2 ವರ್ಷದಲ್ಲಿ 4 ಹೊಸ ಮಾಡೆಲ್; ಇದು ಹ್ಯುಂಡೈ ಗೇಮ್‌ಪ್ಲಾನ್

Written By:

ಬೆಳೆದು ಬರುತ್ತಿರುವ ಮಾರುಕಟ್ಟೆ ಸ್ಪರ್ಧೆಯನ್ನು ಸ್ಪಷ್ಟವಾಗಿ ಮನಗಂಡಿರುವ ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ಇಂಡಿಯಾ, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ದೇಶಕ್ಕೆ ನಾಲ್ಕು ನೂತನ ಮಾಡೆಲ್‌ಗಳನ್ನು ಪರಿಚಯಿಸುವ ಬೃಹತ್ ಯೋಜನೆಯನ್ನು ಹೊಂದಿದೆ.

ಈ ಮೂಲಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರವಾಗಿರಿಸಿರುವ ಗುರಿ ಹೊಂದಿದೆ. ಈ ನಾಲ್ಕು ಎಸ್‌ಯುವಿಗಳ ಪೈಕಿ ಕಾಂಪಾಕ್ಟ್ ಎಸ್‌ಯುವಿ ಪ್ರಮುಖವಾಗಿದೆ. ಹಾಗೆಯೇ ಸಬ್ ಫೋರ್ ಮೀಟರ್ ಸೆಡಾನ್ ಕಾರು ಪರಿಚಯಿಸುವ ಮುಖಾಂತರ ಮಾರುತಿ ಸುಜುಕಿ ಡಿಜೈರ್ ಹಾಗೂ ಹೋಂಡಾ ಅಮೇಜ್ ಆವೃತ್ತಿಗಳಿಗೆ ಕಠಿಣ ಪೈಪೋಟಿ ನೀಡುವ ಯೋಜನೆ ಹೊಂದಿದೆ.

To Follow DriveSpark On Facebook, Click The Like Button

ಕಾಂಪಾಕ್ಟ್ ಎಸ್‌ಯುವಿ ದೇಶದ ಲಾಭದಾಯಕ ಸೆಗ್ಮೆಂಟ್ ಆಗಿದೆ. ಇದರಂತೆ ಕಾಂಪಾಕ್ಟ್ ಎಸ್‌ಯುವಿ ಅಭಿವೃದ್ಧಿಪಡಿಸುವುದರತ್ತ ಗಮನ ಕೇಂದ್ರಿತರಾಗಿದ್ದು, ಸದ್ಯದಲ್ಲೇ ಲಾಂಚ್ ಮಾಡಲಿದ್ದೇವೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಬೊ ಶಿನ್ ಸಿಯೊ ತಿಳಿಸಿದ್ದಾರೆ.

ಸಣ್ಣ ಕಾರುಗಳನ್ನು ಹೋಲಿಸಿದಾಗ ದೇಶದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಹೊರತಾಗಿಯೂ ತೆರಿಗೆ ವಿನಾಯಿತಿ ಪಡೆದುಕೊಳ್ಳುವಲ್ಲಿ ಮಾರುತಿ ಡಿಜೈರ್ ಹಾಗೂ ಹೋಂಡಾ ಅಮೇಜ್ ವಿಫಲವಾಗಿದೆ. ಹಾಗಿರುವಾಗ ಹೋಂಡಾ ಸಬ್ ಫೋರ್ ಮೀಟರ್ ಸೆಡಾನ್ ಕಾರು ಗ್ರಾಹಕರನ್ನು ಹೆಚ್ಚು ಆಕರ್ಷಿಸುವ ನಿರೀಕ್ಷೆ ಹೊಂದಿದೆ.

ಇನ್ನು ಮುಂದಕ್ಕೆ ನೋಡಿದಾಗ, ಮಾರುತಿ ಎರ್ಟಿಗಾ ಪ್ರತಿಸ್ಪರ್ಧಿ ಎಂಪಿವಿ ಕಾರನ್ನು ಕಣಕ್ಕಿಳಿಸುವ ಯೋಜನೆಯನ್ನು ಹ್ಯುಂಡೈ ಹೊಂದಿದೆ. ಹಾಗಿದ್ದರೂ ಕಾಂಪಾಕ್ಟ್ ಎಸ್‌ಯುವಿಗೆ ಮೊದಲ ಆದ್ಯತೆ ಎಂದು ಸಿಯೊ ತಿಳಿಸಿದ್ದಾರೆ. ನೂತನ ಕಾಂಪಾಕ್ಟ್ ಕಾರು, ಐ10 ಹಾಗೂ ಐ20 ಆವೃತ್ತಿಗಳ ನಡುವೆ ಕಾಣಿಸಿಕೊಳ್ಳಲಿದೆ.

English summary
Hyundai Motor India is planning to launch up to four new models in the next two years. Hyundai also taking on Maruti Suzuki's Dzire and Honda Cars India's Amaze with a new sub-four metre sedan.
Story first published: Wednesday, May 8, 2013, 15:26 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark