ಉತ್ತರಾಖಂಡ್‌ಗೆ 5 ಅಂಬುಲೆನ್ಸ್ ಕೊಡುಗೆ ನೀಡಿದ ಮಾರುತಿ

By Nagaraja

ಉತ್ತರಾಖಂಡ್‌ನಲ್ಲಿ ಪ್ರಳಯ ಸಂಭವಿಸಿರುವುದು ಇಡೀ ರಾಷ್ಟ್ರವೇ ಬೆಚ್ಚಿ ಬೀಳಿಸುವಂತಾಗಿದೆ. ಅಲ್ಲಿನ ಜನರು ಈ ಆಘಾತದಿಂದ ಇನ್ನು ಹೊರಬಂದಿಲ್ಲ. ಸಂತ್ರಸ್ತರು ಸರಕಾರದ ಸಹಾಯಕ್ಕಾಗಿ ಹಾತೊರೆಯುತ್ತಿದ್ದಾರೆ. ಹಾಗಿರುವಾಗ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ನೌಕರರು ತಮ್ಮ ದಿನದ ಭತ್ಯೆಯನ್ನು ದಾನ ಮಾಡುವ ಮೂಲಕ ಸಜ್ಜನಿಕೆ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಮಾರುತಿ ಐದು ಅಂಬುಲೆನ್ಸ್‌ಗಳನ್ನು ರವಾನಿಸಿದೆ.

ಉತ್ತರಾಖಂಡ್‌ನಲ್ಲಿ ಸಂಭವಿಸಿದ ಮಹಾ ಪ್ರಳಯಕ್ಕೆ 10 ಸಾವಿರದಷ್ಟು ಮಂದಿ ಅಸುನೀಗಿದ್ದರು. 70,000 ಮಂದಿ ಇನ್ನು ಕಣ್ಮರೆಯಾಗಿದ್ದಾರೆ. ಹಾಗಿರುವಾಗ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ 1.56 ಕೋಟಿ ದಾನ ಮಾಡುವ ಮೂಲಕ ಮಾರುತಿ ನೌಕರರು ಮಾನವೀಯತೆ ಮೆರೆದಿದ್ದಾರೆ.

ಪ್ರಸ್ತುತ ಕೊಡುಗೆಯು ಉತ್ತರಾಖಂಡ್ ಪ್ರಳಯ ಬಾಧಿತ ಪ್ರದೇಶದ ಪುನರ್ವಸತಿಗೆ ನೆರವಾಗಲಿದೆ. ಸಂಸ್ಥೆಯ ನೌಕರರ ಜತೆಗೆ ಮಾರುತಿಯು 5 ಓಮ್ನಿ ಅಂಬುಲೆನ್ಸ್‌ಗಳನ್ನು ಕಳುಹಿಸಿಕೊಟ್ಟಿದೆ. ಇದು ಉತ್ತರಾಖಂಡ್ ಪ್ರವಾಹ ವಿನಾಶ ಪ್ರದೇಶಗಳ ಎಲ್ಲಾ ಬಲಿಪಶುಗಳ ವೈದ್ಯಕೀಯ ಮತ್ತು ತುರ್ತು ಅಗತ್ಯಗಳನ್ನು ಪೂರೈಸಲಿದೆ.

ಕೇವಲ ಮಾರುತಿ ಮಾತ್ರವಲ್ಲ ದೇಶದ ಇತರ ವಾಹನ ಸಂಸ್ಥೆಗಳು ನೆರವಿನೊಂದಿಗೆ ಮುಂದೆ ಬಂದಿದೆ. ಮಹೀಂದ್ರ ಸಂಸ್ಥೆಯು ಈಗಾಗಲೇ ಒಂದು ಕೋಟಿ ನೆರವನ್ನು ಘೋಷಿಸಿದೆ.

Most Read Articles

Kannada
English summary
The Indian state of Uttarakhand, was recently slashed by heavy rains, cloud burst and land-slides.At such a time, India’s largest car manufacturer, Maruti Suzuki India and their employees will donate Rs 1.56 crores to Prime Minister’s National Relief Fund.
Story first published: Saturday, July 6, 2013, 14:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X