ಕೆಎಸ್‌ಆರ್‌ಟಿಸಿ 'ಪ್ರಯಾಣೋತ್ಸವ' ಡಬಲ್ ಧಮಾಕಾ

Posted By:

ಪ್ರಯಾಣಿಕ ಸ್ನೇಹಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಎಂದೂ ಒಂದು ಹೆಜ್ಜೆ ಮುಂದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಮಗ (ಕೆಎಸ್‌ಆರ್‌ಟಿಸಿ), ಇದೀಗ ಮತ್ತೆ ಪ್ರಮಾಣಿಕರಿಗಾಗಿ ಮತ್ತೊಂದು ವಿಶೇಷ 'ಪ್ರಯಾಣೋತ್ಸವ' ಯೋಜನೆ ಜಾರಿಗೊಳಿಸಿದೆ.

ಕೆಎಸ್‌ಆರ್‌ಟಿಸಿ ಸೇವೆಯಲ್ಲಿ ನಿರಂತರವಾಗಿ ಪ್ರಯಾಣಿಸುವವರಿಗೆ ಇದರ ಪ್ರಯೋಜನ ಪಡೆಯಬಹುದಾಗಿದೆ. "ಹೆಚ್ಚು ಪ್ರಯಾಣಿಸಿ, ಹೆಚ್ಚು ಉಳಿಸಿ" ಎಂಬ ಟ್ಯಾಗ್ ಅಡಿಯಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ.

ಈ ಮುಖಾಂತರ ಪ್ರಯಾಣಿಕರು ಕೆಎಸ್‌ಆರ್‌ಟಿಸಿಯಲ್ಲಿ ಜುಲೈ 15ರಿಂದ ಸೆಪ್ಟೆಂಬರ್ 30ರ ವರೆಗೆ ಕನಿಷ್ಠ ನಾಲ್ಕು ಬಾರಿ ಟಿಕೆಟ್ ಬುಕ್ ಮಾಡಿದ್ದಲ್ಲಿ, ನಾಲ್ಕನೆಯ ಟಿಕೆಟ್‌ನಲ್ಲಿ ಶೇಕಡಾ 30ರಷ್ಟು ರಿಯಾಯಿತಿ ದರ ನೀಡಲಾಗುತ್ತದೆ. ಈ ಮೂಲಕ ನಿಗಮವು ಮತ್ತಷ್ಟು ಪ್ರಯಾಣಿಕ ಸ್ನೇಹಿ ಸೇವೆಗೆ ಮುಂದಾಗಿದೆ. ಯೋಜನೆಯ ಲಾಭ ಪಡೆಯಲು ಪ್ರಯಾಣಿಕರು ಕೆಳಕಂಡ ನಿಬಂಧನೆಗಳಿಗೆ ಒಳಪಟ್ಟಿರಬೇಕು.

ನಿಬಂಧನೆಗಳು

ನಿಬಂಧನೆಗಳು

* ಒಂದೇ ಬಳಕೆದಾರ ಐಡಿಯಲ್ಲಿ (ಗುರುತು) ಎಲ್ಲ ನಾಲ್ಕು ಪ್ರಯಾಣದ 'ಇ ಟಿಕೆಟ್‌'ಗಳನ್ನು ಬುಕ್ ಮಾಡಿರಬೇಕು.

* ಈ ಯೋಜನೆಯು ನಿಗಮದ ವೆಬ್‌ಸೈಟ್‌ನಲ್ಲಿ ಮಾಡಲಾಗುವ 'ಇ ಬುಕ್ಕಿಂಗ್' ಹಾಗೂ 'ಮೊಬೈಲ್ ಬುಕ್ಕಿಂಗ್' ಗ್ರಾಹಕರಿಗೆ ಅನ್ವಯವಾಗುತ್ತದೆ.

ನಿಬಂಧನೆಗಳು

ನಿಬಂಧನೆಗಳು

* ಪ್ರಯಾಣಿಕರು ಕೆಎಸ್‌ಆರ್‌ಟಿಸಿಯಲ್ಲಿ 2013 ಜುಲೈ 15ರಿಂದ 2013 ಸೆಪ್ಟೆಂಬರ್ 30ರ ನಡುವೆ ಸಂಚರಿಸಿರತಕ್ಕದ್ದು.

* ನಾಲ್ಕನೇ ಟಿಕೆಟ್‌ಗೆ ಈ ಆಫರ್ ಅನ್ವಯವಾಗುವುದು. ಅಲ್ಲದೆ ಟಿಕೆಟ್ ರದ್ದುಗೊಳಿಸಿರಬಾರದು.

ನಿಬಂಧನೆಗಳು

ನಿಬಂಧನೆಗಳು

* ಈ ಎಲ್ಲ ಟಿಕೆಟುಗಳು ಸಂಚರಿಸಲು ಯೋಗ್ಯವಾದ್ದಲ್ಲಿ ಮಾತ್ರ ರಿಯಾಯಿತಿ ದರಕ್ಕೆ ಅರ್ಹವಾಗಿರುವುದು.

* ಸದರಿ ಸೇವೆಯು ನಿಗಮನದಿಂದ ಕಾರ್ಯಾಚರಣೆಯಾಗುವ ಎಲ್ಲ ಸೇವೆ ಹಾಗೂ ಮಾರ್ಗಗಳಲ್ಲಿ ಲಭ್ಯವಿದೆ.

