ಡಸ್ಟರ್, ಟೆರನೊ, ಸಫಾರಿ ಹಿಂದಿಕ್ಕಿದ ಸ್ಕಾರ್ಪಿಯೊ

By Nagaraja

ಇದೀಗಷ್ಟೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಹೊಸ ತಲೆಮಾರಿನ ಸ್ಕಾರ್ಪಿಯೊ ಮಾರಾಟದ ವಿಚಾರದಲ್ಲೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ವರದಿಗಳ ಪ್ರಕಾರ ಮಹೀಂದ್ರ ಸ್ಕಾರ್ಪಿಯೊ, ತನ್ನ ಪ್ರತಿಸ್ಪರ್ಧಿಗಳಾದ ರೆನೊ ಡಸ್ಟರ್, ನಿಸ್ಸಾನ್ ಟೆರನೊ ಹಾಗೂ ಟಾಟಾ ಸಫಾರಿ ಸ್ಟ್ರೋಮ್ ಮಾರಾಟವನ್ನು ಹಿಂದಿಕ್ಕಿದೆ. ಆದರೆ ಇಲ್ಲಿ ಗಮನಾರ್ಹ ಸಂಗತಿಯೆಂದರೆ ಸೆಪ್ಟೆಂಬರ್ ತಿಂಗಳಲ್ಲೇ ಸ್ಕಾರ್ಪಿಯೊ ಎಂಟ್ರಿ ಕೊಟ್ಟರೂ ಸಹ ಹಳೆ ಸ್ಕಾರ್ಪಿಯೊ ಮಾರಾಟ ಕುದುರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಾಮಾನ್ಯವಾಗಿ ಹೊಸ ಮಾದರಿಯೊಂದು ಮಾರುಕಟ್ಟೆಗೆ ಎಂಟ್ರಿ ಕೊಡುವಾಗ ಸಹಜವಾಗಿಯೇ ಹಳೆ ಮಾದರಿಯ ಬೇಡಿಕೆ ಕುಂದುತ್ತದೆ. ಆದರೆ ಸ್ಕಾರ್ಪಿಯೊ ವಿಚಾರದಲ್ಲಿ ಫಲಿತಾಂಶ ಭಿನ್ನವಾಗಿದೆ.

Mahindra Scorpio

2014 ಸೆಪ್ಟೆಂಬರ್ ತಿಂಗಳಲ್ಲಿ ಸ್ಕಾರ್ಪಿಯೊ 6,060 ಯುನಿಟ್ ‌ಗಳಷ್ಟು ಮಾರಾಟ ದಾಖಲಿಸಿದೆ. ಅದೇ ಹೊತ್ತಿಗೆ ಡಸ್ಟರ್ 3,410, ಟೆರನೊ 1,768 ಹಾಗೂ ಸಫಾರಿ ಸ್ಟ್ರೋಮ್ 742 ಯುನಿಟ್‌ಗಳಷ್ಟು ಮಾರಾಟ ಕಂಡುಕೊಂಡಿದೆ. ವಿಶೇಷವೆಂದರೆ ಡಸ್ಟರ್, ಟೆರನೊ ಹಾಗೂ ಸಫಾರಿ ಮಾರಾಟವನ್ನು ಒಟ್ಟು ಸೇರಿಸಿದರೂ (5,920) ಸ್ಕಾರ್ಪಿಯೊ ಮಾರಾಟವನ್ನು ಹಿಂದಿಕ್ಕುವಲ್ಲಿ ವಿಫಲವಾಗಿದೆ.

2014 ಸೆಪ್ಟೆಂಬರ್ 25ರಂದು ಬಿಡುಗಡೆಯಾಗಿರುವ ಹೊಸ ತಲೆಮಾರಿನ ಸ್ಕಾರ್ಪಿಯೊ ಪ್ರಾರಂಭಿಕ ಬೆಲೆ 7.98 ಲಕ್ಷ ರು.ಗಳಾಗಿದೆ. ಇದು ಐದು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ.

Most Read Articles

Kannada
English summary
In the month of September 2014, Mahindra Scorpio sales stood at 6,060 units, while that of Renault Duster were at 3,410 units, Nissan Terrano at 1,768 units and that of Safari (+ Storme) were at 742 units. Together, Duster, Terrano and Safari Storme sold 5,920 units in the month of September 2014. 
Story first published: Saturday, October 11, 2014, 12:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X