ಲಂಬೋರ್ಗಿನಿ ಶಕ್ತಿಶಾಲಿ ಟ್ರಾಕ್ಟರ್ ಹೇಗಿದೆ ಗೊತ್ತಾ?

ಲಂಬೋರ್ಗಿನಿ ಬಗ್ಗೆ ಹೆಚ್ಚು ತಿಳಿಯದವರು ಈ ಸೂಪರ್ ಕಾರು ತಯಾರಕ ಸಂಸ್ಥೆಯು ಟ್ರಾಕ್ಟರ್‌ಗಳನ್ನು ಉತ್ಪಾದಿಸುತ್ತದೆಯೇ ಎಂಬುದನ್ನು ತಿಳಿದು ಅಚ್ಚರಿಪಡಬಹುದು. ಆದರೆ ನಿಮ್ಮ ಮಾಹಿತಿಗಾಗಿ ಹೇಳಬೇಕೆಂದರೆ ಈ ಇಟಲಿ ಮೂಲದ ಕಂಪನಿಯು ತನ್ನ ಆರಂಭಿಕ ಕಾಲಘಟ್ಟದಲ್ಲಿ ಟ್ರಾಕ್ಟರ್‌ಗಳನ್ನು ಉತ್ಪಾದಿಸುವುದರಲ್ಲೇ ಗಮನ ಸೆಳೆದಿದ್ದವು.

ಸ್ಥಾಪಕ ಫೆರುಸ್ಸಿಯೊ ಲಂಬೋರ್ಗಿನಿ ಅವರ ಫೆರಾರಿ 250ಜಿಟಿ ಕಾರಿನಲ್ಲಿ ಕ್ಲಚ್ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಸೂಪರ್ ಕಾರುಗಳನ್ನು ಉತ್ಪಾದಿಸಲು ಆರಂಭಿಸಿದ್ದರು. ಇದೀಗ 50 ವರ್ಷಗಳ ಬಳಿಕ ಅತ್ಯಂತ ಶಕ್ತಿಶಾಲಿ ಹಾಗೂ ಸ್ಟೈಲಿಷ್ 2013 ನಿಟ್ರೊ ಟ್ರ್ಯಾಕ್ಟರನ್ನು ಲಂಬೋರ್ಗಿನಿ ತಯಾರಿಸಿದೆ.

ಲಂಬೋರ್ಗಿನಿ ಇತಿಹಾಸದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ

Lamborghini 2013 Nitro Tractor

ಇಟಲಿಯ ಜನಪ್ರಿಯ ವಿನ್ಯಾಸಕಾರ Giorgetto Giugiaro ಎಂಬವರನ್ನು ನೂತನ ಲಂಬೋರ್ಗಿನಿ 2013 ನಿಟ್ರೊ ಟ್ರ್ಯಾಕ್ಟರನ್ನು ವಿನ್ಯಾಸಗೊಳಿಸಿದ್ದಾರೆ.

Lamborghini 2013 Nitro Tractor

ಇದು ಸ್ಟ್ರೈಲಿಷ್ ಎಕ್ಸ್‌ಟೀರಿಯರ್ ಫೀಚರ್ಸ್ ಹೊಂದಿದ್ದು, ಮುಂಭಾಗದಲ್ಲಿ ಎಲ್‌ಇಡಿ ಲೈಟಿಂಗ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಎಲ್‌ಇಡಿ ಲೈಟ್ಸ್ ಹೊಂದಿರಲಿದೆ.

Lamborghini 2013 Nitro Tractor

ಹಾಗಿದ್ದರೂ ಟ್ರಾಕ್ಟರ್ ವೈಶಿಷ್ಟ್ಯದ ಬಗ್ಗೆ ಲಂಬೋರ್ಗಿನಿ ಹೆಚ್ಚಿನ ವಿವರಣೆ ನೀಡಿಲ್ಲ. ಇದು ಫೋರ್ ಸಿಲಿಂಡರ್ Deutz ಟೈರ್ 4ಐ ಎಂಜಿನ್ ಹೊಂದಿರಲಿದೆ. ಹಾಗೆಯೇ ಫೈವ್ ಗೇರ್ ಸಿಸ್ಟಂ ಅಥವಾ ತ್ರಿ ಸ್ಪೀಡ್ ಪವರ್ ಶಿಫ್ಟ್ ಗೇರ್ ಬಾಕ್ಸ್ ಹೊಂದಿರಲಿದೆ.

Lamborghini 2013 Nitro Tractor

ಒಯಿಲ್‌ನಿಂದ ಕೂಡಿದ ಡಿಸ್ಕ್ ಬ್ರೇಕ್, ಸರ್ವೋ ಸಂಚಾಲಿತ ಬ್ರೇಕಿಂಗ್ ಸಿಸ್ಟಂ ಹಾಗೂ ಆಪ್ಷನಲ್ ಡಬಲ್ ಡಿಸ್‌ಪ್ಲೇಸ್‌ಮೆಂಟ್ ಸ್ಟೀರಿಂಗ್ ಪಂಪ್ ಹೊಂದಿರಲಿದೆ.

Lamborghini 2013 Nitro Tractor

ಹಾಗಿದ್ದರೂ ದರದ ಬಗ್ಗೆ ಲಂಬೋರ್ಗಿನಿ ಯಾವುದೇ ಅಧಿಕೃತ ಮಾಹಿತಿ ಹೊರಗೆಡವಿಲ್ಲ. ಇದೀಗ ಟ್ರಾಕ್ಟರ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...

Most Read Articles

Kannada
English summary
Lamborghini's tractor business still exists though, even after 50 years and the company has now unveiled the stylish new 2013 Nitro tractor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X