ರಾಷ್ಟ್ರ ರಾಜಧಾನಿಯಲ್ಲಿ ಓಡಾಡಲಿದೆ ಹೈಬ್ರಿಡ್ ಬಸ್ಸುಗಳು

By Nagaraja

ಸರಕಾರದ ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ ಪ್ಲಾನ್ (NEMMP) ಅಂಗವಾಗಿ ಹಲವಾರು ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಮೂರು ಚಕ್ರದ ವಾಹನ, ಮಿನಿ ಬಸ್ಸುಗಳನ್ನು ಪರೀಕ್ಷಾರ್ಥವಾಗಿ ರಸ್ತೆಗಿಳಿಸಲಾಗುತ್ತದೆ. ಇದರಂಗವಾಗಿ ಸದ್ಯದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಹೈಬ್ರಿಡ್ ಬಸ್ಸುಗಳು ಓಡಾಡಲಿದೆ.

2020ರ ವೇಳೆಗೆ ಕನಿಷ್ಠ ಪಕ್ಷ ಶೇಕಡಾ 17ರಷ್ಟು ಹೈಬ್ರಿಡ್ ಹಾಗೂ ವಿದ್ಯುತ್ ಚಾಲಿತ ವಾಹನಗಳು ರಸ್ತೆಗಿಳಿಸುವುದು ಸರಕಾರದ ಮಹತ್ತರ ಯೋಜನೆಯಾಗಿದೆ.

ಇಂಧನಗಳಿಗೆ ಬದಲಿ ವ್ಯವಸ್ಥೆ ಎನಿಸಿಕೊಂಡಿರುವ ಇಂತಹ ಹೈಬ್ರಿಡ್ ವಾಹನಗಳು ಪರಿಸರ ಸ್ನೇಹಿ ಕೂಡಾ ಆಗಿದೆ. ಇದರ ಅಂಗವಾಗಿ ವಿದ್ಯುತ್ ಚಾಲಿತ ಹಾಗೂ ಹೈಬ್ರಿಡ್ ತಳಿಯ ವಾಹನಗಳನ್ನು ಉತ್ಪಾದಿಸುವ ವಾಹನ ಕಂಪನಿಗಳಿಗೆ ಸರಕಾರ ಸಬ್ಸಿಡಿ ಒದಗಿಸುತ್ತಿದೆ.

ಪ್ರಸ್ತುತ ಮಹೀಂದ್ರ ಹಾಗೂ ಟೊಯೊಟಾ ಕಂಪನಿಗಳು ಮಾತ್ರ ವಿದ್ಯುತ್ ಚಾಲಿತ ವಾಹನಗಳನ್ನು ಉತ್ಪಾದಿಸುವುದರಲ್ಲಿ ಕಾರ್ಯಮಗ್ನವಾಗಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಮಹೀಂದ್ರ ರೇವಾ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದ್ದ ಮಹೀಂದ್ರ ಸದ್ಯದಲ್ಲೇ ಇನ್ನಷ್ಟು ವಿದ್ಯುತ್ ಚಾಲಿತ ಕಾರುಗಳನ್ನು ಪರಿಚಯಿಸುವ ಸಾಧ್ಯತೆಗಳಿವೆ. ಇದರಲ್ಲಿ ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಕಾರು ಪ್ರಮುಖವಾಗಿದೆ. ಅದೇ ಹೊತ್ತಿಗೆ ಟೊಯೊಟಾವು ಹೈಬ್ರಿಡ್ ಕ್ಯಾಮ್ರಿ ಸೆಡಾನ್ ವರ್ಷನ್ ಪರಿಚಯಿಸಲಿದೆ. ಜಾಗತಿಕವಾಗಿ ಭಾರತವು ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Most Read Articles

Kannada
English summary
As per the ambitious National Electric Mobility Mission Plan (NEMMP) set up by the government of India trial runs of electric and hybrid three wheelers, mini buses and busses will begin in New Delhi as soon as August.
Story first published: Saturday, July 13, 2013, 12:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X