ಇಕೊಸ್ಪೋರ್ಟ್, ಡಸ್ಟರ್‌ ಓವರ್‌ಟೇಕ್ ಮಾಡಿತೇ ಟೆರನೊ?

Written By:

ರೆನೊ ಡಸ್ಟರ್ ರಿ ಬ್ಯಾಡ್ಜ್ ಪಡೆದುಕೊಂಡಿರುವ ನಿಸ್ಸಾನ್ ಟೆರನೊ ಭಾರತೀಯ ಪ್ರೀಮಿಯಂ ಎಸ್‌ಯುವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಆದರೆ ಈಗಾಗಲೇ ಭಾರಿ ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಫೋರ್ಡ್ ಇಕೊಸ್ಪೋರ್ಟ್ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಮಾರಾಟವನ್ನು ಹಿಂದಿಕ್ಕುವಲ್ಲಿ ನಿಸ್ಸಾನ್ ಟೆರನೊಗೆ ಸಾಧ್ಯವಾಗಬಹುದೇ ಎಂಬುದು ಆಟೋ ವಲಯದಲ್ಲಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಮುಂಬೈನಲ್ಲಿ ನಡೆದ ಆದ್ಧೂರಿ ಸಮಾರಂಭದಲ್ಲಿ ಅನಾವಣಗೊಂಡಿದ್ದ ನಿಸ್ಸಾನ್ ಟೆರೆನೊ ಮಾರಾಟ ಸೆಪ್ಟೆಂಬರ್ 1ರಂದು ಆರಂಭವಾಗಲಿದ್ದು, ಅಕ್ಟೋಬರ್ ತಿಂಗಳಿನಿಂದ ಮಾರಾಟ ಆರಂಭವಾಗಲಿದೆ.

ಹಾಗಿದ್ದರೂ ನಿಸ್ಸಾನ್ ಟೆರನೊ ದರದ ಬಗ್ಗೆ ಯಾವುದೇ ಮಾಹಿತಿಗಳು ಬಂದಿಲ್ಲ. ಇದು 10 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ ಎಂಬುದಂತೂ ಖಚಿತವಾಗಿದೆ. ಅಂದರೆ ಇಕೊಸ್ಪೋರ್ಟ್ ಹಾಗೂ ಡಸ್ಟರ್‌ಗಿಂತ ಸ್ವಲ್ಪ ದುಬಾರಿಯೆನಿಸಲಿದೆ.

ಬಿಡುಗಡೆಗೊಂಡ ಮೊದಲ 17 ದಿನಗಳಲ್ಲಿ 30,000 ಬುಕ್ಕಿಂಗ್ ಗಿಟ್ಟಿಸಿಕೊಂಡಿರುವ ಇಕೊಸ್ಪೋರ್ಟ್ ಮಾರಾಟದಲ್ಲಿ ಅಬ್ಬರಿಸುತ್ತಿದೆ. ಇನ್ನೊಂದೆಡೆ ಡಸ್ಟರ್ ಕಳೆದೊಂದು ವರ್ಷದಲ್ಲಿ ಭಾರಿ ಸೇಲ್ಸ್ ಗಿಟ್ಟಿಸಿಕೊಂಡಿದೆ.

ಎಕ್ಸ್‌ಟೀರಿಯರ್ ಭಾಗಗಳಲ್ಲಿ ಹೆಚ್ಚಿನ ಪ್ರೀಮಿಯಂ ವಿನ್ಯಾಸ ಪಡೆದುಕೊಂಡಿರುವುದು ಟೆರನೊ ವೈಶಿಷ್ಟ್ಯವಾಗಿದೆ. ಹಾಗೆಯೇ ಇಂಟಿರಿಯರ್‌ನಲ್ಲೂ ಕೆಲವೊಂದು ಧನಾತ್ಮಕ ಬದಲಾವಣೆ ತರಲಾಗಿದೆ. ಇವೆಲ್ಲವೂ ಗ್ರಾಹಕರನ್ನು ಆಕರ್ಷಿಸುವ ನಂಬಿಕೆಯನ್ನು ನಿಸ್ಸಾನ್ ಹೊಂದಿದೆ.

ಒಟ್ಟಿನಲ್ಲಿ ದೇಶದ ಎಸ್‌ಯುವಿ ಗ್ರಾಹಕರಿಗೆ ಸುಗ್ಗಿ ಕಾಲವಾಗಿದ್ದು, ಈ ದೀಪಾವಳಿ ಹಬ್ಬವನ್ನು ಇನ್ನಷ್ಟೇ ಸಡಗರವಾಗಿ ಆಚರಿಸಿಕೊಳ್ಳಲು ಟೆರನೊ ಆಗಮನವಾಗುತ್ತಿದೆ.

English summary
Nissan Terrano Unveiled this week at Mumbai and set for launch in the India auto market in early October this year. Pre bookings commence on September 1, 2013 with deliveries scheduled for October too.
Story first published: Thursday, August 22, 2013, 15:32 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark