2014 ಹ್ಯುಂಡೈ ಎಲಂಟ್ರಾ ಫೇಸ್‌ಲಿಫ್ಟ್ ವರ್ಷನ್

Written By:

ದೇಶದ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ, 2014 ಎಲಂಟ್ರಾ ಫೇಸ್‌ಲಿಫ್ಟ್ ವರ್ಷನ್ ಸ್ಟುಡಿಯೋ ಚಿತ್ರಣಗಳನ್ನು ಬಿಡುಗಡೆಗೊಳಿಸಿದೆ.

ದಕ್ಷಿಣ ಕೊರಿಯಾ ಮೂಲದ ಹ್ಯುಂಡೈನ ಪ್ರೀಮಿಯಂ ಫ್ಯೂಯಿಡಿಕ್ ಕಾರಾಗಿರುವ ಎಲಂಟ್ರಾಗೆ ದೇಶದಲ್ಲಿ ವರ್ನಾ ಆವೃತ್ತಿಗೆ ಸಿಕ್ಕಿರುವಷ್ಟು ಜನಪ್ರಿಯತೆ ದೊರಕಿಲ್ಲ. ಹಾಗಿದ್ದರೂ ತನ್ನದೇ ಆದ ವಿಶೇಷ ವಿನ್ಯಾಸ ಹೊಂದಿರುವ ಎಲಂಟ್ರಾ, ಪ್ರೀಮಿಯಂ ಸೆಡಾನ್ ಸೆಗ್ಮೆಂಟ್‌ನಲ್ಲಿ ಫೇವರಿಟ್ ಎನಿಸಿಕೊಂಡಿದೆ.

ನಿಮ್ಮ ಮಾಹಿತಿಗಾಗಿ ಭಾರತದಲ್ಲಿ ಎಲಂಟ್ರಾ ಎಂಬ ಹೆಸರಿನಿಂದ ಅರಿಯಲ್ಪಡುವ ಈ ಕಾರು ತವರೂರಲ್ಲಿ ಅವಂಟೆ (Avante) ಎಂದು ಹೆಸರಿಸಲ್ಪಡುತ್ತದೆ. ಪ್ರಸ್ತುತ ಕಾರು ಮುಂದಿನ ವರ್ಷಾರಂಭದಲ್ಲಿ ಭಾರತ ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆಯಿದೆ.

To Follow DriveSpark On Facebook, Click The Like Button
ಆಕರ್ಷಕ ವಿನ್ಯಾಸ

ಆಕರ್ಷಕ ವಿನ್ಯಾಸ

ಎಲಂಟ್ರಾ ನೂತನ ಫೇಸ್‌ಲಿಫ್ಟ್ ವರ್ಷನ್‌ ಆಕ್ರಮಣಕಾರಿ ವಿನ್ಯಾಸ ಹೊಂದಿದೆ. ಇದು 4550 ಎಂಎಂ ಉದ್ದವಿದೆ.

ಸ್ಟೈಲಿಷ್ ಲುಕ್

ಸ್ಟೈಲಿಷ್ ಲುಕ್

ಹಿಂದಿನ ಆವೃತ್ತಿಗೆ ಹೋಲಿಸಿದರೆ ಬಂಪರ್ ವಿನ್ಯಾಸದಲ್ಲಿ ಬದಲಾವಣೆ ತರಲಾಗಿದೆ. ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್ ಜತೆ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳಿದ್ದು, ಫಾಗ್ ಲ್ಯಾಂಪ್ ಜತೆ ಫ್ರಂಟ್ ಗ್ರಿಲ್ ಕೂಡಾ ಪರಿಷ್ಕೃತಗೊಳಿಸಲಾಗಿದೆ. 17 ಇಂಚು ಟು ಟೋನ್ ಅಲಾಯ್ ವೀಲ್ ಕೂಡಾ ಹೊಸತಾಗಿದೆ.

2014 ಹ್ಯುಂಡೈ ಎಲಂಟ್ರಾ

2014 ಹ್ಯುಂಡೈ ಎಲಂಟ್ರಾ

ಸ್ಮಾರ್ಟ್ ಪಾರ್ಕಿಂಗ್ ಅಸಿಸ್ಟ್ ಸಿಸ್ಟಂ ಕೂಡಾ ಹೊಂದಿರುವ ನೂತನ ಎಲಂಟ್ರಾ ಹಿಂಬದಿ ಪ್ರಯಾಣಿಕರಿಗೂ ಹೆಚ್ಚಿನ ಗಾಳಿ ಬೆಳಕನ್ನು ಹಾಯಿಸಲಿದೆ.

ಎಂಜಿನ್

ಎಂಜಿನ್

ಕೊರಿಯಾ ವರ್ಷನ್ ಎಲಂಟ್ರಾದಲ್ಲಿ 1.6 ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದ್ದು, ಇದು 126 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ದರ

ದರ

ಇನ್ನು ದರದ ಬಗ್ಗೆ ಮಾಹಿತಿ ಬಂದಿಲ್ಲ. ಕಂಪನಿಯು ಸದ್ಯದಲ್ಲೇ ಕಾರಿನ ಬಗ್ಗೆ ಹೆಚ್ಚಿ ಮಾಹಿತಿ ನೀಡುವ ನಿರೀಕ್ಷೆಯಿದೆ.

English summary
Hyundai has released studio shots of the 2014 Elantra facelift. The South Korean automaker does not sell as many units of the premium fluidic Elantra as its smaller cousin, the Verna in India. Nevertheless, the Elantra is a popular product which is loved for its design and is a favourite in its segment.
Story first published: Wednesday, August 14, 2013, 9:42 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark