2016ರಲ್ಲಿ ಜಾಗ್ವಾರ್ ಕಾಂಪಾಕ್ಟ್ ಎಸ್‌ಯುವಿ ಲಾಂಚ್

Written By:

ಜಾಗ್ವಾರ್ ಸಿ-ಎಕ್ಸ್17 ನಿರ್ಮಾಣ ಹಂತ ತಲುಪಲು ಸನ್ನಿಹಿತವಾಗಿದ್ದು, ವರದಿಗಳ ಪ್ರಕಾರ 2016ರ ವೇಳೆಯಲ್ಲಿ ಈ ಕಾನ್ಸೆಪ್ಟ್ ಕಾಂಪಾಕ್ಟ್ ಎಸ್‌ಯುವಿ ಅಥವಾ ಕ್ರಾಸೋವರ್ ಮಾದರಿಯು ಸಿದ್ಧಗೊಳ್ಳಲಿದೆ. ನಿಮ್ಮ ಮಾಹಿತಿಗಾಗಿ, ಬ್ರಿಟನ್ ಮೂಲದ ಜಾಗ್ವಾರ್ ಈಗಾಗಲೇ ಸಿ-ಎಕ್ಸ್17 ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದೆ. ಇದು ರಿಯರ್ ವೀಲ್ ಡ್ರೈವ್ ಚಾಸೀ ಪಡೆದುಕೊಳ್ಳಲಿದೆ.

ಇದು ಪೋರ್ಷೆ ಮೇಕನ್ ಕಾಂಪಾಕ್ಟ್ ಎಸ್‌ಯುವಿ ಆೃವೃತ್ತಿಗೆ ನೇರ ಪ್ರತಿಸ್ಪರ್ಧಿಯಾಗಿರಲಿದೆ. ಇದರಂತೆ ನಿರ್ವಹಣೆ ಜತೆ ವಿನ್ಯಾಸಕ್ಕೆ ಅತಿ ಹೆಚ್ಚು ಪ್ರಾಧಾನ್ಯತೆ ಕೊಡಲಾಗಿದೆ.

To Follow DriveSpark On Facebook, Click The Like Button
Jaguar

ನೂತನ ಜಾಗ್ವಾರ್ ಕಾರು, ಪೋರ್ಷೆ ಮಾದರಿಗಿಂತಲೂ ಹೆಚ್ಚು ಉದ್ದವಾಗಿರುವ ವೀಲ್ ಬೇಸ್ ಹಾಗೂ ಇಂಟಿರಿಯರ್ ಸ್ಥಳಾವಕಾಶವನ್ನು ಪಡೆದುಕೊಳ್ಳಲಿದೆ. ಇದು ಅಲ್ಯೂಮಿನಿಯಂ ಪರಿಕರಗಳಿಂದ ನಿರ್ಮಾಣವಾಗಲಿದೆ.

ಈ ಮೂಲಕ ಹೆಚ್ಚು ಸಾರ್ವತ್ರಿಕ, ಕಡಿಮೆ ವೈಭವ ಹಾಗೂ ಕ್ರಾಸ್ಒವರ್ ವಿಭಾಗದ ಮಾದರಿಗಳನ್ನು ಪರಿಚಯಿಸಲು ಜಾಗ್ವಾರ್‌ಗೆ ನೆರವಾಗಲಿದೆ. ಇನ್ನೊಂದೆಡೆ ಲ್ಯಾಂಡ್ ರೋವರ್ ಬೃಹತ್ತಾದ, ಆಫರ್ ರೋಡ್ ಹಾಗೂ ಐಷಾರಾಮಿ ಎಸ್‌ಯುವಿಗಳತ್ತ ಗಮನ ಕೇಂದ್ರಿಕರಿಸಿದೆ.

ಅಂದ ಹಾಗೆ ಜಾಗ್ವಾರ್ ಸಿ-ಎಕ್ಸ್17, ಲ್ಯಾಂಡ್ ರೋವರ್‌ನ ಟರ್ಬೊಚಾರ್ಜ್ಡ್, ಫೋರ್ ಸಿಲಿಂಡರ್ ಇಗ್ನೆನಿಯಂ ರೇಂಜ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಕಡಿಮೆ ಕಾರ್ಬನ್ ಡೈಓಕ್ಸೈಡ್ ಹೊರಸೂಸಲಿದೆ.

English summary
Jaguar C-X17, the concept compact SUV/crossover model is set to make its production debut in 2016. As such, the British automaker has already begun development of the vehicle in earnest.
Story first published: Wednesday, April 2, 2014, 11:02 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark