ರೆನೊ ಲೊಡ್ಜಿ ಮೊದಲ ಚಿತ್ರ ಬಿಡುಗಡೆ - ಹೇಂಗಿದೆ ನೋಡಿ

Written By:

ದೇಶದ ಮಾರುಕಟ್ಟೆಗೆ ತನ್ನ ಬದ್ಧತೆಯನ್ನು ಪ್ರದರ್ಶಿಸುವುದರಲ್ಲಿ ಸದಾ ಮಗ್ನವಾಗಿರುವ ಫ್ರಾನ್ಸ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ ಇಂಡಿಯಾ, ಎಲ್ಲ ಹೊಸತನವನ್ನು ಹೊಂದಿರುವ ಲೊಡ್ಜಿ ಬಹು ಬಳಕೆಯ ವಾಹನದ (ಎಂಪಿವಿ) ಮೊದಲ ಚಿತ್ರಣವನ್ನು ಬಿಡುಗಡೆ ಮಾಡಿದೆ.

ಇದು ಸಂಸ್ಥೆ ಬಿಡುಗಡೆ ಮಾಡಿರುವ ಮೊದಲ ಅಧಿಕೃತ ಚಿತ್ರವಾಗಿದ್ದು, ಸಂಪೂರ್ಣ ತಾಜಾತನವನ್ನು ಪಡೆದುಕೊಂಡಿದೆ. ಜಾಗತಿಕವಾಗಿ ಡ್ಯಾಸಿಯಾ ಬ್ರಾಂಡ್‌ನಲ್ಲಿ ಮಾರಾಟವಾಗುತ್ತಿರುವ ಲೊಡ್ಜಿ ಎಂಪಿವಿ ಮುಂದಿನ ವರ್ಷಾರಂಭದಲ್ಲಿ ಭಾರತ ಮಾರುಕಟ್ಟೆ ತಲುಪುವ ನಿರೀಕ್ಷೆಯಿದೆ.

To Follow DriveSpark On Facebook, Click The Like Button
renault lodge

ಸ್ಮರ್ಧಾತ್ಮಕ ಬೆಲೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭಾರತ ಮಾದರಿ ರೆನೊ ಕಾರಿನಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರಲಿದೆ. ಹಾಗಿದ್ದರೂ ಎಂಜಿನ್ ಮುಂತಾದ ತಂತ್ರಜ್ಞಾನದ ಬಗ್ಗೆ ಯಾವುದೇ ಮಾಹಿತಿಗಳನ್ನು ಸಂಸ್ಥೆಯು ಬಹಿರಂಗಪಡಿಸಿಲ್ಲ.

ಸಹಜವಾಗಿಯೂ ಏಳು ಸೀಟುಗಳ ರೆನೊ ಲೊಡ್ಜಿ ಎಂಪಿವಿ ದೇಶದ ಅಗ್ರ ವಾಹನ ಸಂಸ್ಥೆ ಮಾರುತಿ ಸುಜುಕಿ ಎರ್ಟಿಗಾ ಹಾಗೂ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಹೋಂಡಾ ಮೊಬಿಲಿಯೊ ಸವಾಲನ್ನು ಎದುರಿಸಲಿದೆ.

ರೆನೊ ಲೊಡ್ಜಿ ಟೆಸ್ಟಿಂಗ್ ಟೆಸ್ಟಿಂಗ್ - ಕೆಳಗಡೆ ಕೊಟ್ಟಿರುವ ಎಕ್ಸ್ ಕ್ಲೂಸಿವ್ ವೀಡಿಯೋ ವೀಕ್ಷಿಸಿ.

<iframe width="600" height="450" src="//www.youtube.com/embed/W8BYVDV2f2Y" frameborder="0" allowfullscreen></iframe>
English summary
French carmaker, Renault has revealed the first official picture of its yet to launch MPV Lodgy for Indian market. The vehicle will be rolled out in the early 2015. Stay tuned for latest updates.&#13;
Story first published: Monday, December 22, 2014, 14:57 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark