ಸ್ವಿಫ್ಟ್ ಐತಿಹಾಸಿಕ ಸಾಧನೆ; 30 ಲಕ್ಷ ಸೇಲ್

By Nagaraja

ಕಳೆದ ಒಂಬತ್ತು ವರ್ಷಗಳೆಡೆ ಅತ್ಯಮೋಘ ಮಾರಾಟ ದಾಖಲಿಸಿಕೊಂಡಿರುವ ಮಾರುತಿ ಸುಜುಕಿ ಸ್ವಿಫ್ಟ್ 30 ಲಕ್ಷ ಯುನಿಟ್‌ ಸೇಲ್ಸ್ ಗಡಿ ದಾಟುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಸುಜುಕಿ ಸ್ವಿಫ್ಟ್ ಜಾಗತಿಕ ಮಾರಾಟದಲ್ಲಿ ಈ ಅಂಕಿಅಂಶ ಕಂಡುಬಂದಿದ್ದು, ಇದರ ಅರ್ಧದಷ್ಟು ಪಾಲು ಭಾರತದಿಂದಾಗಿದೆ.

ಆಕರ್ಷಕ ವಿನ್ಯಾಸ, ಹ್ಯಾಂಡ್ಲಿಂಗ್, ನಿರ್ವಹಣೆ ಹಾಗೂ ಸ್ಪರ್ಧಾತ್ಮಕ ದರದಲ್ಲಿ ಲಭಿಸುತ್ತಿರುವುದರಿಂದ ವಿಶ್ವದೆಲ್ಲೆಡೆ ಮನ್ನಣೆ ಗಳಿಸಲು ಸ್ವಿಫ್ಟ್‌ಗೆ ಸಾಧ್ಯತೆಯಿದೆ. ಅಲ್ಲದೆ ಭಾರತದಲ್ಲಿ 2012ನೇ ಸಾಲಿನಲ್ಲಿ ಮಾರಾಟವಾದ ಕಾರುಗಳ ಪೈಕಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿತ್ತು.

ಜಪಾನ್ ಕಾರು ತಯಾರಕ ಸಂಸ್ಥೆಯಾದ ಸುಜುಕಿ ಮೋಟಾರ್ ಕಾರ್ಪೋರೇಷನ್‌ನಿಂದ 2004ನೇ ಇಸವಿಯಲ್ಲಿ ಮೊದಲ ಬಾರಿಗೆ ಸ್ವಿಫ್ಟ್ ಬಿಡುಗಡೆಯಾಗಿತ್ತು. ಆ ಬಳಿಕ 2005ನೇ ಇಸವಿಯಲ್ಲಿ ಮಾರುತಿ ಸುಜುಕಿ ಮುಖಾಂತರ ಭಾರತ ಮಾರುಕಟ್ಟೆಗೆ ಪ್ರವೇಶವಾಗಿತ್ತು.

ಪ್ರಸ್ತುತ 120 ದೇಶಗಳಲ್ಲಿ ಸ್ವಿಫ್ಟ್ ಮಾರಾಟವಾಗುತ್ತಿದೆ. ಯುರೋಪ್ ಮಾರುಕಟ್ಟೆಗಳಲ್ಲೂ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿರುವುದು ಸ್ವಿಫ್ಟ್ ಗಮನಾರ್ಹ ಸಾಧನೆಯಾಗಿದೆ.

ಈ ಮೂರು ಮಿಲಿಯನ್ ಸೇಲ್ಸ್ ಪೈಕಿ ದೇಶದಲ್ಲಿ ಶೇಕಡಾ 45ರಷ್ಚು ದಾಖಲಾಗಿದೆ. ಉಳಿದಂತೆ ತವರೂರಾದ ಜಪಾನ್‌ನಲ್ಲಿ 13% ಹಾಗೂ ಯುರೋಪ್‌ನಲ್ಲಿ 23% ಮಾರಾಟ ಕಂಡುಬಂದಿದೆ.

ದೇಶದಲ್ಲಿ 4.5ರಿಂದ 6.7 ಲಕ್ಷ ರು.ಗಳ ವರೆಗೆ ಮಾರುತಿ ಸ್ವಿಫ್ಟ್ ದರವಿದೆ. ಹಾಗೆಯೇ ಪ್ರತಿ ತಿಂಗಳಲ್ಲಿ ಸರಾಸರಿ 17 ಸಾವಿರದಷ್ಟು ಸ್ವಿಫ್ಟ್ ಯುನಿಟ್‌ಗಳು ದೇಶದಲ್ಲಿ ಮಾರಾಟವಾಗುತ್ತಿದೆ. 2011ರಲ್ಲಿ ಹೊಸ ವರ್ಷನ್ ಬಿಡುಗಡೆಯಾಗುವುದರೊಂದಿಗೆ ಬೇಡಿಕೆ ಗಣನೀಯವಾಗಿ ವರ್ಧಿಸಿತ್ತು. ಈ ಮೂಲಕ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಡೀಸೆಲ್ ಕಾರು ಎಂದೆನಿಸಿಕೊಂಡಿತ್ತು.

Most Read Articles

Kannada
English summary
The Suzuki Swift's latest achievement is that it's sales have crossed the coveted 3 million unit mark. Suzuki Motor Corporation has announced that cumulative worldwide sales of the Swift is now over 3 million units since its launch in 2004.
Story first published: Friday, February 1, 2013, 13:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X