ಮಹೀಂದ್ರ ಸ್ಕಾರ್ಪಿಯೊಗೂ ತಟ್ಟಿದ ರಿಕಾಲ್ ಬಿಸಿ

Written By:

ಗಮನಾರ್ಹ ಬೆಳವಣಿಯೊಂದರಲ್ಲಿ ದೇಶದ ಮುಂಚೂಣಿಯ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ನಿರ್ಮಾಣ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ತನ್ನ ಜನಪ್ರಿಯ ಎಸ್‌ಯುವಿ ಸ್ಕಾರ್ಪಿಯೊ ನಿರ್ದಿಷ್ಟ ಮಾದರಿಗಳನ್ನು ಹಿಂಪಡೆಯಲು ನಿರ್ಧರಿಸಿದೆ.

ದೋಷಯುಕ್ತ ಪ್ರೆಶರ್ ವಾಲ್ವ್ ಹಿನ್ನಲೆಯಲ್ಲಿ 23,519 ಯುನಿಟ್‌ಗಳಷ್ಟು ಸ್ಕಾರ್ಪಿಯೊ ಮಾದರಿಗಳನ್ನು ಹಿಂಪಡೆಯಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸ್ಕಾರ್ಪಿಯೊದ ಇಎಕ್ಸ್ ವೆರಿಯಂಟ್‌ನಲ್ಲಿ ಮಾತ್ರ ಈ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಅದನ್ನು ಮಾತ್ರ ರಿಕಾಲ್ ಮಾಡಲಾಗುತ್ತದೆ.

To Follow DriveSpark On Facebook, Click The Like Button
Mahindra

2013 ಮೇ ತಿಂಗಳಿಂದ 2013 ನವೆಂಬರ್ ತಿಂಗಳ ಅವಧಿಯಲ್ಲಿ ನಿರ್ಮಿಸಿರುವ ಸ್ಕಾರ್ಪಿಯೊ ಇಎಕ್ಸ್ ಮಾದರಿಗಳಿಗೆ ಇದು ಅನ್ವಯವಾಗಲಿದೆ. ಉಳಿದ ಮಾದರಿಗಳಿಗೆ ಇಂತಹ ಯಾವುದೇ ಸಮಸ್ಯೆ ಇರುವುದಿಲ್ಲ.

ಅಷ್ಟೇ ಅಲ್ಲದೆ ಯಾವುದೇ ಹೆಚ್ಚುವರಿ ಶುಲ್ಕ ಪಾವತಿ ಮಾಡದೆ ಸಮಸ್ಯೆ ಬಗೆಹರಿಸಿ ಕೊಡಲಾಗುವುದು ಎಂದು ಮಹೀಂದ್ರ ತಿಳಿಸಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ಪ್ರೆಶರ್ ವಾಲ್ವ್ ಅಸ್ಥಿರವಾಗಿದೆ ಎಂಬುದನ್ನು ಎಂಜಿನಿಯರ್‌ಗಳು ಮನಗಂಡಿದ್ದಾರೆ.

English summary
Mahindra & Mahindra will be recalling its popular SUV the Scorpio in India. The recall will affect 23,519 vehicles as there is an issue with the pressure valves. Only the EX trim of Scorpio has the issue and is being recalled.
Story first published: Wednesday, July 9, 2014, 11:38 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark