ಅತಿ ಶೀಘ್ರದಲ್ಲೇ ಶಕ್ತಿಶಾಲಿ ಬಿಎಂಡಬ್ಲ್ಯು ಎಂ4 ಬಿಡುಗಡೆ

Written By:

ಭಾರತೀಯ ಮಾರುಕಟ್ಟೆಗೆ ಹಲವು ಹೊಸ ಮಾದರಿಗಳನ್ನು ಪರಿಚಯಿಸುವ ಯೋಜನೆಯನ್ನು ಬಿಎಂಡಬ್ಲ್ಯು ಹೊಂದಿದೆ. ಇದರಂತೆ ಜರ್ಮನಿಯ ಈ ಐಷಾರಾಮಿ ವಾಹನ ತಯಾರಕ ಸಂಸ್ಥೆಯು ಅತಿ ಶೀಘ್ರದಲ್ಲೇ ಎಂ4 ಮಾದರಿಯನ್ನು ಬಿಡುಗಡೆಗೊಳಿಸಲಿದೆ.

ಈಗಾಗಲೇ 7 ಸಿರೀಸ್ ಆಕ್ಟಿವ್ ಹೈಬ್ರಿಡ್ ಬಿಡುಗಡೆಗೆ ಸಮಯ ನಿಗದಿಯಾಗಿದ್ದು, 2014 ಜುಲೈ 23ರಂದು ಬಿಡುಗಡೆಯಾಗಲಿದೆ. ಈ ನಡುವೆ ಅತ್ಯಂತ ಶಕ್ತಿಶಾಲಿ ಎಂ4 ಬಿಡುಗಡೆಯ ಬಗ್ಗೆ ಫೇಸ್‌ಬುಕ್ ಅಧಿಕೃತ ಪೇಜ್‌ನಲ್ಲಿ ಸುಳಿವು ನೀಡಲಾಗಿದೆ.

To Follow DriveSpark On Facebook, Click The Like Button
bmw m4

ಅಂದರೆ ಪ್ರಸಕ್ತ ಸಾಲಿನಲ್ಲೇ ಹೊಸ ಬಿಎಂಡಬ್ಲ್ಯು ಎಂ4 ಆಗಮನವಾಗುವ ಸಾಧ್ಯತೆಯಿದೆ. ಇದು ಎಂ3 ಮಾದರಿಗೆ ಸಮಾನವಾದ ಎಂಜಿನ್ ಮಾನದಂಡಗಳನ್ನು ಪಡೆಯಲಿದೆ. ಅಂದರೆ ಇದೇ ಮೊದಲ ಬಾರಿಗೆ ಎಂ4 ಸ್ಪೋರ್ಟ್ಸ್ ಕಾರು 3.0 ಲೀಟರ್ ಎಂಜಿನ್ ಪಡೆಯಲಿದೆ. ಇದರ 6 ಸಿಲಿಂಡರ್ ಎಂಜಿನ್ ಬಿಎಂಡಬ್ಲ್ಯು ಎಂ ಟ್ವಿನ್ ಪವರ್ ಟರ್ಬೊ ತಂತ್ರಜ್ಞಾನವನ್ನು ಹೊಂದಿರಲಿದೆ. ಇದು ಗರಿಷ್ಠ 431 ಅಶ್ವಶಕ್ತಿ (550 ಎನ್‌ಎಂ ಟಾರ್ಕ್) ಉತ್ಪಾದಿಸಲು ನೆರವಾಗಲಿದೆ.

ಅದೇ ರೀತಿ ಹೆಚ್ಚಿನ ಕ್ರೀಡಾತ್ಮಕ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ. ಅಂತೆಯೇ ಕಾರ್ಬನ್ ಫೈಬರ್ ಬಳಕೆಯಿಂದಾಗಿ ಕಾರಿನ ತೂಕವನ್ನು ಕಡಿಮೆ ಮಾಡಲು ನೆರವಾಗಿದೆ. ಬಿಎಂಡಬ್ಲ್ಯು ಎಂ4 ಟ್ವಿನ್ ಗೇರ್ ಬಾಕ್ಸ್ ಮತ್ತು 7 ಸ್ಪೀಡ್ ಎಂ ಡಬಲ್ ಕ್ಲಚ್ ಟ್ರಾನ್ಸ್‌ಮಿಷನ್‌ಗಳಲ್ಲಿ ಲಭ್ಯವಿರಲಿದೆ.

English summary
BMW India has several products slated to launch for the Indian market. They have announced that they will launch the 7-Series ActiveHybrid in India on the 23rd of July, 2014. They have also planned to launch their i8 hybrid supercar in India by year's end.
Story first published: Tuesday, July 15, 2014, 12:31 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark