ಬೆಂಗ್ಳೂರಲ್ಲಿ ಟಾಟಾ ಮೋಟಾರ್ಸ್ ಹೈಟೆಕ್ ಶೋ ರೂಂ ಆರಂಭ
ವಾಗ ಏನೇ ವಿಷಯ ತೆರೆದು ನೋಡಿದರೂ ಅಲ್ಲಿ ಏನೆಲ್ಲ ಆಡಂಬರದ ಸೌಲಭ್ಯಗಳು ಲಭ್ಯವಿರುತ್ತದೆ ಎಂಬುದರ ಬಗ್ಗೆ ಮೊದಲ ತಿಳಿದುಕೊಳ್ಳುವುದು ಪ್ರತಿಯೊಬ್ಬರ ಆಸಕ್ತಿಯಾಗಿರುತ್ತದೆ. ಇದರಿಂದ ಕಾರು ಲೋಕ ಕೂಡಾ ಹೊರತಾಗಿಲ್ಲ. ಇದರಂತೆ ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ನಮ್ಮ ಬೆಂಗಳೂರಿನಲ್ಲಿ ಹೈಟೆಕ್ ಪ್ರದರ್ಶನದ ಮಳಿಗೆಯೊಂದನ್ನು ತೆರೆದುಕೊಂಡಿದೆ.
ಗ್ರಾಹಕರಿಗೆ ಐಷಾರಾಮಿ ಮಟ್ಟದ ಕಾರು ಪ್ರದರ್ಶನ ಮಳಿಗೆಯ ಅನುಭವ ನೀಡುವುದು ಟಾಟಾ ಮೋಟಾರ್ಸ್ ಗುರಿಯಾಗಿದೆ. ಇದು 3-ಎಸ್ ಒಳಗೊಂಡಿರುತ್ತದೆ. ಅಂದರೆ ಒಂದೇ ಜಾಗದಲ್ಲಿ ಸೇಲ್ಸ್, ಸರ್ವೀಸ್ ಮತ್ತು ಸ್ಪೇರ್ ಪಾರ್ಟ್ಸ್ ಸೇವೆ ಒದಗಿಸಲಾಗುತ್ತಿದೆ.

ಟಾಟಾ ಮೋಟಾರ್ಸ್ ಹೈಟೆಕ್ ಶೋ ರೂಂ ವೈಶಿಷ್ಟ್ಯಗಳು
- ಗೋಡೆಯಲ್ಲಿ ಕಾರು ವೈಶಿಷ್ಟ್ಯಗಳನ್ನು ಬಿಂಬಿಸುವ ವೀಡಿಯೊ ಪ್ರಸರಣ
- ವೈ-ಫೈ ಕನೆಕ್ಷನ್
- ಐಷಾರಾಮಿ ಗ್ರಾಹಕ ವಿರಾಮ ಕೊಠಡಿ
- ಗ್ರಾಹಕರ ನಿರ್ವಹಣೆಗಾಗಿ ವಿಶೇಷ ತರಬೇತಿ ಪಡೆದ ಸಿಬ್ಬಂದಿಗಳು
- ಬ್ರ್ಯಾಂಡೆಡ್ ಕಾರು ಆಕ್ಸೆಸರಿಗಳ ಜತೆ ಲೈಫ್‌ಸ್ಟೈಲ್ ಮಾರಾಟ ವಸ್ತುಗಳು
- ಕೆಫೆ ಕಾರ್ನರ್


Click it and Unblock the Notifications









