ಭಾರತಕ್ಕೆ ಅಪ್ಪಳಿಸಲಿರುವ ವಿದೇಶಿ ಜೀವನಶೈಲಿಯ ಅಪ್ಪಟ ಕಾರು

Written By:

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಆಡಿ ನಿರಂತರ ಅವಧಿಯಲ್ಲಿ ದೇಶಕ್ಕೆ ಪ್ರೀಮಿಯಂ ಕಾರುಗಳನ್ನು ಪರಿಚಯಿಸುತ್ತಲೇ ಬಂದಿದೆ.

ಈಗ ಸ್ವಲ್ಪ ವಿಭಿನ್ನವಾಗಿ ಯೋಜನೆ ಹಾಕಿಕೊಂಡಿರುವ ಆಡಿ ಸಂಸ್ಥೆಯು ವಿದೇಶಿ ಜೀವನಶೈಲಿಯ ಭಾಗವಾಗಿರುವ ಕ್ಯಾಬ್ರಿಯೊಲೆಟ್ ಮಾದರಿಯನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ಅಷ್ಟಕ್ಕೂ ಏನಿದು ಕ್ಯಾಬ್ರಿಯೊಲೆಟ್ ಇಲ್ಲಿದೆ ಓದಿ

To Follow DriveSpark On Facebook, Click The Like Button

ನಿಮ್ಮ ಮಾಹಿತಿಗಾಗಿ ಆಡಿ ಸಂಸ್ಥೆಯು ಹೊಸ ಎ3 ಕ್ಯಾಬ್ರಿಯೊಲೆಟ್ ಮಾದರಿಯನ್ನು ಇಂದು (ಗುರುವಾರ) ನವದೆಹಲಿಯಲ್ಲಿ ಬಿಡುಗಡೆ ಮಾಡಲಿದ್ದು, ಈ ವೇಳೆಯಲ್ಲಿ ಡ್ರೈವ್ ಸ್ಪಾರ್ಕ್ ಪ್ರತಿನಿಧಿಗಳು ಸಹ ಹಾಜರಿರಲಿದ್ದಾರೆ.

ಈ ಹಿಂದೆ ನವದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿದ್ದ ಎ3 ಕ್ಯಾಬ್ರಿಯೊಲೆಟ್ ದೇಶದಲ್ಲಿ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಮಾರಾಟವಾಗಲಿದೆ. ಪ್ರಸ್ತುತ ಕಾರು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಮನ್ನಣೆಗೆ ಪಾತ್ರವಾಗಿದೆ.

ಪೆಟ್ರೋಲ್ ನಿಯಂತ್ರಿತ ಎಂಜಿನ್ ಹೊಂದಿರುವ ಎ3 ಕ್ಯಾಬ್ರಿಯೊಲೆಟ್ ಕೇವಲ 18 ಸೆಕೆಂಡುಗಳಲ್ಲೇ ಮೇಲ್ಚಾವಣಿ ಸಂಪೂರ್ಣವಾಗಿ ಕಳಚಿಕೊಳ್ಳಲಿದೆ. ಅಂತೆಯೇ 4 ಸಿಲಿಂಡರ್ 1.8 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 178 ಅಶ್ವಶಕ್ತಿ (250 ಎನ್‌ಎಂ ಟಾರ್ಕ್) ಉತ್ಪಾದಿಸಲಿದ್ದು, 7 ಸ್ಪೀಡ್ ಎಸ್ ಟ್ರಾನಿಕ್ ಟ್ವಿನ್ ಕ್ಲಚ್ ಟ್ರಾನ್ಸ್‌ಮಿಷನ್ ಸಹ ಇರಲಿದೆ.

Audi A3 Cabriolet

ನಿಕಟ ಭವಿಷ್ಯದಲ್ಲೇ ಡೀಸೆಲ್ ಎಂಜಿನ್ ನಿಯಂತ್ರಿತ ಎ3 ಕ್ಯಾಬ್ರಿಯೊಲೆಟ್ ಮಾದರಿಯನ್ನು ದೇಶಕ್ಕೆ ಪರಿಚಯಿಸುವ ಯೋಜನೆಯನ್ನು ಆಡಿ ಹೊಂದಿದೆ. ಪ್ರಸ್ತುತ ಬಿಡುಗಡೆಯಾಗಲಿರುವ ಆಡಿ ಎ3 ಕ್ಯಾಬ್ರಿಯೊಲೆಟ್ ಬೆಲೆ 40ರಿಂದ 45 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಆಡಿ ಎ3 ಕ್ಯಾಬ್ರಿಯೊಲೆಟ್ ಲಾಂಚ್ ವರದಿ ಹಾಗೂ ಆಕರ್ಷಕ ಚಿತ್ರಗಳಿಗಾಗಿ ಕಾಯುತ್ತಿರಿ.

English summary
Audi India will thus, be launching their A3 Cabriolet on 11th of December, 2014.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark