ದೇಶದ ಪ್ರಪ್ರಥಮ ಹೈಡ್ರೋಜನ್ ಚಾಲಿತ ಬಸ್

ಹಲವಾರು ವರ್ಷಗಳ ಅಧ್ಯಯನದ ಬಳಿಕ ದೇಶದ ಪ್ರಪ್ರಥಮ ಹೈಡ್ರೋಜನ್ ಚಾಲಿತ ಫ್ಯೂಯಲ್ ಸೆಲ್ ಬಸ್ಸನ್ನು ಟಾಟಾ ಮೋಟಾರ್ಸ್ (ಟಿಎಂಎಲ್) ಹಾಗೂ ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ (ಇಸ್ರೋ) ಜಂಟಿಯಾಗಿ ಅಭಿವೃದ್ಧಿಪಡಿಸಿದೆ.

ಜಲಜನಕ (ಹೈಡ್ರೋಜನ್) ಇಂಧನದಲ್ಲಿ ಚಲಿಸುವ ಈ ಫ್ಯೂಯಲ್ ಸೆಲ್ ಬಸ್ ಸಂಪೂರ್ಣ ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ. ಕಳೆದ ಕೆಲವು ವರ್ಷಗಳ ಕಾಲ ಬೆಂಗಳೂರು ಕೇಂದ್ರಿತ ಇಸ್ರೋ ವಿಜ್ಞಾನಿಗಳು ಕ್ರಯೋಜೆನಿಕ್ ತಂತ್ರಜ್ಞಾನದ ಉಪೋತ್ಪನ್ನ ಹೈಡ್ರೋಜನ್ ಸೆಲ್‌ಗಳ ಅಭಿವೃದ್ಧಿಯಲ್ಲಿ ತೊಡಗಿದ್ದರು. ಇದು ನಿಖರವಾದ ಕ್ರಯೋಜೆನಿಕ್ ತಂತ್ರಜ್ಞಾನವಲ್ಲ ಬದಲಾಗಿ ದ್ರವರೂಪದ ಜಲಜನಕವಾಗಿದೆ ಎನ್ನಲಾಗಿದೆ.

ಸಿಎನ್‌ಜಿ ವಿಧದ ಬಸ್

ಸಿಎನ್‌ಜಿ ವಿಧದ ಬಸ್

ಇಂದೊಂದು ಸಿಎನ್‌ಜಿ ವಿಧದ ಬಸ್ ಆಗಿದ್ದು, ಬಸ್ಸಿನ ಮೇಲ್ಗೆಡೆ ಹೆಚ್ಚಿನ ಒತ್ತಡದ ಹೈಡ್ರೋಜನ್ ಸೀಸೆಗಳನ್ನು ಸಂಗ್ರಸಿಡಲಾಗುತ್ತದೆ.

ಗರಿಷ್ಠ ತಂತ್ರಜ್ಞಾನ

ಗರಿಷ್ಠ ತಂತ್ರಜ್ಞಾನ

ಕಳೆದ ಮೂರು ದಶಕಗಳಲ್ಲಿ ಅನಿಲ ಹಾಗೂ ದ್ರವರೂಪದ ಜಲಜನಕವನ್ನು ತಯಾರಿಸುವ, ಸಂಗ್ರಹಿಸಲು ಮತ್ತು ನಿರ್ವಹಿಸುವುದರಲ್ಲಿ ಇಸ್ರೋ ಗರಿಷ್ಠ ತಂತ್ರಜ್ಞಾನವನ್ನು ಹೊಂದಿದೆ.

ಫ್ಯೂಯಲ್ ಸೆಲ್ ಬಸ್

ಫ್ಯೂಯಲ್ ಸೆಲ್ ಬಸ್

ಇಂಧನ ಕೋಶಗಳ ಮುಖಾಂತರ ವಾಹನಗಳಲ್ಲಿ ಹೈಡ್ರೋಜನ್ ಇಂಧನಗಳ ಬಳಕೆಯ ತಂತ್ರಜ್ಞಾನ ಯಶಸ್ವಿಯಾಗಿ ಮೂಡಿಬಂದಿದೆ.

ಬದಲಿ ವ್ಯವಸ್ಥೆ

ಬದಲಿ ವ್ಯವಸ್ಥೆ

ದಿನದಿಂದ ದಿನಕ್ಕೆ ತೈಲ ಬೆಲೆ ದಿನದಿಂದ ದಿನಕ್ಕೆ ವರ್ಧಿಸುತ್ತಿರುವಂತೆಯೇ ಇತರ ಬದಲಿ ವ್ಯವಸ್ಥೆಯನ್ನು ಹುಡುಕುವ ಪ್ರಯತ್ನದಲ್ಲಿ ಆಟೋ ಮೊಬೈಲ್ ಎಂಜಿನಿಯರ್‌ಗಳು ತೊಡಗಿದ್ದಾರೆ.

ಪರಿಸರ ಸ್ನೇಹಿ (0 ಎಮಿಷನ್)

ಪರಿಸರ ಸ್ನೇಹಿ (0 ಎಮಿಷನ್)

ಭವಿಷ್ಯದ ಸಂಚಾರ ವ್ಯವಸ್ಥೆಗೆ ಪರಿಸರ ಸ್ನೇಹಿ ಹೈಡ್ರೋಜನ್ ಬಸ್ಸುಗಳು ಮಾದರಿಯಾಗಲಿದೆ.

ಹೈಡ್ರೋಜನ್ ಚಾಲಿತ ಬಸ್

ಹೈಡ್ರೋಜನ್ ಚಾಲಿತ ಬಸ್

ಜಲಜನಕ ಇಂಧನ ಅಳವಡಿಸುವ ಬಸ್, ತಮಿಳುನಾಡಿನ ಇಸ್ರೋದ 'ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‌'ನಲ್ಲಿ ಅನಾವರಣಗೊಳಿಸಲಾಯಿತು.

Most Read Articles

Kannada
English summary
For the first time in the country, a Hydrogen-powered automobile bus has been developed by Tata Motors Limited (TML) and Indian Space Research Organisation after several years of research.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X