ಟಾಟಾದಿಂದ ನೂತನ ಕಾರು ಫ್ಲಾಟ್‌ಫಾರ್ಮ್ ಅಭಿವೃದ್ಧಿ

Written By:

ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ತನ್ನದೇ ಆದ ನೂತನ ಕಾರು ಫ್ಲಾಟ್‌ಫಾರ್ಮ್ ಅಭಿವೃದ್ಧಿಪಡಿಸಲಿದೆ. ಇದು ಮುಂದುವರಿದ ಮ್ಯಾಡುಲರ್ ಫ್ಲಾಟ್‌ಫಾರ್ಮ್ (ಎಎಂಪಿ) ಎಂದು ಅರಿಯಲ್ಪಡಲಿದ್ದು, ಮುಂದಿನ ಜನಾಂಗದ ಕಾರುಗಳನ್ನು ಉತ್ಪಾದಿಸಲು ನೆರವಾಗಲಿದೆ.

ಈ ಮೂಲಕ ಫೋಕ್ಸ್‌ವ್ಯಾಗನ್, ರೆನೊ ನಿಸ್ಸಾನ್ ಹಾದಿಯನ್ನು ಟಾಟಾ ಅನುಸರಿಸಲಿದೆ. ನೂತನ ಮ್ಯಾಡುಲರ್ ಕಾರು ಫ್ಲಾಟ್‌ಫಾರ್ಮ್ ನಿರ್ಮಾಣ ಮಾಡುವುದರಿಂದ ಒಂದೇ ತಲಹದಿಯಲ್ಲಿ ವಿಭಿನ್ನ ವೆರಿಯಂಟ್‌ಗಳ ಕಾರು ಉತ್ಪಾದಿಸಲು ಟಾಟಾಗೆ ನೆರವಾಗಲಿದೆ.

ಟಾಟಾ ಮೋಟಾರ್ಸ್ ನೂತನ ಕಾರುಗಳು 2015ರ ಬಳಿಕ ಲಾಂಚ್ ಆಗಲಿದೆ. ಅಲ್ಲಿಯ ವರೆಗೆ ಪರಿಷ್ಕೃತ ಫೇಸ್‌ಲಿಫ್ಟ್ ಆವೃತ್ತಿಗಳು ಮುಂದುವರಿಯಲಿದೆ. ನೂತನ ಅಡ್ವನ್ಸಾಡ್ ಮ್ಯಾಡುಲರ್, ನೂತನ ಹ್ಯಾಚ್‌ಬ್ಯಾಕ್, ಸೆಡಾನ್ ಮತ್ತು ಕಾಂಪಾಕ್ಟ್ ಎಸ್‌ಯುವಿ ಕಾರುಗಳನ್ನು ಉತ್ಪಾದಿಸಲು ನೆರವಾಗಲಿದೆ.

ಇದರ ಜತೆಗೆ ಬೃಹತ್ ಎಸ್‌ಯುವಿಗಳನ್ನು ಒಂದೇ ಬಾಡಿಯ ಚಾಸೀಸ್ ತಲಹದಿಗೆ ತರುವ ಯೋಜನೆಯನ್ನು ಟಾಟಾ ಮಾಡಲಾಗುತ್ತದೆ. ಇದು ಕೂಡಾ ವೆಚ್ಚ ಕಡಿತಗೊಳಿಸುವ ಭಾಗವಾಗಿದೆ.

English summary
Tata Motors has major plans to develop its very own modular platform, called Advanced Modular Platform (AMP) that will support its future vehicle lineup post 2015.
Story first published: Friday, August 30, 2013, 10:59 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark