ಮೈಕ್ರೊ ಹೈಬ್ರಿಡ್ ತಂತ್ರಜ್ಞಾನ; ಮಹೀಂದ್ರ ಬೊಲೆರೊ ಪಿಕಪ್ ಲಾಂಚ್

By Nagaraja

ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು, ನೂತನ ಮೈಕ್ರೊ ಹೈಬ್ರಿಡ್ ತಂತ್ರಗಾರಿಕೆಯ ಬೊಲೆರೊ ಪಕಪ್ ಫ್ಲ್ಯಾಟ್ ಬೆಡ್ ವಾಹನವನ್ನು ಬೆಂಗಳೂರಿನಲ್ಲಿ ಲಾಂಚ್ ಮಾಡಿದೆ.

ಬೆಂಗಳೂರು ಎಕ್ಸ್ ಶೋ ರೂಂ ದರ 5.53 ಲಕ್ಷ ರು.

ನೂತನ ಮೈಕ್ರೊ ಹೈಬ್ರಿಡ್ ತಂತ್ರಜ್ಞಾನವು, ಸ್ಟಾರ್ಟ್/ಸ್ಟಾಪ್ ವೈಶಿಷ್ಟ್ಯವನ್ನು ಹೊಂದಿರಲಿದ್ದು, ಗರಿಷ್ಠ ಇಂಧನ ಉಳಿತಾಯ ಮಾಡಲು ನೆರವಾಗಲಿದೆ. ಪ್ರಸ್ತುತ ತಂತ್ರಗಾರಿಕೆಯು ಟ್ರಾಫಿಕ್ ಸಿಗ್ನಲ್ ವೇಳೆ ಸ್ವಯಂಚಾಲಿತವಾಗಿ ಕೆಲಸ ಮಾಡಲಿದೆ.


ಹಾಗೆಯೇ ವಾಣಿಜ್ಯ ವಿಭಾಗದಲ್ಲಿ ನೂತನ ಬೊಲೆರೊ ಪಿಕಪ್ ಫ್ಲ್ಯಾಟ್ ಬೆಡ್, ಹೆಚ್ಚು ಸ್ಥಳವಕಾಶವನ್ನು ಹೊಂದಿರಲಿದೆ. 1,250 ಕೆ.ಜಿ ಭಾರ ಹೊತ್ಯೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಬೊಲೆರೊ ಪಿಕಪ್ 2540ಎಂಎಂx1700ಎಂಎಂx650ಎಂಎಂ ಆಯಾಮ ಹೊಂದಿದೆ.

ಇನ್ನು ಎಂಡಿಐ ಎಂಜಿನ‌ನಿಂದ ನಿಯಂತ್ರಿಸಲ್ಪಡುವ ಮಹೀಂದ್ರ ಬೊಲೆರೊ ಪಿಕಪ್ ಎಫ್‌ಬಿ, 63 ಅಶ್ವಶಕ್ತಿ (195 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಎಆರ್‌ಎಐ ಮಾನ್ಯತೆ ಪ್ರಕಾರ 13.86 ಕೀ.ಮೀ. ಮೈಲೇಜ್ ನೀಡಲಿದೆ.

ನೂತನ ಹೊರಮೈ ಬಣ್ಣ, ಮಲ್ಟಿ ರಿಫ್ಲೇಕ್ಟರ್ ಹೆಡ್ ಲ್ಯಾಂಪ್, ಡ್ಯುಯಲ್ ಟೋನ್ ಅಪ್‌ಹಾಲ್‌ಸ್ಟ್ರೆ, ಬೆಂಜ್ ಸೀಟ್ ಜತೆ ಹೆಡ್ ರೆಸ್ಟ್ ಮತ್ತು ಚಾಲಕ ಸೇರಿದಂತೆ ಸಹ ಚಾಲಕರಿಗೂ ಸೀಟ್ ಬೆಲ್ಟ್ ಹೊಂದಿರುವುದು ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಹಾಗೆಯೇ 3 ವರ್ಷಗಳ ಮಿತಿರಹಿತ ಕೀ.ಮೀ. ವಾರಂಟಿ ಸೌಲಭ್ಯ ಲಭ್ಯವಿರಲಿದೆ.

Most Read Articles

Kannada
English summary
Mahindra Bolero Pick-up Flat Bed refresh introduced earlier this week has been launched in Bangalore. The new pickup comes with Mahindra's start/stop feature called Micro Hybrid, which improves fuel economy by switching off and starting the engine automatically at say, traffic signals
Story first published: Saturday, October 19, 2013, 12:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X