ಕರ್ನಾಟಕ ಬಸ್ಸುಗಳಿಗೆ ಬಂತು ನೋಡಿ 'ಬ್ಲ್ಯಾಕ್ ಬಾಕ್ಸ್' ತಂತ್ರಜ್ಞಾನ

Posted By:

ವಿಮಾನ ಅಪಘಾತಕ್ಕೊಳಗಾದ ಸಂದರ್ಭದಲ್ಲಿ ಅದಕ್ಕೆ ಕಾರಣ ಕಂಡುಕೊಳ್ಳಲು 'ಬ್ಲ್ಯಾಕ್ ಬಾಕ್ಸ್' (ಕಪ್ಪು ಪೆಟ್ಟಿಗೆ) ಆಳವಡಿಸಲಾಗುತ್ತದೆ. ಇದೀಗ ಇಂತಹದೊಂದು ತಂತ್ರಜ್ಞಾನವನ್ನು ದೇಶದಲ್ಲೇ ಮೊದಲೇ ಬಾರಿಯೆಂಬಂತೆ ಕರ್ನಾಟಕ ಸಾರಿಗೆ ಇಲಾಖೆ ಅಭಿವೃದ್ಧಿಪಡಿಸಿದೆ.

ಕಪ್ಪು ಪೆಟ್ಟಿಗೆ ಮಾದರಿಯಲ್ಲೇ ಕಾರ್ಯ ನಿರ್ವಹಿಸುವ 'ಡ್ರಾಪ್ಸ್' (ಡಿಆರ್‌ಪಿಇಎಸ್- ಡ್ರೈವರ್ ರೆಕಾರ್ಡರ್ ಆ್ಯನ್‌ಲೈಸರ್ ಪ್ರೊಸೆಸರ್ ಎಕ್ಸ್‌ಟ್ರ್ಯಾಕ್ಟರ್ ಸ್ಟಿಸ್ಟಮ್) ಉಪಕರಣವನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಪ್ರಾಯೋಗಿಕವಾಗಿ ಆಳವಡಿಸಿದೆ. ಈ ಮೂಲಕ ಬಸ್ ಸಂಚಾರದ ಸಮಗ್ರ ಮಾಹಿತಿಯನ್ನು ದಾಖಲಿಸಿಕೊಳ್ಳಲಿದ್ದು, ಅಪಘಾತ ಸಂದರ್ಭದ ಕಾರಣಗಳನ್ನು ಪತ್ತೆ ಮಾಡಲು ನೆರವಾಗಲಿದೆ.

ಹಾಗಿದ್ದರೆ ಬನ್ನಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೂತನ ಅವಿಷ್ಕಾರದ ಬಗ್ಗೆ ಫೋಟೊ ಫೀಚರ್ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳಣವೇ...

ಕರ್ನಾಟಕ ಬಸ್ಸುಗಳಿಗೆ ಬಂತು ನೋಡಿ 'ಬ್ಲ್ಯಾಕ್ ಬಾಕ್ಸ್' ತಂತ್ರಜ್ಞಾನ

ಮೊದಲ ಹಂತವಾಗಿ ಡ್ರಾಪ್ಸ್ ಉಪಕರಣವನ್ನು ನಾಲ್ಕು ಬಸ್ಸುಗಳಲ್ಲಿ ಆಳವಡಿಸಲಾಗಿದೆ. ಹುಬ್ಬಳಿಯಿಂದ ಬೊರಿವಿಲಿ, ಚೆನ್ನೈ ಹಾಗೂ ತಿರುಪತಿಗೆ ಹೋಗುವ ವೋಲ್ವೋ ಬಸ್‌ಗಳಲ್ಲಿ ಈ ತಂತ್ರಜ್ಞಾನ ಆಳವಡಿಸಲಾಗಿದೆ.

