2014 ಟೊಯೊಟಾ ಕರೊಲ್ಲಾ ಟೀಸರ್ ಚಿತ್ರ ಬಹಿರಂಗ

Written By:

ಕಳೆದ ವಾರ 2014 ಟೊಯೊಟಾ ಕರೊಲ್ಲಾ ಮೊದಲ ಟೀಸರ್ ಚಿತ್ರ ಬಿಡುಗಡೆಯಾಗಿತ್ತು. ಇದೀಗ ಜಪಾನ್ ಮೂಲದ ಕಾರು ತಯಾರಕ ಸಂಸ್ಥೆಯಾದ ಟೊಯೊಟಾ ಮತ್ತೆರಡು ರಹಸ್ಯ ಚಿತ್ರಗಳನ್ನು ಬಿಡುಗಡೆಗೊಳಿಸಿದೆ. ಈ ಬಾರಿ ಫ್ರಂಟ್ ಗ್ರಿಲ್ ಹಾಗೂ ಲೊಗೊ ಚಿತ್ರಣವನ್ನು ಬಿಡುಗಡೆ ಮಾಡಿದೆ.

ವರ್ಷಾರಂಭದಲ್ಲಿ ಡೆಟ್ರಾಯ್ಟ್ ಆಟೋ ಶೋದಲ್ಲಿ ನ್ಯೂ ಜನರೇಷನ್ ಕರೊಲ್ಲಾ ಫ್ಯೂರಿಯಾ ಕಾನ್ಸೆಪ್ಟ್ ಕಾರನ್ನು ಟೊಯೊಟಾ ಪ್ರದರ್ಶನಗೊಳಿಸಿತ್ತು. ಇದೀಗ ಕಂಪನಿಯು ನೂತನ ಆವೃತ್ತಿಯ ಸಿದ್ಧತೆಯಲ್ಲಿದೆ.

ವರ್ಷಾಂತ್ಯದಲ್ಲಿ ನೂತನ ಕರೊಲ್ಲಾ ಸೆಡಾನ್ ಡೀಲರ್‌ಶಿಪ್‌ಗಳತ್ತ ಮುಖ ಮಾಡಲಿದೆ. ಭಾರತದಲ್ಲಿ ಕರೊಲ್ಲಾ ಆಲ್ಟೀಸ್ ಎಂದು ಅರಿಯಲ್ಪಡಲಿರುವ ಪ್ರಸ್ತುತ ಕಾರು 2014ರಲ್ಲಿ ರಸ್ತೆಗೆ ಆಗಮಿಸುವ ನಿರೀಕ್ಷೆಯಿದೆ. ಪ್ರಸ್ತುತ ಮುಂಬರುವ ಜೂನ್ 6ರಂದು 2014 ಟೊಯೊಟಾ ಕರೊಲ್ಲಾ ಜಾಗತಿಕವಾಗಿ ಅನಾವರಣಗೊಳ್ಳಲಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಮಾಹಿತಿ ಲಭಿಸುವ ನಿರೀಕ್ಷೆಯಿದೆ.

2014 Toyota Corolla Teased

ಟೊಯೊಟಾ ಫ್ಯೂರಿಯಾ ಕಾನ್ಸೆಪ್ಟ್‌ನಲ್ಲಿ ನಿರ್ಮಾಣವಾಗಲಿರುವ ಆಲ್ ನ್ಯೂ 2014 ಟೊಯೊಟಾ ಕರೊಲ್ಲಾ ನೂತನ ವಿನ್ಯಾಸ ಪಡೆದುಕೊಳ್ಳಲಿದೆ.

2014 Toyota Corolla Teased

ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಪೈಕಿ ಜಪಾನ್ ಮೂಲದ ಟೊಯೊಟಾ ಕರೊಲ್ಲಾ ಕೂಡಾ ಒಂದಾಗಿದೆ. ಇದೀಗ ನೂತನ ಆವೃತ್ತಿಯು ಇನ್ನಷ್ಟು ಸದ್ದು ಮಾಡಲು ನೆರವಾಗಲಿದೆ.

2014 Toyota Corolla Teased

ನೂತನ ಟೊಯೊಟಾ ಕರೊಲ್ಲಾ ಆವೃತ್ತಿಯನ್ನು ಕಾರು ಪ್ರಿಯರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

2014 Toyota Corolla Teased
2014 Toyota Corolla Teased
English summary
Toyota has followed up last week's teaser image of the all new Corolla with a couple of more images. While the previous image provided us with a glimpse of rear of the car, the two new images show the logo and parts of the front grille and fog lamp.
Story first published: Monday, June 3, 2013, 17:07 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark