ಮಹಾರಾಷ್ಟ್ರದ ಆಯ್ದು ಡೀಲರ್‌ಶಿಪ್‌ಗಳಲ್ಲಿ ಮಾತ್ರ ಲಭ್ಯವಿರಲಿದೆ.

ದರ ಮಾಹಿತಿ:

45 ಎಚ್‌ಪಿ- 6.5 ಲಕ್ಷ ರು.

50 ಎಚ್‌ಪಿ- 6.9 ಲಕ್ಷ ರು.

60 ಎಚ್‌ಪಿ- 7.4 ಲಕ್ಷ ರು.

Most Read Articles

Kannada
English summary
Escorts, one of India's leading agricultural equipment manufacturer has launched two new high end tractors. These tractors will cater to the new age agriculturists and provide comfort unlike anything provided by regular tractors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X