ಮುಂದಿನ ವರ್ಷ ಅಕಾರ್ಡ್ ಹೈಬ್ರಿಡ್ ಕಾರು ಲಾಂಚ್

Written By:

ಕೆಲವು ದಿನಗಳ ಹಿಂದೆಯಷ್ಟೇ ದೇಶದಲ್ಲಿ ಈಗಿನ ಜನರೇಷನ್‌ನ ಅಕಾರ್ಡ್ ಮಾರಾಟವನ್ನು ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಸ್ಥಗಿತಗೊಳಿಸಿತ್ತು.

ಇದರ ಬೆನ್ನಲ್ಲೇ ಖುಷಿ ಸುದ್ದಿಯೊಂದು ಆಗಮಿಸಿದ್ದು ಹೋಂಡಾ ಹೈಬ್ರಿಡ್ ಕಾರು ಮುಂದಿನ ವರ್ಷ ಜಾಗತಿಕ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಮೂಲಗಳು ತಿಳಿಸಿವೆ. ಇಲ್ಲಿ ವಿಶೇಷವಾದ ಸಂಗತಿಯೆಂದರೆ ಕೇವಲ ಉತ್ತರ ಅಮೆರಿಕ ಮಾತ್ರವಲ್ಲ ಭಾರತದಲ್ಲೂ ಈ ಬಹುನಿರೀಕ್ಷಿತ ಕಾರು ಲಾಂಚ್ ಆಗಲಿದೆ.

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ 2014ರಲ್ಲೇ ಭಾರತದಲ್ಲಿ ಹೋಂಡಾ ಹೈಬ್ರಿಡ್ ಕಾರು ಲಾಂಚ್ ಆಗಲಿದೆ. ಅಷ್ಟೇ ಯಾಕೆ ಪ್ರಸ್ತುತ ಕಾರು ದೇಶದಲ್ಲಿ ಜೋಡಣೆಯಾಗಲಿದೆ.

ಪ್ರಸ್ತುತ ಅಜೇಮ್ ಹಾಗೂ ಸಿಟಿ ಕಾರುಗಳ ಮಾರಾಟದಲ್ಲಿ ಯಶಸ್ಸಿನ ತುತ್ತ ತುದಿಗೇರಿರುವ ಹೋಂಡಾ, ಹೈಬ್ರಿಡ್ ತಂತ್ರಜ್ಞಾನದೊಂದಿಗೆ ದೇಶದಲ್ಲಿ ಇನ್ನಷ್ಟು ಗ್ರಾಹಕರನ್ನು ಸೆಳೆಯುವ ಗುರಿ ಹೊಂದಿದೆ.

Story first published: Thursday, December 26, 2013, 11:50 [IST]
Please Wait while comments are loading...

Latest Photos