ಬೆಂಗಳೂರಿನ ಎಂಜಿನಿಯರ್‌ನಿಂದ ಹಾರುವ ಕಾರು ಅವಿಷ್ಕಾರ

Written By:

ನಮ್ಮ ಬೆಂಗಳೂರಿಗರಿಗೆ ಹೆಮ್ಮೆ ತರುವ ಸುದ್ದಿಯೊಂದರಲ್ಲಿ ಸ್ಥಳೀಯ ಎಂಜಿನಿಯರ್ 54ರ ಹರೆಯದ ಎ. ಕೆ. ವಿಶ್ವನಾಥ್, ಹಾರುವ ಕಾರಿನ ವಿನ್ಯಾಸದಲ್ಲಿ ತೊಡಗಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ರೆಕ್ಕೆ ಬಿಚ್ಚಿ ಹಾರುವ ಟೆರ್ರಾಫ್ಯೂಜಿಯಾ ಟ್ರಾನ್ಸಿಷನ್ ವಿಶ್ವದ್ಯಾಂತ ವಾಹನ ಪ್ರೇಮಿಗಳ ಗಮನ ಸೆಳೆದಿತ್ತು.

Flying Car

ಇದೀಗ ಇದಕ್ಕೆ ಸಮಾನವಾದ ವಿನ್ಯಾಸವೊಂದನ್ನು ರಚಿಸುವುದರಲ್ಲಿ ವಿಶ್ವನಾಥ್ ಕಾರ್ಯ ಮಗ್ನರಾಗಿದ್ದಾರೆ. ಬಿಎಂಎಸ್ ಕಾಲೇಜ್‌‌ನಿಂದ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿರುವ ಅವರು ಅನೇಕ ಕ್ರಿಮಿ ಕೀಟಗಳು ಹಾರುವ ವಿಧದಿಂದ ಸ್ಫೂರ್ತಿ ಪಡೆದುಕೊಂಡು ಇಂತಹದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.

ವಿಶ್ವನಾಥ್ ಅವರೇ ಹೇಳುವ ಪ್ರಕಾರ "ನಾವು ತಂತ್ರಜ್ಞಾನವನ್ನು ಮರು ವಿಜ್ಞಾನಗೊಳಿಸಬೇಕಾದ ಅಗತ್ಯವಿದ್ದು, ಈ ಮೂಲಕ ಮುಂದಿನ ಶತಮಾನಕ್ಕಾಗಿ ತಳಹದಿ ರೂಪಿಸಬೇಕಾಗಿದೆ" ಎಂದಿದ್ದಾರೆ.

ಒಟ್ಟಿನಲ್ಲಿ 10 ವರ್ಷಗಳ ದೀರ್ಘ ಅಧ್ಯಯನದ ಬಳಿಕ ತಮ್ಮ ಚೊಚ್ಚಲ ಹಾರುವ ಕಾರಿನ ಪರಿಕಲ್ಪನೆಯನ್ನು 2015 ಏರೋ ಇಂಡಿಯಾದಲ್ಲಿ ಪ್ರದರ್ಶಿಸಲಿದ್ದಾರೆ. ಇದು ಬೆಂಗಳೂರಿನಲ್ಲೇ ಮುಂದಿನ ಫೆಬ್ರವರಿಯಲ್ಲಿ ನೆರವೇರಲಿದೆ. 

English summary
A K Vishwanath, a 54 year-old engineer from Bangalore is making an attempt to design and launch a flying car, that can take off and land vertically.
Story first published: Monday, October 27, 2014, 17:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark