ಭಾರತಕ್ಕೆ ಎಂಟ್ರಿ ಆಗಲಿದೆ ಡಟ್ಸನ್ ಕಾರು

Posted By:
ನಿಸ್ಸಾನ್ ಪೋಷಣೆಯಲ್ಲಿ ಭಾರತಕ್ಕೆ ಭರ್ಜರಿ ರಿ ಎಂಟ್ರಿ ಕೊಡಲಿರುವ ಡಟ್ಸನ್ ಬ್ರಾಂಡ್, ಸದ್ಯದಲ್ಲೇ ದೇಶಕ್ಕೆ ನೂತನ ಕಾರೊಂದನ್ನು ಪರಿಚಯಿಸಲಿದೆ.

ಜುಲೈ 15ರಂದು ನವದಹೆಲಿಯಲ್ಲಿ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಸಂಸ್ಥೆಯ ಮೊದಲ ಹ್ಯಾಚ್‌ಬ್ಯಾಕ್ ಕಾರು ದೇಶದಲ್ಲಿ ಅನಾವರಣಗೊಳ್ಳಲಿದೆ. ಮೂಲಗಳ ಪ್ರಕಾರ ರೆನೊ-ನಿಸ್ಸಾನ್ ಸಿಇಒ ಕಾರ್ಲೊಸ್ ಘೋಸ್ ಹೊಸ ಮಾದರಿಯನ್ನು ಅನಾವರಣ ಮಾಡಲಿದ್ದಾರೆ.

ಇದು 32 ವರ್ಷಗಳ ಡಟ್ಸನ್‌ನಿಂದ ಪ್ರಸ್ತುತವಾಗಲಿರುವ ಮೊದಲ ಹ್ಯಾಚ್‌ಬ್ಯಾಕ್ ಮಾಡೆಲ್ ಆಗಿದೆ. ಹಾಗೆಯೇ 2014 ಮಧ್ಯಂತರ ಅವಧಿಯಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿದೆ. ಇದರ ಜತೆಗೆ ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ ಹಾಗೂ ರಷ್ಯಾದಲ್ಲೂ ಪರಿಚಯವಾಗಲಿದೆ.

ಸ್ಪರ್ಧಾತ್ಮಕ ನಾಲ್ಕು ಲಕ್ಷ ರು.ಗಳ ಅಸುಪಾಸಿನಲ್ಲಿ ಆಗಮನವಾಗಲಿರುವುದರಿಂದ ಹ್ಯುಂಡೈಗಳಂತಹ ನಿಕಟ ಸ್ಪರ್ಧಿಗಳಿಗೆ ಕಠಿಣ ಪೈಪೋಟಿ ನೀಡುವ ಸಾಧ್ಯತೆಯಿದೆ.

English summary
The Datsun brand, which is set to make a grand comeback under Nissan's tutelage will get its world premiere in India. The first hatchback wearing the Datsun badge will be unveiled at a special event in New Delhi.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark