ದಟ್ಸನ್ ಸಣ್ಣ ಕಾರು 3 ಲಕ್ಷ ರು.ಗಳಲ್ಲಿ ಲಭ್ಯ?

Written By:
ನಿಮಗೆಲ್ಲರಿಗೂ ತಿಳಿದಿರುವ ಹಾಗೆಯೇ ಕಳೆದ ದಿನವಷ್ಟೇ 3.5 ಲಕ್ಷ ರು.ಗಳಿಗೆ ನೂತನ ಮೈಕ್ರಾ ಆಕ್ಟಿವ್ ಕಾರನ್ನು ಬಿಡುಗಡೆಗೊಳಿಸಿದ್ದ ನಿಸ್ಸಾನ್, ಆಟೋ ಜಗತ್ತನ್ನು ಆಶ್ಚರ್ಯಚಕಿತಗೊಳಿಸಿತ್ತು.

ಇನ್ನು ಸ್ವಲ್ಪ ದಿನದ ಹಿಂದಿನ ಸುದ್ದಿಯನ್ನು ತೆಗೆದು ನೋಡಿದರೆ ನಿಸ್ಸಾನ್ ಮುಂದಾಳತ್ವದಲ್ಲಿ ಡಟ್ಸನ್ ಭಾರತಕ್ಕೆ ರಿ ಎಂಟ್ರಿ ಕೊಡುವ ವಾರ್ತೆ ಭಾರಿ ಪ್ರಚಾರ ಗಿಟ್ಟಿಸಿಕೊಂಡಿತ್ತು. ನಿಸ್ಸಾನ್ ಆಕ್ಟಿವ್ ತರಹನೇ ಡಟ್ಸನ್ ಕೂಡಾ ಕೆ2 ಎಂಬ ಸಣ್ಣ ಕಾರನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದ್ದು, ಇದಕ್ಕೆ ಜುಲೈ 15ರಂದು ವೇದಿಕೆ ಸಜ್ಜುಗೊಂಡಿದೆ.

ಅಷ್ಟಕ್ಕೂ ಡಟ್ಸನ್ ನೂತನ ಹ್ಯಾಚ್‌ಬ್ಯಾಕ್ ಕಾರು ಯಾವ ರೇಂಜ್‌ನಲ್ಲಿ ಆಗಮಿಸಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಯಾಕೆಂದರೆ ನಿಸ್ಸಾನ್ ಮೈಕ್ರಾ ಆಕ್ಟಿವ್ ಈಗಾಗಲೇ 3.5 ಲಕ್ಷ ರು.ಗಳಿಗೆ ಆಗಮನವಾಗಿರುವುದರಿಂದ ಇದಕ್ಕಿಂತಲೂ ಕಡಿಮೆ ದರದಲ್ಲಿ ಡಟ್ಸನ್ ಕಾರು ಮಾರುಕಟ್ಟೆ ಪ್ರವೇಶಿಸುವ ಎಲ್ಲ ಸಾಧ್ಯತೆಗಳಿವೆ.

ಆಟೋ ವಿಶ್ಲೇಷಕರ ಪ್ರಕಾರ 2014ರಲ್ಲಿ ಎಂಟ್ರಿ ಕೊಡಲಿರುವ ಡಟ್ಸನ್ ಸಣ್ಣ ಕಾರಿನ ದರ 3 ಲಕ್ಷ ಅಸುಪಾಸಿನಲ್ಲಿರಲಿದೆ. ಇದು ದೇಶದ ನಂ.1 ಕಾರು ತಯಾರಕ ಕಂಪನಿಯಾದ ಮಾರುತಿಯ ಜನಪ್ರಿಯ ಆಲ್ಟೊ ಹಾಗೂ ಹ್ಯುಂಡೈ ಇಯಾನ್ ಸೇರಿದಂತೆ ಈ ಸೆಗ್ಮೆಂಟ್‌ನ ಇತರ ಸಮಾನ ಕಾರುಗಳಿಗೆ ಕಠಿಣ ಪೈಪೋಟಿ ನೀಡಲಿದೆ.

English summary
With Nissan Micra Active aggressive price of Rs. 3.5 Lakh, we could expect Datsun K2 to be priced under Rs. 3 lakh, which will directly position it in-front of Hyundai EON, Maruti Alto K10, and Chevrolet Spark.
Story first published: Thursday, July 4, 2013, 14:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark