ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್ ಸದ್ಯದಲ್ಲೇ ಬಿಡುಗಡೆ

Written By:

ಆರಂಭದಲ್ಲೇ ಅಂಡಾಮಾನ್ ನಿಕೋಬರ್ ದ್ವೀಪದಲ್ಲಿ ನಡೆದ ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್ ಮೀಡಿಯಾ ಡ್ರೈವ್‌ನಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಹೇಳಲು ಹೆಮ್ಮೆಪಡುತ್ತಿದ್ದೇವೆ. (ಎಕ್ಸ್‌ಕ್ಲೂಸಿವ್ ಚಿತ್ರಗಳಿಗಾಗಿ ಫೋಟೊ ಫೀಚರ್‌ಗೆ ಭೇಟಿ ಕೊಡಿರಿ)

ಇದರಂತೆ ನಡೆದ ಕಾರ್ಯಕ್ರಮದಲ್ಲಿ 2014 ನಿಸ್ಸಾನ್ ಸನ್ನಿ ಅನಾವರಣಗೊಳಿಸಲಾಯಿತು. ಈ ಬಹುನಿರೀಕ್ಷಿತ ಕಾರು ಮುಂಬರುವ ತಿಂಗಳಾರಂಭದಲ್ಲಿ ಬಿಡುಗಡೆಯಾಗಲಿದೆ. ಈ ಸಂಬಂಧ ಕಾರಿನ ವೈಶಿಷ್ಟ್ಯಗಳ ಬಗ್ಗೆ ಸಂಪೂರ್ಣ ವಿವರಣೆಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ.

ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್ ಸದ್ಯದಲ್ಲೇ ಬಿಡುಗಡೆ

ಈಗಾಗಲೇ ಥಾಯ್ಲೆಂಡ್‌ನಲ್ಲಿ ಜಾಗತಿಕ ಪಾದಾರ್ಪಣೆ ಮಾಡಿಕೊಂಡಿರುವ ನಿಸ್ಸಾನ್ ಸನ್ನಿ 2014 ಆಟೋ ಎಕ್ಸ್‌ಪೋದಲ್ಲೂ ಭರ್ಜರಿ ಪ್ರದರ್ಶನ ಕಂಡಿತ್ತು.

ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್ ಸದ್ಯದಲ್ಲೇ ಬಿಡುಗಡೆ

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್, ನೂತನ ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಕಾಸ್ಮೆಟಿಕ್ ಬದಲಾವಣೆಯನ್ನು ತಂದಿದೆ.

ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್ ಸದ್ಯದಲ್ಲೇ ಬಿಡುಗಡೆ

ಇದು ದೊಡ್ಡದಾದ ಹೆಡ್‌ಲೈಟ್, ವಿ ಆಕಾರದ ಗ್ರಿಲ್, ಕ್ರೋಮ್ ಹೋದಿಕೆಯ ಫ್ರಂಟ್ ಬಂಪರ್, ವಿಂಗ್ ಮಿರರ್ ಜತೆ ಇಂಟೆಗ್ರೇಟಡ್ ಟರ್ನ್ ಸಿಗ್ನಲ್, ಕ್ರೀಡಾತ್ಮಕ ನೋಟದ ರಿಯರ್ ಬಂಪರ್, ಹೊಸತಾದ ದೇಹ ಬಣ್ಣ ಮತ್ತು ಟಾಪ್ ಎಂಡ್ ವೆರಿಯಂಟ್‌ 12 ಸ್ಪೋಕ್ ವೈ ಆಕಾರದ ಆಲಾಯ್ ವೀಲ್ ಪಡೆದುಕೊಳ್ಳಲಿದೆ.

ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್ ಸದ್ಯದಲ್ಲೇ ಬಿಡುಗಡೆ

ಇನ್ನು ಕಾರಿನೊಳಗಡೆ 3 ಸ್ಪೋಕ್ ಸ್ಟೀರಿಂಗ್ ವೀಲ್, ಪಿಯಾನೊ ಬ್ಲ್ಯಾಕ್ ಸೆಂಟ್ರಲ್ ಕನ್ಸಾಲ್ ಜತೆ ಪರಿಷ್ಕೃತ ಮ್ಯೂಸಿಕ್ ಸಿಸ್ಟಂ, ಬ್ಲೂಟೂತ್ ಕನೆಕ್ಟಿವಿಟಿ, ರಿವರ್ಸ್ ಕ್ಯಾಮೆರಾ ಮತ್ತು ಟಾಪ್ ಎಂಡ್ ವೆರಿಯಂಟ್ ಸುಧಾರಿತ ಸೀಟು ಮತ್ತು ಡೋರ್ ಫ್ಯಾಬ್ರಿಕ್ಸ್ ಪಡೆದುಕೊಳ್ಳಲಿದೆ.

ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್ ಸದ್ಯದಲ್ಲೇ ಬಿಡುಗಡೆ

ಹಾಗಿದ್ದರೂ ತಾಂತ್ರಿಕವಾಗಿ ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್ ವರ್ಷನ್‌ನಲ್ಲಿ ಯಾವುದೇ ಬದಲಾವಣೆ ತರಲಾಗಿದೆ. ಇದರ ಎನ್‌ವಿಎಚ್ ಪ್ಯಾಕೇಜ್‌ನಲ್ಲಿ ಸುಧಾರಣೆ ತರಲಾಗಿದೆ ಎಂದು ಎಂಜಿನಿಯರ್‌ಗಳು ಅಭಿಪ್ರಾಯಪಡುತ್ತಾರೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಜತೆಗೆ ಸಿವಿಟಿ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್ ಸದ್ಯದಲ್ಲೇ ಬಿಡುಗಡೆ

ಇನ್ನು ಡೀಸೆಲ್ ಸನ್ನಿ ಅಮೋಘ ಇಂಧನ ಕ್ಷಮತೆ ನೀಡಲಿದ್ದು, ಪ್ರತಿ ಲೀಟರ್‌ಗೆ 22.71 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದು 1.5 ಲೀಟರ್ ಪೆಟ್ರೋಲ್ (98 ಅಶ್ವಶಕ್ತಿ) ಹಾಗೂ 1.5 ಲೀಟರ್ ಡಿಸಿಐ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಹಾಗೆಯೇ ಪ್ರಮುಖವಾಗಿಯೂ ಟೊಯೊಟಾ ಎಟಿಯೋಸ್ ಹಾಗೂ ಟಾಟಾ ಮಾಂಝಾ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್ ಸದ್ಯದಲ್ಲೇ ಬಿಡುಗಡೆ

ಒಟ್ಟು ಎಂಟು ವೆರಿಯಂಟ್‌ಗಳಲ್ಲಿ ಇದು ಲಭ್ಯವಾಗಲಿದೆ. ಅವುಗಳೆಂದರೆ ಎಕ್ಸ್‌ಇ, ಎಕ್ಸ್‌ಇ ಡಿ, ಎಕ್ಸ್‌ಎಲ್, ಎಕ್ಸ್‌ಎಲ್ ಸಿವಿಟಿ, ಎಕ್ಸ್‌ಎಲ್ ಡಿ, ಎಕ್ಸ್‌ವಿ ಡಿ, ಎಕ್ಸ್‌ವಿ ಪ್ರೀಮಿಯಂ ಪ್ಯಾಕ್ 1 ಮತ್ತು ಎಕ್ಸ್‌ವಿ ಪ್ರೀಮಿಯಂ ಪ್ಯಾಕ್ 2 ಆಗಿದೆ. ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಫ್ರಂಟ್ ಮತ್ತು ಸೈಡ್ ಏರ್‌ಬ್ಯಾಗ್, ಎಬಿಎಸ್ ಜತೆ ಇಬಿಡಿ, ಬ್ರೇಕ್ ಅಸಿಸ್ಟ್ ಮತ್ತು ಇಂಮೊಬಿಲೈಜರ್ ಇರಲಿದೆ.

Story first published: Monday, June 16, 2014, 14:30 [IST]
Please Wait while comments are loading...

Latest Photos