ಕರ್ನಾಟಕ ಬಸ್ಸುಗಳಿಗೆ ಬಂತು ನೋಡಿ 'ಬ್ಲ್ಯಾಕ್ ಬಾಕ್ಸ್' ತಂತ್ರಜ್ಞಾನ

ಕಪ್ಪು ಪಟ್ಟಿಗೆ ತರಹನೇ ಡ್ರಾಪ್ಸ್ ಉಪಕರಣದಲ್ಲಿ ಹಾರ್ಡ್‌ವೇರ್ ಹಾಗೂ ಸಾಫ್ಟ್‌ವೇರ್‌ಗಳೆಂಬ ಎರಡು ಭಾಗಗಳು ಇರಲಿದೆ. ಹಾರ್ಡ್‌ವೇರ್ ಭಾಗದಲ್ಲಿ ವಿಡಿಯೋ ಕ್ಯಾಮೆರಾ, ಜಿಪಿಎಸ್, ಎಸ್‌ಎಂಎಸ್, ಧ್ವನಿ ಸಂವಾಹಕ, ಜಿಪಿಪಿಎಸ್ ವ್ಯವಸ್ಥೆ ಇರಲಿದೆ. ಹಾಗೆಯೇ ಸಾಫ್ಟ್‌ವೇರ್ ತಂತ್ರಜ್ಞಾನ ಡಾಟಾ ಆನಲೈಸರ್, ಡ್ರೈವ್ ರೆಕಾರ್ಡರ್ ಹಾಗೂ ರಿಮೋಟ್ ಡ್ರೈವ್ ಮಾನಿಟರ್ ಹೊಂದಿರಲಿದೆ.

ಕರ್ನಾಟಕ ಬಸ್ಸುಗಳಿಗೆ ಬಂತು ನೋಡಿ 'ಬ್ಲ್ಯಾಕ್ ಬಾಕ್ಸ್' ತಂತ್ರಜ್ಞಾನ

ಇದಕ್ಕಾಗಿ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಡ್ರಾಪ್ಸ್ ತಂತ್ರಜ್ಞಾನ ಎಷ್ಟು ಉಪಯುಕ್ತ ಅಂದರೆ ವಾಹನದ ಒಳಗಿನ ಶಬ್ದವನ್ನು ನಿಯಂತ್ರಣ ಕೊಠಡಿಯಿಂದ ಆಲಿಸಬಹುದಾಗಿದೆ. ಹಾಗೆಯೇ ಎಸ್‌ಎಸ್ ಮೂಲಕ ಬಸ್ ಪತ್ತೆ ಹಚ್ಚುವಿಕೆ ಸೌಲಭ್ಯವಿದೆ.

ಕರ್ನಾಟಕ ಬಸ್ಸುಗಳಿಗೆ ಬಂತು ನೋಡಿ 'ಬ್ಲ್ಯಾಕ್ ಬಾಕ್ಸ್' ತಂತ್ರಜ್ಞಾನ

ಡ್ರಾಪ್ಸ್ ಉಪಕರಣ ಬಸ್ ಸಂಚರಿಸುವ ವೇಳೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವುದರಿಂದ ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಬಹುದಾಗಿದೆ. ಇದು ಕಾನೂನು ತಜ್ಞರು ಹಾಗೂ ವಿಮಾ ಕಂಪನಿಗಳಿಗೂ ನೆರವಾಗಲಿದೆ.

ಕರ್ನಾಟಕ ಬಸ್ಸುಗಳಿಗೆ ಬಂತು ನೋಡಿ 'ಬ್ಲ್ಯಾಕ್ ಬಾಕ್ಸ್' ತಂತ್ರಜ್ಞಾನ

ಇನ್ನು ಚಾಲಕನ ಸಮೀಪದಲ್ಲೇ ಈ ಉಪಕರಣವನ್ನು ಆಳವಡಿಸಲಾಗುತ್ತಿದ್ದು, 14 ಗಂಟೆ ಕಾರ್ಯಚರಿಸುವ ಸಾಮರ್ಥ್ಯ ಹೊಂದಿದೆ. ಇದೀಗ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಈ ಸಾಧನೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

English summary
North West Karnataka Road Transport Corporation has Experimentally introduced modern technology 'Driver Recorder Analyzer Processor Extractor System'. This technique will monitor bus like black box in airplane.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark