ಮಹೀಂದ್ರ ವೆರಿಟೊ ವಿದ್ಯುತ್ ಚಾಲಿತ ವಾಹನ ಪ್ರದರ್ಶನ

Written By:

ದೇಶದಲ್ಲಿರುವ ಏಕಮಾತ್ರ ವಿದ್ಯುತ್ ಚಾಲಿತ ವಾಹನ ಸಂಸ್ಥೆಯಾಗಿರುವ ಮಹೀಂದ್ರ ಸಂಸ್ಥೆಯು ಈ ಬಾರಿಯ ಆಟೋ ಎಕ್ಸ್ ಪೋದಲ್ಲೂ ಜನರ ನಿರೀಕ್ಷೆಗಳನ್ನು ಭಂಗ ಮಾಡಿಲ್ಲ. ಹೌದು, ಇದೀಗಷ್ಟೇ ಅಂತ್ಯಗೊಂಡಿರುವ 12ನೇ ಆಟೋ ಎಕ್ಸ್ ಪೋದಲ್ಲಿ ಮಹೀಂದ್ರ ತನ್ನ ನೂತನ ವೆರಿಟೊ ಎಲೆಕ್ಟ್ರಿಕ್ ವಾಹನವನ್ನು ಪ್ರದರ್ಶಸಿದೆ.

ನಿಮಗೆ ತಿಳಿದಿರುವಂತೆಯೇ ಮಹೀಂದ್ರದ ಫಾರ್ಮುಲಾ ಇ ಎಲೆಕ್ಟ್ರಿಕ್ ರೇಸ್ ಕಾರು ಅತಿ ಹೆಚ್ಚು ಗಮನ ಕೇಂದ್ರಿತವಾಗಿತ್ತು. ಹಾಗೆಯೇ ಎಕ್ಸ್‌ಯುವಿ500 ಕೂಡಾ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿತ್ತು. ಇವೆಲ್ಲದರ ನಡುವೆ ಹ್ಯಾಲೊ ಎಲೆಕ್ಟ್ರಿಕ್ ಸ್ಪೋರ್ಟ್ ಕಾರನ್ನು ಮಹೀಂದ್ರ ಪ್ರದರ್ಶಿಸಿತ್ತು. ಈ ನಡುವೆ ಎಲ್ಲರ ಗಮನ ಅತ್ತ ಸರಿದಿತ್ತು.

Mahindra Verito

ಈ ಹಿಂದೆ ಎರಡು ವರ್ಷಗಳ ಹಿಂದೆ ಅಂದೆ 2012 ಆಟೋ ಎಕ್ಸ್ ಪೋದಲ್ಲಿ ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ವಾಹನ ಮೊದಲ ಬಾರಿಗೆ ಪ್ರದರ್ಶನಗೊಂಡಿತ್ತು. ಇದರಂತೆ ಈ ಆಟೋ ಎಕ್ಸ್ ಪೋದಲ್ಲಿ ನಿರ್ಮಾಣ ಸಿದ್ಧ ಮಾದರಿಯನ್ನು ಪ್ರದರ್ಶಿಸುವಲ್ಲಿ ಕಂಪನಿ ಯಶಸ್ವಿಯಾಗಿದೆ.

ಫೇಸ್‌ಲಿಫ್ಟ್ ವೆರಿಟೊ ಸೆಡಾನ್ ಆವೃತ್ತಿಯ ಆಧಾರದಲ್ಲಿ ವೆರಿಟೊ ವಿದ್ಯುತ್ ಚಾಲಿತ ವಾಹನ ಪ್ರದರ್ಶಿಸಲಾಗಿದೆ. ಇದು 72 ವೋಲ್ಟ್ ಲಿಥಿಯಂ ಇಯಾನ್ ಬ್ಯಾಟರಿಯಿಂದ ನಿಯಂತ್ರಿಸ್ಪಡಲಿದ್ದು, ಏಳು ಗಂಟೆಗಳಲ್ಲಿ ಚಾರ್ಜ್ ಮಾಡಿಸಬಹುದಾಗಿದೆ.

ಇದರಲ್ಲಿ ಡ್ರೈವ್, ಪಾರ್ಕ್, ರಿವರ್ಸ್ ಮತ್ತು ಬೂಸ್ಟ್‌ಗಳೆಂಬ ನಾಲ್ಕು ಮೋಡ್‌ಗಳು ಲಭ್ಯಿವರಲಿದೆ. ಇದು 80 ಕೀ.ಮೀ. ರೇಂಜ್ ವರೆಗೂ ಹಾಗೆಯೇ ಗಂಟೆಗೆ ಗರಿಷ್ಠ 85 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

English summary
Mahindra has major plans chalked out for the future for its electric vehicles and this was never more evident than at the automaker's stall at the 2014 Auto Expo.
Story first published: Thursday, February 13, 2014, 17:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark