ಕರ್ನಾಟಕದಲ್ಲಿ ಆಲ್ಪಾ ಪ್ರಯಾಣಿಕ ಆಟೋ ರಿಕ್ಷಾ ಬಿಡುಗಡೆ

Written By:

16.5 ಬಿಲಿಯನ್ ಅಮೆರಿಕನ್ ಡಾಲರ್ ಒಡೆತನದ ಮಹೀಂದ್ರ ಸಂಸ್ಥೆಯ ಭಾಗವಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್, ಕರ್ನಾಟಕದಲ್ಲಿ ಹೊಸತಾದ ಆಲ್ಪಾ ತ್ರಿಚಕ್ರ ಶ್ರೇಣಿಯ ಆಟೋ ರಿಕ್ಷಾವನ್ನು ಬಿಡುಗಡೆಗೊಳಿಸಿದೆ.

ಇದು ಎರಡು ಶ್ರೇಣಿಯ ಆಟೋ ರಿಕ್ಷಾಗಳನ್ನು ಹೊಂದಿರಲಿದೆ. ಇವೆರಡು ಗ್ರಾಹಕ ಅಭಿರುಚಿಗೆ ತಕ್ಕಂತೆ ವಿಶಿಷ್ಟ ವೈಶಿಷ್ಟ್ಗಗಳನ್ನು ಪಡೆದುಕೊಳ್ಳಲಿದೆ. ಅವುಗಳೆಂದರೆ,

  • ಆಲ್ಪಾ ಡಿಎಕ್ಸ್ ಮತ್ತು
  • ಆಲ್ಪಾ ಚಾಂಪ್
To Follow DriveSpark On Facebook, Click The Like Button
mahindra Alfa

ಸಣ್ಣ ವಾಣಿಜ್ಯ ವಾಹನಗಳ ವಿಭಾಗದಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿರುವ ಮಹೀಂದ್ರ ಪ್ರಯಾಣಿಕ ಶ್ರೇಣಿಯ ತ್ರಿಚಕ್ರ ವಾಹನ ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿರುವ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್‌ನ ಆಟೋಮೋಟಿವ್ ವಿಭಾಗದ ಚೀಫ್ ಮಾರ್ಕೆಟಿಂಗ್ ಆಫೀಸರ್ ವಿವೇಕ್ ನಾಯರ್, "ಕಳೆದ ಅನೇಕ ವರ್ಷಗಳಿಂದ ಮಹೀಂದ್ರ ಆಲ್ಪಾ ಗ್ರಾಹಕರ ಜನಪ್ರಿಯೆ ಆಯ್ಕೆಯಾಗಿದ್ದು, ಗ್ರಾಹಕ ಸೇವೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಆಲ್ಪಾ ಪ್ರಯಾಣಿಕ ಶ್ರೇಣಿಯ ತ್ರಿಚಕ್ರ ವಾಹಗಳನ್ನು ಕರ್ನಾಟಕಕ್ಕೆ ಪರಿಚಯಿಸಲಾಗಿದೆ" ಎಂದಿದ್ದಾರೆ.

ಪ್ರಬಲ ಹಾಗೂ ಬಲಿಷ್ಠ ದೇಹ ವಿನ್ಯಾಸವನ್ನು ಹೊಂದಿರುವ ಆಲ್ಪಾ, ಹೆಚ್ಚು ಸ್ಥಳಾವಕಾಶದೊಂದಿಗೆ ಪ್ರಯಾಣಿಕರಿಗೆ ಆರಾಮದಾಯಕ ಚಾಲನೆ ಪ್ರದಾನ ಮಾಡಲಿದೆ. ಇದು ಅತ್ಯುತ್ತಮ ಇಂಧನ ಕ್ಷಮತೆ ಹೊಂದಿರುವುದಾಗಿಯೂ ಸಂಸ್ಥೆ ತಿಳಿಸಿದೆ. ಇದು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರಲಿದೆ.

ಆಲ್ಪಾ ಡಿಎಕ್ಸ್

  • ಬೆಸ್ಟ್ ಇನ್ ಕ್ಲಾಸ್
  • 4 ಬೋಲ್ಟ್ ವೀಲ್ ಮೌಟಿಂಗ್,
  • ಹೆಚ್ಚು ಸ್ಥಳಾವಕಾಶಯುಕ್ತ ಕ್ಯಾಬಿನ್,
  • ಆರಾಮದಾಯಕ ಸೀಟು
  • ಕಡಿಮೆ ವೈಬ್ರೇಷನ್

ಆಲ್ಪಾ ಚಾಂಪ್

  • ಕಾಂಪಾಕ್ಟ್ ದೇಹ ವಿನ್ಯಾಸ
  • ಉತ್ತಮ ಪಿಕಪ್, ಮೈಲೇಜ್
  • ವಾಹನ ದಟ್ಟಣೆ, ಅಡ್ಡಾದಿಡ್ಡಿ ರಸ್ತೆಯಲ್ಲೂ ಉತ್ತಮ ಅನುಭವ,
English summary
Mahindra & Mahindra Ltd, a part of the US $ 16.5 billion Mahindra Group, today announced the launch of the Alfa Passenger range in Karnataka, thereby enhancing its coveted offering in the three-wheeler segment.
Story first published: Saturday, November 22, 2014, 10:16 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark