ತಮಿಳುನಾಡು ವೋಲ್ವೋ ಬಸ್ಸುಗಳಿಗೂ ಸುರಕ್ಷತಾ ಮಾನದಂಡ

Written By:

ಕರ್ನಾಟಕದ ಬಳಿಕ ತಮಿಳುನಾಡಿನಲ್ಲೂ ವೋಲ್ವೋ ಬಸ್ಸುಗಳು ಸುರಕ್ಷತಾ ಮಾನದಂಡಗಳನ್ನು ಅನುಸರಿಸಲು ಸೂಚಿಸಲಾಗಿದೆ. ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ಪ್ರತಿನಿಧಿಗಳೊಂದಿಗೆ ನಡೆಸಿರುವ ಮಾತುಕತೆಯ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಇತ್ತೀಚೆಗಷ್ಟೇ ಆಂಧ್ರ ಪ್ರದೇಶದ ಹಾವೇರಿ ಹಾಗೂ ಕರ್ನಾಟಕದ ಹಾವೇರಿಗಳಲ್ಲಿ ನಡೆದ ವೋಲ್ವೋ ಬಸ್ ದುರಂತದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

To Follow DriveSpark On Facebook, Click The Like Button
Volvo Buses

ಏನೆಲ್ಲ ಸುರಕ್ಷತಾ ಮಾನದಂಡಗಳಿರುತ್ತವೆ?

  • ವಿಮಾನಗಳಲ್ಲಿರುವ ಬ್ಲ್ಯಾಕ್ ಬಾಕ್ಸ್‌ಗೆ ಸಮಾನವಾದ ಆಗ್ನಿ ನಿರೋಧಕ ಎಲೆಕ್ಟ್ರಾನಿಕ್ ರೆಕಾರ್ಡರ್,
  • ಸ್ಪೀಡ್ ಗವರ್ನರ್, ಗರಿಷ್ಠ ವೇಗತೆ 85 kmph,
  • ಸ್ಪೋಕ್ ಡಿಟೆಕ್ಟರ್ಸ್,
  • ಎಲ್ಲ ಗಾಜುಗಳು ಒಡೆಯುವಂತಿರಬೇಕು (ಈಗಿರುವ ಪ್ರಕಾರ ತುರ್ತು ಕಿಟಕಿಗಳು ಮಾತ್ರ ಒಡೆಯಲು ಸಾಧ್ಯ.)
  • ಕಿಟಕಿ ಒಡೆಯುವ ಸುತ್ತಿಗೆಗಳ ಸಂಖ್ಯೆ ನಾಲ್ಕರಿಂದ ಎಂಟಕ್ಕೆ ಏರಿಕೆ.
  • ತುರ್ತು ನಿರ್ಗಮನ ಕಡೆಗೆ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡುವ ರೇಡಿಯಂ ಸ್ಟಿಕ್ಕರುಗಳ ಬಳಕೆ.

ಇದರ ಜತೆಗೆ ವೋಲ್ವೋ ಚಾಲಕರು ನಿರಂತರವಾಗಿ 150 ಕೀ.ಮೀ.ಕ್ಕಿಂತಲೂ ಹೆಚ್ಚು ದೂರ ವಾಹನ ಚಲಾಯಿಸಬಾರದೆಂಬ ನಿಯಮವನ್ನು ಜಾರಿಗೊಳಸಲಾಗುವುದು. ಹಾಗೆಯೇ ಬಸ್ ಪಯಣ ಆರಂಭಕ್ಕೂ ಮುನ್ನ ಸುರಕ್ಷತೆಯ ಕುರಿತು ವೀಡಿಯೋ ಪ್ಲೇ ಮಾಡಲಾಗುವುದು. ಜತೆಗೆ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಕೈಪಿಡಿಯನ್ನು ಹಂಚಲಾಗುವುದು.

English summary
New safety features will soon be put in place in all Volvo buses in Tamil Nadu. The decision was taken post a meeting held between the Tamil Nadu state transport officials and representatives from Volvo on Thursday.
Story first published: Saturday, November 30, 2013, 13:00 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark