ಎಚ್ಚರ; ಡಿ.1ರಿಂದ ಪೆಟ್ರೋಲ್ ಹಾಕಿಸಿಕೊಳ್ಳಲು ಪಿಯುಸಿ ಸರ್ಟಿಫಿಕೇಟ್ ಕಡ್ಡಾಯ

By Nagaraja

ನಿಮ್ಮ ಗಾಡಿಗೆ ಪಟ್ರೋಲ್ ಹಾಕಿಸಿಕೊಳ್ಳಬೇಕೇ? ನಮ್ಮ ಮಾತನ್ನು ಸ್ವಲ್ಪ ಗಮನವಿಟ್ಟು ಕೇಳಿ. ಮುಂಬರುವ ಡಿಸೆಂಬರ್ 1ರಿಂದ ಪೆಟ್ರೋಲ್ ಬಂಕ್‌ಗಳಿಗೆ ತೆರಲುವ ಸವಾರರು ಪಿಯುಸಿ ಸರ್ಟಿಫಿಕೇಟ್ ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು.

ಏನಿದು ಪಿಯುಸಿ ಪ್ರಮಾಣ ಪತ್ರ?
ಮಾಲಿನ್ಯ ನಿಯಂತ್ರಣ ಇಲಾಖೆಯ ಪ್ರಮಾಣ ಪತ್ರದ ಸಂಕ್ಷಿಪ್ತ ರೂಪವೇ ಪಿಯುಸಿ. ಸದ್ಯ ರಾಷ್ಟ್ರ ರಾಜಧಾನಿ ನವದೆಹಲಿ ಪೆಟ್ರೋಲ್ ಪಂಪ್‌ಗಳಲ್ಲಿ ಇದನ್ನು ಜಾರಿಗೆ ತರಲಾಗುತ್ತಿದೆ.

petrol

ದೆಹಲಿ ಮುಖ್ಯ ಕಾರ್ಯದರ್ಶಿ ಡಿಎಂ ಸ್ಪಾಲಿಯಾ ಅಧ್ಯಕ್ಷತೆಯಲ್ಲಿ ಬುಧವಾರ ಸೇರಿದ ಸಭೆಯಲ್ಲಿ ಇದನ್ನು ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಸಾರಿಗೆ ಹಾಗೂ ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದಕ್ಕೆ ಸಂಬಂಧಿಸಿದಂತೆ ಇಲಾಖೆಯು ವಿಶೇಷ ಅಭಿಯಾನ ಸಹ ಕೈಗೊಳ್ಳಲಿದ್ದು, ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

ವಾಯು ಮಾಲಿನ್ಯ ದಿನಂದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ವಾಹನದಿಂದ ಹೊರಸೂಸುವ ಹೊಗೆ ಅತಿ ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುತ್ತದೆ. ಇದನ್ನು ತಡೆಯುವ ಪ್ರಾಥಮಿಕ ಕ್ರಮದ ಭಾಗವಾಗಿ ಇಂತಹದೊಂದು ನಿರ್ಧಾರ ಕೈಗೊಳ್ಳಲಾಗಿದೆ.

Most Read Articles

Kannada
English summary
Come December 1, vehicle owners not having pollution certificates would not be able to buy petrol from petrol pumps in Delhi.
Story first published: Thursday, November 13, 2014, 16:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X