ನಿಜಕ್ಕೂ ಹೋಂಡಾ ಅಮೇಜ್‌ಗಿಂತ ಟಾಟಾ ಮಾಂಝಾ ಶ್ರೇಷ್ಠ ಕಾರೇ?

Written By:

ಕೆಲವೇ ದಿನಗಳ ಹಿಂದೆಯಷ್ಟೇ ಜಪಾನ್ ವಾಹನ ತಯಾರಕ ಕಂಪನಿ ಹೋಂಡಾದಿಂದ ದೇಶದಲ್ಲಿ ಬಿಡುಗಡೆಯಾದ ಮೊದಲ ಡೀಸೆಲ್ ಕಾರು ಅಮೇಜ್ ಯಶಸ್ಸಿನತ್ತ ದಿಟ್ಟ ಹೆಜ್ಜೆಯನ್ನಿಡುತ್ತಿದೆ.

ಈ ನಡುವೆ ಹೋಂಡಾ ಪ್ರತಿಸ್ಪರ್ಧಿಯಾದ ಟಾಟಾ ಮೋಟಾರ್ಸ್, ತನ್ನ ವೆಬ್‌ಸೈಟ್‌ನಲ್ಲಿ ಅಮೇಜ್‌ಗಿಂತ ಮಾಂಝಾ ಬೆಸ್ಟ್ ಎಂದು ನಮೂದಿಸಿರುವುದು ಗ್ರಾಹಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಇದು ಟಾಟಾ ಮೋಟಾರ್ಸ್ ಅನುಸರಿಸುತ್ತಿರುವ ಮಾರಾಟ ತಂತ್ರವೇ ಅಥವಾ ನಿಜಕ್ಕೂ ಅಮೇಜ್‌ಗಿಂತ ಮಾಂಝಾ ಶ್ರೇಷ್ಠವೇ ಎಂಬುದು ಕುತೂಹಲಕ್ಕೆಡೆ ಮಾಡಿದೆ.

ಎರಡು ಕಾರುಗಳ ನಡುವಣ ಹೋಲಿಕೆಯ ದೊಡ್ಡ ಪಟ್ಟಿಯನ್ನೇ ಟಾಟಾ ಬಿಡುಗಡೆಗೊಳಿಸಿದೆ. ಕೆಳಗಡೆ ಕೊಡಲಾಗಿರುವ ಚಿತ್ರದಲ್ಲಿ ತೋರಿಸಿರುವಂತೆಯೇ ದರ ಮಾಹಿತಿ ಹಾಗೂ ಎಂಜಿನ್‌ನಿಂದ ಹಿಡಿದು ಕಾರಿನ ವೈಶಿಷ್ಟ್ಯಗಳ ಬಗ್ಗೆ ವಿವರಣೆ ಕೊಡಲಾಗಿದೆ.

ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ ಟಾಟಾದಿಂದ ಇಂತಹದೊಂದು ನಡೆ ಕಂಡುಬರುತ್ತಿರುವುದು. ಈ ಹಿಂದೆಯೇ ಮಾರುತಿ ಸ್ವಿಫ್ಟ್ ಜತೆ ವಿಸ್ಟಾ ಹಾಗೂ ವ್ಯಾಗನಾರ್ ಜತೆ ಟಾಟಾ ಇಂಡಿಕಾವನ್ನು ಹೋಲಿಸಲಾಗಿತ್ತು.

Story first published: Wednesday, April 24, 2013, 16:41 [IST]
Please Wait while comments are loading...

Latest Photos