ನಿರ್ಮಾಣ ಸಿದ್ಧ ಬಜಾಜ್ ಆರ್‌ಇ60 ವಿಶಿಷ್ಟತೆಗಳೇನು?

Written By:

ಇತ್ತೀಚೆಗಷ್ಟೇ ನೂತನ ಕ್ವಾಡ್ರಾಸೈಕಲ್ ವಿಭಾಗಕ್ಕೆ ಕೇಂದ್ರ ಸರಕಾರ ಹಸಿರು ನಿಶಾನೆ ಸೂಚಿಸಿತ್ತು. ಇದರಂತೆ ಬಜಾಜ್ ಆರ್‌ಇ60 ನಾಲ್ಕು ಚಕ್ರದ ವಾಹನ ಮಾರುಕಟ್ಟೆಗೆ ಅಪ್ಪಳಿಸಲು ಸಜ್ಜಾಗಿ ನಿಂತಿದೆ.

2014 ಆಟೋ ಎಕ್ಸ್ ಪೋ

ದೆಹಲಿಯಲ್ಲಿ ಸಾಗುತ್ತಿರುವ 2014 ಆಟೋ ಎಕ್ಸ್ ಪೋದಲ್ಲಿ ನೂತನ ಬಜಾಜ್ ಆರ್‌ಇ60 ನಿರ್ಮಾಣ ಸಿದ್ಧ ಮಾದರಿಯನ್ನು ಅನಾವರಣಗೊಳಿಸಲಾಗಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಆರ್‌ಇ60 ವಿಶಿಷ್ಟತೆಗಳ ಬಗ್ಗೆ ಬಜಾಜ್ ಸಂಪೂರ್ಣ ಮಾಹಿತಿಯನ್ನು ಹೊರಗೆಡವಿದೆ.

ನಿರ್ಮಾಣ ಸಿದ್ಧ ಬಜಾಜ್ ಆರ್‌ಇ60 ವಿಶಿಷ್ಟತೆಗಳೇನು?

ಪರಿಪೂರ್ಣ ಸಿಟಿ ವಾಹನ ಎನಿಸಿಕೊಳ್ಳಲಿರುವ ಬಜಾಜ್ ಆರ್‌ಇ60, ಪ್ರಮುಖವಾಗಿಯೂ ಆಟೋ ರಿಕ್ಷಾಗಳಿಗೆ ಬದಲಿ ವ್ಯವಸ್ಥೆಯಾಗಿರಲಿದೆ.

ನಿರ್ಮಾಣ ಸಿದ್ಧ ಬಜಾಜ್ ಆರ್‌ಇ60 ವಿಶಿಷ್ಟತೆಗಳೇನು?

ಈ ಹಗುರ ವಾಣಿಜ್ಯ ವಾಹನವನ್ನು ಬರಮಾಡಿಕೊಳ್ಳಲು ಗ್ರಾಹಕರು ತುದಿಗಾಲಲ್ಲಿ ನಿಂತಿದ್ದಾರೆ. ಇದರಂತೆ ಹಲವು ವರ್ಣಗಳಲ್ಲಿ ಕಂಗೊಳಿಸುತ್ತಿರುವ ಬಜಾಜ್ ಆರ್60 ಪ್ರದರ್ಶಿಸಲಾಗಿದೆ.

ನಿರ್ಮಾಣ ಸಿದ್ಧ ಬಜಾಜ್ ಆರ್‌ಇ60 ವಿಶಿಷ್ಟತೆಗಳೇನು?

ಇದು 216 ಸಿಸಿ ಲಿಕ್ವಿಡ್ ಕೂಲ್ಡ್ 4 ವಾಲ್ವೆ ಫ್ಯೂಯಲ್ ಇಂಜೆಕ್ಟಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಸಂಸ್ಥೆಯ ನೂತನ ಟ್ರಿಪಲ್ ಸ್ಪಾರ್ಕ್ ತಂತ್ರಗಾರಿಕೆಯ ಅಡಿಯಲ್ಲಿ ಕೆಲಸ ಮಾಡಲಿದೆ.

ನಿರ್ಮಾಣ ಸಿದ್ಧ ಬಜಾಜ್ ಆರ್‌ಇ60 ವಿಶಿಷ್ಟತೆಗಳೇನು?

ಪ್ರಸ್ತುತ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಜತೆಗೆ ಡ್ಯಾಶ್‌ಬೋರ್ಡ್‌ನಲ್ಲಿ ಗೇರ್ ಶಿಫ್ಟ್ ಲಿವರ್ ಲಗತ್ತಿಸಲಾಗಿದೆ.

ನಿರ್ಮಾಣ ಸಿದ್ಧ ಬಜಾಜ್ ಆರ್‌ಇ60 ವಿಶಿಷ್ಟತೆಗಳೇನು?

ಸಂಸ್ಥೆಯ ಪ್ರಕಾರ ಬಜಾಜ್ ಆರ್‌ಇ60 ಪ್ರತಿ ಗಂಟೆಗೆ 70 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

ನಿರ್ಮಾಣ ಸಿದ್ಧ ಬಜಾಜ್ ಆರ್‌ಇ60 ವಿಶಿಷ್ಟತೆಗಳೇನು?

ಒಟ್ಟು ಮೂರು ವೆರಿಯಂಟ್‌ಗಳಲ್ಲಿ ಬಜಾಜ್ ಆರ್‌ಇ60 ಲಭ್ಯವಿರಲಿದೆ. ಅವುಗಳೆಂದರೆ ಸಾಮಾನ್ಯ ಪೆಟ್ರೋಲ್, ಎಲ್‌ಪಿಜಿ ಮತ್ತು ಸಿಎನ್‌ಜಿ ವರ್ಷನ್‌ಗಳಿರಲಿದೆ.

ನಿರ್ಮಾಣ ಸಿದ್ಧ ಬಜಾಜ್ ಆರ್‌ಇ60 ವಿಶಿಷ್ಟತೆಗಳೇನು?

ಇನ್ನು ಅತ್ಯಂತ ಮಹತ್ವದ ವಿಚಾರವೆಂದರೆ ನೂತನ ಬಜಾಜ್ ಆರ್‌ಇ60 ಪ್ರತಿ ಲೀಟರ್‌ಗೆ 37 ಕೀ.ಮೀ. ವರೆಗೂ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಅಲ್ಲದೆ ಪ್ರತಿ ಕೀ.ಮೀ. ಕೇವಲ 60 ಗ್ರಾಂಗಳಷ್ಟು ಕಾರ್ಬನ್ ಡೈಓಕ್ಸೈಡ್ ಹೊರಸೂಸಲಿದೆ.

ನಿರ್ಮಾಣ ಸಿದ್ಧ ಬಜಾಜ್ ಆರ್‌ಇ60 ವಿಶಿಷ್ಟತೆಗಳೇನು?

ಅಂತಿಮವಾಗಿ ದರಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲವಾದರೂ 1.5 ಲಕ್ಷ ರು.ಗಳಿಂದ 1.7 ಲಕ್ಷ ರು.ಗಳ ವರೆಗಿನ ದರಗಳಲ್ಲಿ ಆಗಮನವಾಗುವ ನಿರೀಕ್ಷೆಯಿದೆ.

ನಿರ್ಮಾಣ ಸಿದ್ಧ ಬಜಾಜ್ ಆರ್‌ಇ60 ವಿಶಿಷ್ಟತೆಗಳೇನು?

ನಾಲ್ಕು ಚಕ್ರಗಳಿರುವುದರಿಂತ ಬಜಾಜ್ ಆರ್‌ಇ60, ತ್ರಿಚಕ್ರ ವಾಹನ ಆಟೋ ರಿಕ್ಷಾಗಿಂತಲೂ ಹೆಚ್ಚು ಸುರಕ್ಷಿತವಾಗಿರಲಿದೆ ಎಂಬುದು ವಿಶ್ಲೇಷಕರ ಅಭಿಮತವಾಗಿದೆ. ಅಷ್ಟಕ್ಕೂ ಬಜಾಜ್ ಆರ್‌ಇ60, ಆಟೋ ರಿಕ್ಷಾಗಳಿಗೆ ಬದಲಿ ವ್ಯವಸ್ಥೆಯಾಗಲಿದೆಯೇ? ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.

English summary
At the Auto Expo 2014 Bajaj showcased the production version of its quadricycle, the RE60. Displayed in various colours and different body graphics, Bajaj meant to showcase the RE60 as a fun commercial vehicle that passengers will find exciting.
Story first published: Tuesday, February 11, 2014, 11:39 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark