2014 ಫೋಕ್ಸ್‌ವ್ಯಾಗನ್ ಪೊಲೊ ದೇಶದಲ್ಲಿ ಭರ್ಜರಿ ಲಾಂಚ್

Written By:

ಜರ್ಮನಿ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್, ಅತ್ಯಾಕರ್ಷಕ 2014 ಪೊಲೊ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ತಾಜಾ ವಿನ್ಯಾಸ ಹೊಂದಿರುವ ಹೊಸ ಪೊಲೊ, ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಲಭ್ಯವಾಗಲಿದೆ. ಇದರ ಪ್ರಾರಂಭಿಕ ದೆಹಲಿ ಎಕ್ಸ್ ಶೋ ರೂಂ ದರ 4.99 ಲಕ್ಷ ರು.ಗಳಾಗಿವೆ.

To Follow DriveSpark On Facebook, Click The Like Button
2014 Volkswagen Polo

2014 ಪೊಲೊದಲ್ಲಿ ಯುರೋಪ್ ಮಾದರಿಯ ವಿನ್ಯಾಸವನ್ನು ಆಮದು ಮಾಡಲಾಗಿದೆ. ಇದರ ಪರಿಷ್ಕೃತ ಫ್ರಂಟ್ ಹಾಗೂ ರಿಯರ್ ಬಂಪರ್‌ಗಳು ಹೆಚ್ಚು ಕ್ರೀಡಾತ್ಮಕ ನೋಟ ಪ್ರದಾನ ಮಾಡುತ್ತದೆ. ಅದೇ ರೀತಿ ಹೆಡ್‌ಲೈಟ್ ಮತ್ತು ಟೈಲ್ ಲ್ಯಾಂಪ್ ಸಹ ಹೊಸ ರೂಪ ಪಡೆದುಕೊಂಡಿದೆ.

ಕಾರಿನೊಳಗೆ ಹೆಚ್ಚಿನ ಬದಲಾವಣೆಯನ್ನು ತರಲಾಗಿದೆ. ಇದು ತ್ರಿ ಸ್ಪೋಕ್ ಸ್ಟೀರಿಂಗ್ ವೀಲ್ ಜೊತೆ ಆಡಿಯೋ ಕಂಟ್ರೋಲ್, ಹೊಸತಾದ ಮಾಹಿತಿ ಮನರಂಜನಾ ಸಿಸ್ಟಂ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಸೌಲಭ್ಯವಿರಲಿದೆ. ಇನ್ನುಳಿದಂತೆ ಸುಧಾರಿತ ಎಸಿ ವೆಂಟ್ಸ್, ಕ್ಲೈಮೇಟ್ ಕಂಟ್ರೋಲ್ ನೂತನ ಕಾರನ್ನು ಇನ್ನಷ್ಟು ಸೊಗಸಾಗಿಸಿದೆ.

ನೂತನ 2014 ಪೊಲೊ 1.5 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 88 ಅಶ್ವಶಕ್ತಿ (239 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅದೇ ರೀತಿ ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 73 ಅಶ್ವಶಕ್ತಿ (110 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

English summary
Volkswagen India has introduced its all new range of the Polo for 2014. The new and refreshed models will be available in both petrol and diesel trims. The German automobile giant has launched its 2014 Polo at a base price of INR 4,99,000 ex-showroom, Delhi and onwards.
Story first published: Tuesday, July 15, 2014, 17:32 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark