ಇಕೊಸ್ಪೋರ್ಟ್‌ಗೆ ತಟ್ಟಿದ ಸಮಸ್ಯೆ; ಭಾರಿ ರಿಕಾಲ್

By Nagaraja

ಭಾರತದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಕಾಯ್ದುಕೊಂಡಿರುವ ಫೋರ್ಡ್ ಇಕೊಸ್ಪೋರ್ಟ್ ಮಾದರಿಯಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಭಾರಿ ರಿಕಾಲ್‌ಗೆ ಕರೆ ನೀಡಲಾಗಿದೆ.

ಸದ್ಯ ಭಾರತದಲ್ಲಿ ನಿರ್ಮಾಣವಾಗಿ ಆಸ್ಟ್ರೇಲಿಯಾಕ್ಕೆ ರಫ್ತಾಗುತ್ತಿರುವ ಇಕೊಸ್ಪೋರ್ಟ್ ಮಾದರಿಯಲ್ಲಿ ತೊಂದರೆ ಕಾಣಿಸಿಕೊಂಡಿರುವುದನ್ನು ಸಂಸ್ಥೆ ಸ್ಪಷ್ಟಪಡಿಸಿದೆ. ಇದರಿಂದಾಗಿ 2,804 ಯುನಿಟ್‌ಗಳಿಗೆ ಹಿಂದಕ್ಕೆ ಕರೆ ನೀಡಲಾಗಿದೆ.


ಏನಿದು ಸಮಸ್ಯೆ?
ವರದಿಗಳ ಪ್ರಕಾರ ಇಕೊಸ್ಪೋರ್ಟ್ ಆಸ್ಟ್ರೇಲಿಯಾ ಮಾದರಿಯ ಕ್ರೀಡಾ ಬಳಕೆಯ ವಾಹನದಲ್ಲಿ ಮೂರು ಪ್ರಮುಖ ಸಮಸ್ಯೆಗಳು ಕಾಣಿಸಿಕೊಂಡಿದೆ. ಅವುಗಳೆಂದರೆ
  • ವೈರಿಂಗ್ ಸಮಸ್ಯೆ,
  • ಕರ್ಟೈನ್ ಏರ್ ಬ್ಯಾಗ್ ನಿಯೋಜನೆಯಲ್ಲಿ ಸಮಸ್ಯೆ,
  • ಸೈಡ್ ಇಂಪಾಕ್ಟ್ ಸೆನ್ಸಾರ್ ಹಾಗೂ ಸೀಟು ಬೆಲ್ಟ್

ಯಾವಾಗ ನಿರ್ಮಾಣ?
ಫೋರ್ಡ್ ಪ್ರಕಾರ 2013 ಜೂನ್ 15ರಿಂದ 2014 ಆಗಸ್ಟ್ 26ರ ವರೆಗೆ ನಿರ್ಮಾಣವಾಗಿರುವ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ತೊಂದರೆ ಕಾಣಿಸಿಕೊಂಡಿದೆ. ಹಾಗೆಯೇ ಇದು ತಕಟಾ ಏರ್ ಬ್ಯಾಗ್‌ಗೆ ಸಮಸ್ಯೆಗೆ ಸಾಮ್ಯತೆ ಪಡೆದುಕೊಂಡಿಲ್ಲ ಎಂಬುದನ್ನು ಅಮೆರಿಕ ಮೂಲದ ಸಂಸ್ಥೆ ಸ್ಪಷ್ಟಪಡಿಸಿದೆ.

ಇವನ್ನೂ ಓದಿ: ಇಕೊಸ್ಪೋರ್ಟ್ ಟೆಸ್ಟ್ ಡ್ರೈವ್ ಮತ್ತು ಅಪಘಾತ

ecosport

ಭಾರತಕ್ಕೆ ಹಿನ್ನೆಡೆ?
ಜಾಗತಿಕ ಮಾರುಕಟ್ಟೆಗಳಿಗೆ ಫೋರ್ಡ್‌ನ ಚೆನ್ನೈ ಘಟಕದಿಂದಲೇ ವಿತರಣೆಯಾಗುತ್ತಿದೆ. ಹಾಗಿರುವಾಗ ಮೇಡ್ ಇನ್ ಇಂಡಿಯಾ ಮಾದರಿಯಲ್ಲಿ ತೊಂದರೆ ಕಾಣಿಸಿಕೊಂಡಿರುವುದು ಭಾರಿ ಹಿನ್ನೆಡೆಯೆಂದೇ ಪರಿಗಣಿಸಲಾಗುತ್ತದೆ. ನಿಮ್ಮ ಮಾಹಿತಿಗಾಗಿ, ಭಾರತಕ್ಕಿಂತ ವಿರುದ್ಧವಾಗಿ ಆಸ್ಟ್ರೇಲಿಯಾದಲ್ಲಿ ಎಡ ಬದಿಯ ಚಾಲನಾ ವ್ಯವಸ್ಥೆಯನ್ನು ಹೊಂದಿರುತ್ತದೆ.

ಭಾರತ ಮಾದರಿಗೂ ಸಮಸ್ಯೆ ತಟ್ಟಿದೆಯೇ?
ಇದುವರೆಗೆ ಭಾರತ ಮಾದರಿಯಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಿದೆ. ಭಾರತದಲ್ಲಿ ಇಕೊಸ್ಪೋರ್ಟ್ ಟೈಟಾನಿಯಂ ಆಟೋಮ್ಯಾಟಿಕ್ ಮತ್ತು ಟೈಟಾನಿಯಂ ಆಪ್ಷನ್ ವೆರಿಯಂಟ್‌ಗಳಲ್ಲಿ ಕರ್ಟೈನ್ ಏರ್ ಬ್ಯಾಗ್ ಸೌಲಭ್ಯವಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ಮಾದಿರಗಳು ಚೆನ್ನೈನ ಘಟಕದಲ್ಲೇ ನಿರ್ಮಾಣವಾಗುವುದರಿಂದ ತೊಂದರೆಯನ್ನು ತಳ್ಳಿ ಹಾಕುವಂತಿಲ್ಲ. ಭಾರತದಲ್ಲಿ ಇದರ ಬೆಲೆ 6.46 ಲಕ್ಷ ರು.ಗಳಿಂದ 9.71 ಲಕ್ಷ ರು.ಗಳ ವರೆಗಿದೆ. ಹಾಗೆಯೇ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ.

Most Read Articles

Kannada
English summary
American automobile manufacturer, Ford has setup its facility in India. They export their vehicles to global markets from their plant in Chennai. Their most popular vehicle, EcoSport is made in India and exported to several countries in the world.
Story first published: Tuesday, December 9, 2014, 13:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X