ಹ್ಯುಂಡೈ 15ರ ಸಂಭ್ರಮಕ್ಕೆ ಸ್ಯಾಂಟ್ರೊ ಮೆರಗು

Written By:

ನಿಮಗೆಲ್ಲರಿಗೂ ತಿಳಿದಿರುವ ಹಾಗೆಯೇ ಭಾರತದ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ, 15ರ ವಸಂತಕ್ಕೆ ಕಾಲಿಡುತ್ತಿದೆ. ಹೌದು, ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಭಾರತದಲ್ಲಿ ಕಾರು ಮಾರುಕಟ್ಟೆ ಆರಂಭಿಸಿ 15 ಯಶಸ್ವಿ ವರ್ಷಗಳೇ ಸಂದಿವೆ.

ನಿಮ್ಮ ಮಾಹಿತಿಗಾಗಿ, ಭಾರತಕ್ಕೆ ಬಿಡುಗಡೆಯಾಗಿರುವ ಹ್ಯುಂಡೈ ಮೊದಲ ಕಾರು ಸ್ಯಾಂಟ್ರೊ ಆಗಿದೆ. ಇದರನ್ವಯ ಸ್ಯಾಂಟ್ರೊ ಜತೆಗೆ 15 ವರ್ಷಗಳ ಸಂಭ್ರಮಾಚರಣೆಯನ್ನು ಆಚರಿಸಲು ಹೊರಟಿರುವ ಹ್ಯುಂಡೈ, ನೂತನ ಸ್ಯಾಂಟ್ರೊ ಕ್ಸಿಂಗ್ ಸೆಲೆಬ್ರೆಷನ್ ಎಡಿಷನ್ ಬಿಡುಗಡೆ ಮಾಡಿದೆ.

ಹ್ಯುಂಡೈನಿಂದ ಪರಿಚಯವಾಗಿರುವ ಸ್ಯಾಂಟ್ರೊ ಈಗಲೂ ಭಾರತೀಯ ರಸ್ತೆಗಳಲ್ಲಿ ಸದ್ದು ಮಾಡುತ್ತಿದೆ. ಎಲ್ಲ ವಿಶೇಷ ಆವೃತ್ತಿಗಳಂತೆ ಹ್ಯುಂಡೈ ಸೆಲೆಬ್ರೆಷನ್ ಆವೃತ್ತಿಯಲ್ಲೂ ಹೆಚ್ಚಿನ ವೈಶಿಷ್ಟ್ಯಗಳನ್ನು ಆಳವಡಿಸಲಾಗಿದೆ. ಆದರೆ ಎಂಜಿನ್‌ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಈ ನಡುವೆ ಅಲಾಯ್ ವೀಲ್ ಇಲ್ಲದಿರುವುದು ಸ್ವಲ್ಪ ಹಿನ್ನಡೆಗೆ ಕಾರಣವಾಗಿದೆ. ಇನ್ನು ದರದ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಲಿಲ್ಲ.

ಸೆಲೆಬ್ರೆಷನ್ ಸ್ಯಾಂಟ್ರೊ ಕ್ಸಿಂಗ್ ಆವೃತ್ತಿಯ ವೈಶಿಷ್ಟ್ಯ‌ಗಳೇನು?

ಆಡಿಯೋ ಸಿಸ್ಟಂ

ಸ್ಟೈಲಿಷ್ ಬಾಡಿ ಗ್ರಾಫಿಕ್ಸ್

ಫ್ಲೂರ್ ಮ್ಯಾಟ್ಸ್

ರಿಯರ್ ಪಾರ್ಕಿಂಗ್ ಸೆನ್ಸಾರ್ ಜತೆಗೆ ಎಲ್‌ಇಡಿ ಡಿಸ್‌ಪ್ಲೇ

ರಿಯರ್ ಕ್ರೋಮ್ ಗಾರ್ನಿಷ್

ಮ್ಯಾನುವಲ್ ರಿಯರ್ ಕರ್ಟೈನ್

English summary
It's been 15 years since India's present day No.2 car maker, the South Korean Hyundai Motors made its debut here. Their first car, as many of you might remember, was the Santro. To mark the occassion the company has come out with a special edition model - Santro Xing Celebration Edition.
Story first published: Monday, August 12, 2013, 12:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark