ಹ್ಯುಂಡೈನಿಂದ ಆಟೋ ಬ್ರೇಕಿಂಗ್ ತಂತ್ರಜ್ಞಾನ ಪರಿಚಯ

By Nagaraja

ಜಾಗತಿಕ ಅಗ್ರಗಣ್ಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಹ್ಯುಂಡೈ, ನಾವೀನ್ಯತೆಯ ಭಾಗವಾಗಿ ಹೊಸತಾದ ಆಟೋ ಬ್ರೇಕಿಂಗ್ ತಂತ್ರಜ್ಞಾನ ಅವಿಷ್ಕರಿಸಿದೆ.

ರಸ್ತೆಯಲ್ಲಿ ಸಂಚರಿಸುವಾಗ ಸ್ಪೀಡ್ ಕ್ಯಾಮೆರಾಗಳನ್ನು ಪತ್ತೆಹಚ್ಚಲಿರುವ ಹ್ಯುಂಡೈನ ಆಟೋ ಬ್ರೇಕಿಂಗ್ ತಂತ್ರಜ್ಞಾನವು ಟ್ರಾಫಿಕ್ ವೇಗ ಮಿತಿ ಮೀರಿ ಸಂಚರಿಸಿದ್ದಲ್ಲಿ ಸ್ವಯಂಚಾಲಿತವಾಗಿ ವೇಗ ಕಡಿತ ಮಾಡುವಲ್ಲಿ ನೆರವಾಗಲಿದೆ. 2015 ಜೆನಿಸಿಸ್ ಸೆಡಾನ್ ಕಾರಿನಲ್ಲಿ ಇದನ್ನು ಆಳವಡಿಸಲಾಗುವುದು. ಇದರಲ್ಲಿರುವ ಮುಂದುವರಿದ ಜಿಪಿಎಸ್ ಸಿಸ್ಟಂ ಹ್ಯುಂಡೈನ ಹೊಸ ತಂತ್ರಜ್ಞಾನಕ್ಕೆ ನೆರವಾಗಲಿದೆ.

Hyundai

ಆಡಿ, ಮರ್ಸಿಡಿಸ್ ಬೆಂಝ್ ಹಾಗೂ ಬಿಎಂಡಬ್ಲ್ಯು ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರುವ ಜೆನಿಸಿಸ್ ಕಾರಿನಲ್ಲಿ ಆಳವಡಿಸಲಾಗುವ ಆಟೋ ಬ್ರೇಕಿಂಗ್ ತಂತ್ರಜ್ಞಾನವು, ಸುರಕ್ಷತೆಯ ದೃಷ್ಟಿಕೋನದಲ್ಲಿ ಚಾಲಕರಿಗೆ ಮುಂಚಿತವಾಗಿ ವೇಗ ಕಡಿತ ಮಾಡಲು ನಿರ್ದೇಶನ ನೀಡಲಿದೆ. ಇದರಿಂದ ವೇಗ ಕಡಿಮೆ ಮಾಡಲು ಚಾಲಕರಿಗೆ ತುಂಬಾನೇ ಸಮಯ ಸಿಗಲಿದೆ. ಇದೇ ಸಂದರ್ಭದಲ್ಲಿ ಸ್ಮಾರ್ಟ್ ಕಿ ನಿಯಂತ್ರಿತ ಬೂಟ್ ಸೇವೆಯನ್ನು ಹ್ಯುಂಡೈ ಒದಗಿಸುತ್ತಿದೆ.

ಏನಿದು ಸ್ಪೀಡ್ ಕ್ಯಾಮೆರಾ?
ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಕ್ಯಾಮೆರಾ ಎಂದು ಸಹ ಕರೆಯಲ್ಪಡುವ ಸ್ಪೀಡ್ ಕ್ಯಾಮೆರಾ ವಿದೇಶಗಳಲ್ಲಿ ಸಾಮಾನ್ಯವಾಗಿದ್ದು, ವೇಗ ಅಥವಾ ಟ್ರಾಫಿಕ್ ಸಿಗ್ನಲ್ ನಿಯಮಗಳನ್ನು ಉಲ್ಲಂಘಿಸುವ ವಾಹನಗಳನ್ನು ಪತ್ತೆ ಹಚ್ಚಲಿದೆ. ಇನ್ನು ಕೆಲವು ಕಡೆ ನಿಯಮ ಉಲ್ಲಂಘಿಸುವ ವಾಹನಗಳಿಗೆ ಆಟೋಮ್ಯಾಟಿಕ್ ಆಗಿ ದಂಡ ವಿಧಿಸುವ ತಂತ್ರಜ್ಞಾನವನ್ನು ಹೊಂದಿರುತ್ತದೆ.

Most Read Articles

Kannada
English summary
Hyundai has always been known for the great gadgets they offer, be it for safety, convenience or entertainment. The latest it has to offer is new technology that will automatically slow down the car when it detects a speed camera.
Story first published: Tuesday, July 1, 2014, 12:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X