ದೇಶದಲ್ಲಿ ರಸ್ತೆಯಲ್ಲಿ ಓಡಾಡಲಿರುವ ಇನ್ನಷ್ಟು ಐಷಾರಾಮಿ ಬಸ್ಸುಗಳು

Written By:

ನಿಕಟ ಭವಿಷ್ಯದಲ್ಲೇ ದೇಶದ ರಸ್ತೆಯಲ್ಲಿ ಮತ್ತಷ್ಟು ಐಷಾರಾಮಿ ಬಸ್ಸುಗಳು ಓಡಾಡಲಿದೆ. ದೆಹಲಿ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಜೆಬಿಎಂ ಆಟೋ, ಇಟಲಿಯ ದೈತ್ಯ ಬಸ್ ಉತ್ಪಾದಸ ಸಂಸ್ಥೆಯಾಗಿರುವ ಬ್ರೆಡಾಮೆನರಿನಿಬಸ್ (BredaMenarinibus) ಜತೆ ಸೇರಿಕೊಂಡು ಭಾರತಕ್ಕೆ ಲಗ್ಷುರಿ ಬಸ್ಸುಗಳನ್ನು ಪರಿಚಯಿಸಲಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಇದು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ. ಇಂಡೋ-ಇಟಲಿಯ ಜಂಟಿ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಈ ಯೋಜನೆಯು ಹರಿಯಾಣದ ಫರಿದಾಬಾದ್ ಸಮೀಪದಲ್ಲಿರುವ ಕೋಸಿ ಘಟಕದಲ್ಲಿ ಬಸ್ ಉತ್ಪಾದನೆಯಾಗಲಿದೆ.

ಪ್ರಾಥಮಿಕವಾಗಿ ವರ್ಷಂಪ್ರತಿ 2000ರಷ್ಟು ಬಸ್ಸುಗಳನ್ನು ಉತ್ಪಾದಿಸುವ ಯೋಜನೆಯನ್ನು ಕಂಪನಿ ಹೊಂದಿದ್ದು, 500 ಕೋಟಿ ಹೂಡಿಕೆ ನಡೆಸಲಾಗುವುದು. ಪ್ರಸ್ತುತ ಯೋಜನೆಗೆ ಮುಂದಿನ ಕೆಲವೇ ತಿಂಗಳಲ್ಲಿ ಚಾಲನೆ ದೊರಕಲಿದೆ.

ದೇಶದಲ್ಲಿ ರಸ್ತೆಯಲ್ಲಿ ಓಡಾಡಲಿರುವ ಇನ್ನಷ್ಟು ಐಷಾರಾಮಿ ಬಸ್ಸುಗಳು

1.2 ಬಿಲಿಯನ್ ಅಮೆರಿಕನ್ ಡಾಲರ್‌ನ ಜೆಬಿಎಂ ಸಂಸ್ಥೆಯ ಭಾಗವಾಗಿರುವ ಜೆಬಿಎಂ ಆಟೋ, ಜಾಗತಿಕವಾಗಿ 18 ಪ್ರದೇಶಗಳಲ್ಲಾಗಿ 35 ತಯಾರಕ ಘಟಕ, ನಾಲ್ಕು ಎಂಜಿನಿಯರಿಂಗ್ ಮತ್ತು ವಿನ್ಯಾಸ ಘಟಕಗಳನ್ನು ಹೊಂದಿದೆ. ಇನ್ನೊಂದೆಡೆ ಅತಿ ಪುರಾತನ ಸಂಸ್ಥೆಗಳಲ್ಲಿ ಒಂದಾಗಿರುವ ಬ್ರೆಡಾಮೆನರಿನಿಬಸ್ ಕಳೆದ 90 ವರ್ಷಗಳಿಂದ ಬಸ್ಸು ಉತ್ಪಾದಿಸುತ್ತಿದೆ.