ನಿಬಂಧನೆಗಳು

ನಿಬಂಧನೆಗಳು

* ಪ್ರಸ್ತುತ ಯೋಜನೆಯು ಇತರ ಯಾವುದೇ ಕೆಎಸ್‌ಆರ್‌ಟಿಸಿ ಡಿಸ್ಕೌಂಡ್ ಅಥವಾ ಆಫರ್‌ಗೆ ಅನ್ವಯವಾಗುವುದಿಲ್ಲ.

* ಬುಕ್ಕಿಂಗ್ ಮಾಡಿದ ಯಾವುದೇ ಟಿಕೆಟನ್ನು ನಂತರ ರದ್ದುಗೊಳಿಸಿದ್ದಲ್ಲಿ, ರಿಯಾಯಿತಿ ನೀಡಿರುವುದನ್ನು ವಾಪಸ್ ಪಡೆಯಲಾಗುವುದು.

ನಿಬಂಧನೆಗಳು

ನಿಬಂಧನೆಗಳು

ಒಟ್ಟಾರೆಯಾಗಿ ಪ್ರಯಾಣಿಕ ಜುಲೈ 15ರಿಂದ ಸೆಪ್ಟೆಂಬರ್30ರ ಅವಧಿಯಲ್ಲಿ ನಿರಂತರವಾಗಿ ನಾಲ್ಕು ಟಿಕೆಟುಗಳನ್ನು ಬುಕ್ಕಿಂಗ್ ಮಾಡಿರುವುದನ್ನು ಖಾತ್ರಿಪಡಿಸಬೇಕಾಗುತ್ತದೆ.

ಬೀಟ್ ದಿ ವಿಕೆಂಡ್ ರಷ್

ಇನ್ನು ವಾರಂತ್ಯದಲ್ಲಿ ಪ್ರಯಾಣದೊತ್ತಡ ನಿವಾರಿಸುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಮತ್ತೊಂದು ಯೋಜನೆ ಜಾರಿಗೊಳಿಸಿದೆ. ಪ್ರಯಾಣೋತ್ಸವ 'ಬೀಟ್ ದಿ ವಿಕೆಂಡ್ ರಷ್' ಸ್ಕೀಮ್ ಮುಖಾಂತರ ಪ್ರಯಾಣಿಕರು ಮಂಗಳವಾರದಿಂದ ಗುರುವಾರದ ವರೆಗೆ ಮುಂಗಡ ಟಿಕೆಟ್ ಕಾಯ್ದಿರಿಸಿದ್ದಲ್ಲಿ ಶೇಕಡಾ 10ರಷ್ಟು ರಿಯಾಯಿತಿ ಪಡೆಯಬಹುದು.

ನಿಬಂಧನೆಗಳು

ನಿಬಂಧನೆಗಳು

* ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಮಾಡಿದ್ದಲ್ಲಿ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

*ನಿಗಮದಿಂದ ಕಾರ್ಯಾಚರಣೆಯಾಗುವ ಎಲ್ಲಾ ಸೇವೆ ಹಾಗೂ ಮಾರ್ಗಗಳಲ್ಲಿ ಆಫರ್ ಲಭ್ಯವಿದೆ.

ನಿಬಂಧನೆಗಳು

ನಿಬಂಧನೆಗಳು

* ಇದರ ಲಾಭ ಪಡೆಯಲು ಮಂಗಳವಾರ '0' ಗಂಟೆಯಿಂದ ತೊಡಗಿ ಗುರುವಾರ ಮಧ್ಯರಾತ್ರಿ 23.59 ಗಂಟೆಯೊಳಗೆ ಟಿಕೆಟ್ ಬುಕ್ಕಿಂಗ್ ಮಾಡಿರತಕ್ಕದ್ದು.

* ಪ್ರಸ್ತುತ ಆಫರ್ ಕೂಡಾ 2013 ಜುಲೈ 15ರಿಂದ 2013 ಸೆಪ್ಟೆಂಬರ್ 30ರ ವರೆಗೆ ಲಭ್ಯವಿರಲಿದೆ.

ಈ ದಿನಗಳನ್ನು ಹೊರತುಪಡಿಸಿ...

ಈ ದಿನಗಳನ್ನು ಹೊರತುಪಡಿಸಿ...

ಆದರೆ ಕೆಳಗೆ ನಮೂದಿಸಿದ ದಿನಾಂಕಗಳಲ್ಲಿ ಈ ಆಫರ್ ಅನ್ವಯವಾಗುವುದಿಲ್ಲ.

8-8-2013 ಗುರುವಾರ,

14-8-2013 ಬುಧವಾರ,

15-8-2013 ಗುರುವಾರ

ಕೆಎಸ್‌ಆರ್‌ಟಿಸಿ 'ಪ್ರಯಾಣೋತ್ಸವ' ಡಬಲ್ ಧಮಾಕಾ

ಈ ಮೂಲಕ ದೇಶದ ನಂಬರ್ ಬಸ್ ಸಂಸ್ಥೆಯಾದ ಕೆಎಸ್‌ಆರ್‌ಟಿಸಿ ಸುರಕ್ಷಿತ ಪ್ರಯಾಣವನ್ನು ಖಾತ್ರಿಪಡಿಸುತ್ತಿದ್ದು, ನಿರಂತರವಾಗಿ ಪ್ರಯಾಣಿಕ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.

ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್ http://www.ksrtc.in/site/ ಹ್ಯಾಪಿ ಜರ್ನಿ

English summary
KSRTC being forefront in adopting commuter-friendly measures is introducing a special benefit offer to reward frequently traveling commuters. To reward the frequent traveler, "Prayanothsava - Travel More, Save More" scheme is introduced. This offers 30%discount for the 4th travel with KSRTC.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more