ಬಿಎಂಡಬ್ಲ್ಯು‌ನಿಂದ ಭಾರತಕ್ಕೆ ರೋಲ್ಸ್ ರಾಯ್ಸ್ ಲಗ್ಷುರಿ ಎಸ್‌ಯುವಿ?

By Nagaraja

ಎಲ್ಲವೂ ಅಂದುಕೊಂಡತೆ ನಡೆದ್ದಲ್ಲಿ ದೇಶದ ವಾಹನ ಪ್ರಿಯರು ಕಾತರದಿಂದ ಕಾಯುತ್ತಿರುವ ಇನ್ನೊಂದು ಐಷಾರಾಮಿ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಭಾರತೀಯ ರಸ್ತೆ ಪ್ರವೇಶಿಸಲಿದೆ. ಹೌದು, ಬ್ರಿಟನ್ ಮೂಲದ ಐಕಾನಿಕ್ ಕಾರು ಸಂಸ್ಥೆಯಾದ ರೋಲ್ಸ್ ರಾಯ್ಸ್ ಮಾಲಿಕತ್ವ ಹೊಂದಿರುವ ಬಿಎಂಡಬ್ಲ್ಯು, ದೇಶಕ್ಕೆ ಈ ಲಗ್ಷುರಿ ಎಸ್‌ಯುವಿ ಪರಿಚಯಿಸುವ ಇರಾದೆ ಹೊಂದಿರುವುದಾಗಿ ತಿಳಿಸಿದೆ.

ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಮತ್ತು ಆಡಿಗಳಂತಹ ಪ್ರತಿಸ್ಫರ್ಧಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬಿಎಂಡಬ್ಲ್ಯು ಹೊಸ ತಂತ್ರಗಳನ್ನು ಅನುಸರಿಸುವ ಯೋಜನೆಯಲ್ಲಿದೆ. ಈ ನಿಟ್ಟಿನಲ್ಲಿ ರೋಲ್ಸ್ ರಾಯ್ಸ್ ಎಸ್‌ಯುವಿ ದೇಶದ ಗ್ರಾಹಕರಿಗೆ ವಿನೂತನ ಅನುಭವ ನೀಡಲಿದೆ.


ಈಗಾಗಲೇ ಬಿಎಂಡಬ್ಲ್ಯು ಎಕ್ಸ್5ಗಿಂತಲೂ ಬೆಂಝ್ ಎಂ ಕ್ಲಾಸ್ ಹಾಗೆಯೇ ಬಿಎಂಡಬ್ಲ್ಯು ಲಗ್ಷುರಿ ಎಸ್‌ಯುವಿಗಿಂತಲೂ ಆಡಿ ಕ್ಯೂ7 ಉತ್ತಮ ಮಾರಾಟವನ್ನು ಕಾಯ್ದುಕೊಂಡಿದೆ. ಈ ನಿಟ್ಟಿನಲ್ಲಿ ಜರ್ಮನಿ ಮೂಲದ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು ತನ್ನ ಯೋಜನೆಯನ್ನು ಪುನರಾವಲೋಕನ ಮಾಡುವುದರಲ್ಲಿ ಮಗ್ನವಾಗಿದೆ.

ನೂತನ ಎಸ್‌ಯುವಿ ರೇಖಾಚಿತ್ರ ಬಿಡಿಸುವುದರಲ್ಲಿ ಕಾರ್ಯ ಮಗ್ನವಾಗಿರುವ ರೋಲ್ಸ್ ರಾಯ್ಸ್, ಉತ್ಪದನಾ ವರ್ಷನ್ ಪಡೆದುಕೊಳ್ಳುವುದರತ್ತ ಗಮನವಹಿಸುತ್ತಿದೆ. ಒಟ್ಟಿನಲ್ಲಿ ಐಷಾರಾಮಿ ಮಾರುಕಟ್ಟೆಯಲ್ಲಿ ಇದು ಹೊಸ ಪೈಪೋಟಿಗೆ ಎಡೆಮಾಡಿಕೊಡಲಿದೆ.

Most Read Articles

Kannada
English summary
On the other hand is BMW owned British luxury brand Rolls Royce, which, though has no major threat, needs to expand to continue on its growth trajectory. And the luxury SUV segment is one that can help Rolls Royce make some substantial revenue.
Story first published: Saturday, September 14, 2013, 12:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X