ದೇಶದಲ್ಲಿ ರಸ್ತೆಯಲ್ಲಿ ಓಡಾಡಲಿರುವ ಇನ್ನಷ್ಟು ಐಷಾರಾಮಿ ಬಸ್ಸುಗಳು

ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಬಿಎಂ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ನಿಶಾಂತ್ ಆರ್ಯ, ಮಾತುಕತೆ ಅಂತಿಮ ಹಂತದಲ್ಲಿದ್ದು, ದೇಶದ ವಾಣಿಜ್ಯ ವಾಹನ ಮಾರುಕಟ್ಟೆಯ ಅಗತ್ಯಗಳಿಗನ್ನಾಸಾರವಾಗಿ ಬಸ್ಸುಗಳನ್ನು ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.

ದೇಶದಲ್ಲಿ ರಸ್ತೆಯಲ್ಲಿ ಓಡಾಡಲಿರುವ ಇನ್ನಷ್ಟು ಐಷಾರಾಮಿ ಬಸ್ಸುಗಳು

ಫೋರ್ಡ್, ಹೋಂಡಾ ಮತ್ತು ಫಿಯೆಟ್‌ಗಳ ಆಟೋ ಕಂಪನಿಗಳಿಗೆ ಬಿಡಿಭಾಗಗಳನ್ನು ವಿತರಣೆ ಮಾಡುತ್ತಿರುವ ಜೆಬಿಎಂ ಆಟೋ, ಪ್ರಸ್ತುತ ದೇಶದ ಬಸ್ ಮಾರುಕಟ್ಟೆಯನ್ನು ತೆಕ್ಕೆಗೆ ಹಾಕಿಕೊಳ್ಳುವ ಪ್ರಯತ್ನದಲ್ಲಿದೆ. ಇದು ವೋಲ್ವೋ, ಮರ್ಸಿಡಿಸ್ ಬೆಂಝ್, ಇಸುಝು ಮತ್ತು ಸ್ಕಾನಿಯಾಗಳಂತಹ ಬಸ್ಸುಗಳಿಗೆ ಕಠಿಣ ಸ್ಪರ್ಧೆ ಒಡ್ಡಲಿದೆ.

ದೇಶದಲ್ಲಿ ರಸ್ತೆಯಲ್ಲಿ ಓಡಾಡಲಿರುವ ಇನ್ನಷ್ಟು ಐಷಾರಾಮಿ ಬಸ್ಸುಗಳು

ಒಂದು ವೇಳೆ ಒಪ್ಪಂದ ಅನುಷ್ಠಾನಗೊಂಡಲ್ಲಿ, ಜಾಗತಿಕವಾಗಿ ಪೂರ್ಣ ಪ್ರಮಾಣದ ವಾಹನ ತಯಾರಕ ವ್ಯವಸ್ಥೆ ಹೊಂದಿರುವ ದೇಶದ ಮೊದಲ ಆಟೋ ಕಂಪನಿಯೆಂಬ ಖ್ಯಾತಿಗೆ ಜೆಬಿಎಂ ಪಾತ್ರವಾಗಲಿದೆ. ಬಲ್ಲ ಮೂಲಗಳ ಪ್ರಕಾರ 2014 ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಜೆಬಿಎಂ ಬಸ್ಸು ಅನಾವರಣಗೊಳ್ಳುವ ಸಾಧ್ಯತೆಯಿದೆ.

ದೇಶದಲ್ಲಿ ರಸ್ತೆಯಲ್ಲಿ ಓಡಾಡಲಿರುವ ಇನ್ನಷ್ಟು ಐಷಾರಾಮಿ ಬಸ್ಸುಗಳು

ನಗರ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ದೇಶದಲ್ಲಿ ವರ್ಷಂಪ್ರತಿ 50,000ದಷ್ಟು ಬಸ್ಸುಗಳು ಮಾರಾಟವಾಗುತ್ತಿದೆ. ಪ್ರಸಕ್ತ ಬಂದಿರುವ ಮಾಹಿತಿ ಪ್ರಕಾರ ಸಿಎನ್‌ಜಿ ಮತ್ತು ಡೀಸೆಲ್ ನಿಯಂತ್ರಿತ 60 ಸೀಟುಗಳ ಬಸ್ಸು ಉತ್ಪಾದನೆಯಾಗಲಿದೆ.

English summary
JBM Auto forms a joint venture with Italian busmaker BredaMenarinibus to manufacture luxury buses in India
Story first published: Monday, November 25, 2013, 6:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark