ತೆರಿಗೆ ಬಿಕ್ಕಟ್ಟು; ಇಂಡಿಯನ್ ಗ್ರ್ಯಾನ್ ಪ್ರಿಗೆ ಬಿತ್ತು ಬ್ರೇಕ್

Written By:

ದೇಶದ ಫಾರ್ಮುಲಾ ಒನ್ ರೇಸ್ ಉತ್ಸಾಹಿಗಳಿಗೆ ಮಗದೊಂದು ನಿರಾಸೆ ಸುದ್ದಿ ಕಾದಿದೆ. ಸರಕಾರದ ಭಾರಿ ತೆರಿಗೆ ಧೋರಣೆ ಹಿನ್ನಲೆಯಲ್ಲಿ 2016ನೇ ಇಸವಿಯ ವರೆಗೆ ಭಾರತದಲ್ಲಿ ಎಫ್1 ಆಯೋಜನೆಯಾಗುವ ಸಾಧ್ಯತೆಗಳಿಲ್ಲ ಎಂದು ಫಾರ್ಮುಲಾ ಒನ್ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಹಾಗೂ ಸಿಇಒ ಆಗಿರುವ ಬೆರ್ನಿ ಎಕ್ಲೆಸ್ಟೋನ್ ತಿಳಿಸಿದ್ದಾರೆ.

2016ನೇ ಇಸವಿಯ ವರೆಗೆ ಫಾರ್ಮಲಾ ಒನ್ ಭಾರತಕ್ಕೆ ಆಗಮಿಸಲ್ಲ. ಹಾಗೊಂದು ವೇಳೆ 2016ರಲ್ಲಿ ಪುನರಾಗಮನವಾದರೂ ಸರಕಾರದ ಭಾರಿ ತೆರಿಗೆ ನೀತಿ ಸಮಸ್ಯೆ ಪರಿಹಾರವಾಗುವ ವರೆಗೆ ಆಯೋಜನೆಯಾಗುವುದು ಕಠಿಣ ಸಾಧ್ಯವಾಗಿದೆ ಎಂದಿದ್ದಾರೆ.

Indian Grand Prix

ಮುಂದಿನ ವರ್ಷವಂತೂ ಭಾರತದಲ್ಲಿ ಎಫ್1 ರೇಸ್ ಆಯೋಜನೆಯಾಗಲ್ಲ. ಬಹುಶ: 2016ರಲ್ಲಿ ಎಂದಿದ್ದಾರೆ. ನಿಮ್ಮ ಮಾಹಿತಿಗಾಗಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಢಾದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ 2011ರಿಂದ 2013ರ ವರೆಗೆ ಎಫ್1 ರೇಸ್ ಆಯೋಜನೆಯಾಗಿತ್ತು.

ಅಂದ ಹಾಗೆ ಸರಕಾರವು, ಎಫ್1 ರೇಸನ್ನು ಮನರಂಜನಾ ವಿಭಾಗದಲ್ಲಿ ಪರಿಗಣಿಸಿರುವುದು ಭಾರಿ ತೆರಿಗೆ ಹೊರೆಗೆ ಕಾರಣವಾಗಿದೆ. ಇದು ದೇಶಕ್ಕೆ ಮರು ಪ್ರವೇಶಿಸುವ ಎಫ್1 ಆಸೆಗಳಿಗೆ ಕಡಿವಾಣ ಹಾಕಲಿದೆ. ಅಷ್ಟೇ ಅಲ್ಲದೆ ವಿದೇಶದಿಂದ ಇಲ್ಲಿಗೆ ಆಗಮಿಸುವ ಎಫ್1 ರೇಸ್ ಕಾರುಗಳಿಗೆ ಸಾಮಾನ್ಯ ರಸ್ತೆ ಆಮದು ಕಾರುಗಳಿಗೆ ವಿಧಿಸುವಂತಹ ತೆರಿಗೆಗಳನ್ನು ವಿಧಿಸಲಾಗುತ್ತಿದೆ.

ಇವೆಲ್ಲ ತೆರಿಗೆ ಸಮಸ್ಯೆ ಒಂದೆಡೆಯಾದ್ದಲ್ಲಿ ಎಫ್1 ಕ್ಯಾಲೆಂಡರ್ ವೇಳಾಪಟ್ಟಿಯಲ್ಲಿ ಸ್ಥಾನಗಿಟ್ಟಿಸುವುದು ಕೂಡಾ ಇನ್ನೊಂದು ಸಮಸ್ಯೆಯಾಗಿ ಬಿಟ್ಟಿದೆ. ಯಾಕೆಂದರೆ ಅಜೆರ್‌ಬೈಜನ್ ಬಹುತೇಕ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಈ ಬಾರಿಯಂತೂ ರಷ್ಯಾದ ಸೋಚಿ ಹೊಸ ಸೇರ್ಪಡೆಯಾಗಿರಲಿದೆ. ಇನ್ನುಳಿದಂತೆ ಒಂದು ದಶಕದ ಬಳಿಕ ಆಸ್ಟ್ರೀಯಾ ರೇಸ್‌ ಆಯೋಜನೆಗೆ ಮರಳಲು ತುದಿಗಾಲಲ್ಲಿ ನಿಂತಿದೆ. ಈ ಎಲ್ಲ ಸನ್ನಿವೇಶಗಳ ಹಿನ್ನಲೆಯಲ್ಲಿ ಭಾರತಕ್ಕೆ ಎಫ್1 ರೇಸ್ ಕೂಟ ಮರಳುವುದು ಭಾರಿ ಕಷ್ಟ ಸಾಧ್ಯವಾಗಿದೆ.

English summary
Bernie Ecclestone, president and CEO, Formula One Management has poured a bucket of cold water on Indian Formula One enthusiasts and racing fans by recently stating that the motorsports event will not return to Indian soil before 2016. Even then a return in 2016 is unlikely to happen if the problems relating to heavy taxation by the government is not sorted out.
Story first published: Monday, March 10, 2014, 14:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark