ಮರ್ಸಿಡಿಸ್ ಬೆಂಝ್ ಬಿ ಕ್ಲಾಸ್ ಡೀಸೆಲ್ ಕಾರು ಲಾಂಚ್

Written By:

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಭಾರತಕ್ಕೆ ನೂತನ ಬಿ ಕ್ಲಾಸ್ ಹ್ಯಾಚ್‌ಬ್ಯಾಕ್ ಡೀಸೆಲ್ ಕಾರನ್ನು ಪರಿಚಯಿಸಿದ್ದು, ಇದರ ಮುಂಬೈ ಎಕ್ಸ್ ಶೋ ರೂಂ ದರ 22.6 ಲಕ್ಷ ರು.ಗಳಾಗಿವೆ.

ಕಂಪ್ಲೀಟ್ ಬಿಲ್ಡ್ ಯುನಿಟ್ (ಸಿಬಿಯು) ಬೆಂಝ್ ನೂತನ ಕಾರು ಭಾರತದಲ್ಲಿ ಮಾರಾಟವಾಗಲಿದೆ. ಇದು ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಲು ಕಂಪನಿಗೆ ನೆರವಾಗಲಿದೆ. ಮುಂಬೈನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಬಾಲಿವುಡ್ ನಟರಾದ ಅಭಯ್ ಡಿಯೋಲ್, ಆದಿತಿ ರಾವ್ ಹೈದರಿ ಹಾಗೂ ಮರ್ಸಿಡಿಸ್ ಬೆಂಝ್ ಇಂಡಿಯಾ ಸಿಇಎ ಎಬೆರ್‌ಹಾರ್ಡ್ ಕೆರ್ನ್ ಹಾಜರಿದ್ದರು.

To Follow DriveSpark On Facebook, Click The Like Button

ನೂತನ ಬೆಂಝ್ ಬಿ180 ಸಿಡಿಐ ಕಾರು 2.2 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 7 ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಹೊಂದಿದೆ. ಇದು ಎಂಟ್ರಿ ಲೆವೆಲ್ ಲಗ್ಫುರಿ ಕಾರು ಮಾರುಕಟ್ಟೆಯಲ್ಲಿ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ. ಕಂಪನಿ ಪ್ರಕಾರ ಗಂಟೆಗೆ 190 ಕೀ.ಮೀ. ವೇಗತೆಯಲ್ಲಿ ಚಲಿಸಲಿರುವ ನೂತನ ಬೆಂಝ್ ಪ್ರತಿ ಲೀಟರ್‌ಗೆ 19 ಕೀ.ಮೀ. ಮೈಲೇಜ್ ನೀಡಲಿದೆ.

ನಿಮ್ಮ ಮಾಹಿತಿಗಾಗಿ, ಬೆಂಝ್ ಪೆಟ್ರೋಲ್ ವೆರಿಯಂಟ್ ಕಳೆದ ವರ್ಷವೇ ಲಾಂಚ್ ಆಗಿತ್ತು. ಇದೀಗ ಲಾಂಚ್ ಆಗಿರುವ ಬೆಂಝ್ ಬಿ ಕ್ಲಾಸ್ ಡೀಸೆಲ್ ಕಾರು ಏಕಮಾತ್ರ 'ಸ್ಟೈಲ್' ವೆರಿಯಂಟ್‌ನಲ್ಲಿ ಲಭ್ಯವಿದೆ.

English summary
Mercedes Benz has brought out the less expensive B-Class hatchback for the Indian market. The B-Class diesel, the B180 CDI as its called, is priced at INR 22.6 lakhs (ex-showroom, Mumbai).
Story first published: Thursday, July 11, 2013, 14:05 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark