ಮಾರುತಿ ಸುಜುಕಿ ಸ್ವಿಫ್ಟ್, ಡಿಜೈರ್ ವಿಶೇಷ ಆವೃತ್ತಿ ಲಾಂಚ್

Written By:

ಹಬ್ಬದ ಆವತ್ತಿ ಇನ್ನೇನು ಆರಂಭವಾಗಲಿರುವಂತೆಯೇ ಮಾರಾಟಕ್ಕೆ ಇನ್ನಷ್ಟು ಚುರುಕು ಮುಟ್ಟಿಸಿರುವ ದೇಶದ ನಂ. 1 ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಜನಪ್ರಿಯ ಸ್ವಿಫ್ಟ್ ಹಾಗೂ ಡಿಜೈರ್ ವಿಶೇಷ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ.

ಮಾರುತಿಯ ವಿಶೇಷ ಆವೃತ್ತಿಗಳು ಸ್ವಿಫ್ಟ್ ಸಿಲ್ವರ್ ಪ್ಲಸ್ ಮತ್ತು ಡಿಜೈರ್ ರಿಗಲಿಯಾ ಎಂದು ಅರಿಯಲ್ಪಡಲಿದೆ. ಈ ಎರಡು ಮಾದರಿಗಳು ವಿಶೇಷ ಪ್ಯಾಕೇಜ್‌ಗಳೊಂದಿಗೆ ರಿಯಾಯಿತಿ ದರಗಳಲ್ಲಿ ಲಭ್ಯವಾಗಲಿದೆ.

ಹಾಗಿದ್ದರೂ ದರಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇವೆರಡು ಅನುಕ್ರಮವಾಗಿ 4.66 ಮತ್ತು 5.13 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ ಮುಂಬೈ) ದುಬಾರಿಯೆನಿಸಲಿದೆ.

To Follow DriveSpark On Facebook, Click The Like Button
Maruti Suzuki

ಮಾರುತಿ ಸ್ವಿಫ್ಟ್ ಸಿಲ್ವರ್ ಪ್ಲಸ್ ಸೀಮಿತ ಆವೃತ್ತಿ ವಿಶಿಷ್ಟತೆಗಳು:

ಸ್ಮಾರ್ಟ್‌ಫೋನ್ ಹೋಲ್ಡರ್ ಜತೆ ಚಾರ್ಜರ್,

ರಿವರ್ಸ್ ಪಾರ್ಕಿಂಗ್ ಸೆನ್ಸಾರ್,

ನೆಕ್ ಪಿಲ್ಲೋ,

ಬ್ಯಾಕ್ ಕುಶನ್ ಮತ್ತು ಪ್ರೀಮಿಯಂ ಸೀಟ್ ಅಪ್‌ಹೋಲ್‌ಸ್ಟ್ರೆ,

ಸ್ಟೀರಿಂಗ್ ಕವರ್, ಸೋನಿ ಸ್ಟೀರಿಯೊ, ಸ್ಪೀಕರ್ ಸಿಸ್ಟಂ

ಮೇಲೆ ತಿಳಿಸಿದ ಈ ಎಲ್ಲ ವೈಶಿಷ್ಟ್ಯಗಳ ನೈಜ ದರ 31,745 ರು.ಗಳಾಗಿದ್ದು, ಈ ಹಬ್ಬದ ಆವೃತ್ತಿಯಲ್ಲಿ ಗ್ರಾಹಕರು 4,245 ರು.ಗಳಷ್ಟು ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಅಂದರೆ 27,500 ರು.ಗಳಿಗೆ ಲಭ್ಯವಾಗಲಿದೆ.

ಮಾರುತಿ ಡಿಜೈರ್ ರಿಗಲಿಯಾ ಸೀಮಿತ ಆವೃತ್ತಿ:

ಸಿಗ್ನೇಚರ್ ಸೀಟು ಕವರ್,

ಫ್ಲೋರ್ ಮ್ಯಾಟ್,

ಇಂಟಿರಿಯರ್ ಸ್ಟೈಲಿಂಗ್ ಕಿಟ್,

ಹೊಸ ಬಾಡಿ ಗ್ರಾಫಿಕ್ಸ್, ಡಿಕಾಲ್ಸ್,

ರಿವರ್ಸ್/ಪಾರ್ಕಿಂಗ್ ಸೆನ್ಸಾರ್,

ಈ ಎಲ್ಲ ಪ್ಯಾಕೇಜ್‌ಗಳ ನೈಜ ದರ 18,810 ರು.ಗಳಾಗಿದ್ದು, ನೀವೀಗ ರು. 5,010ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಅಂದರೆ ಮೇಲಿನ ಪ್ಯಾಕೇಜ್ ರು. 13,800ಗಳಿಗೆ ಲಭ್ಯವಾಗಲಿದೆ. ಇದೇ ಸಂದರ್ಭದಲ್ಲಿ ಪ್ರಾದೇಶಿಕ ಪ್ರದೇಶಗಳಲ್ಲಿ ಹಬ್ಬದ ಆಚರಣೆಯನ್ನು ಗಮನಲ್ಲಿಟ್ಟುಕೊಂಡು ಅಂತಹ ನಿರ್ದಿಷ್ಟ ಪ್ರದೇಶಗಳಲ್ಲಿ ವಿಶೇಷ ಆಫರುಗಳನ್ನು ಮಾರುತಿ ಮುಂದಿಡುತ್ತಿದೆ. 

English summary
Maruti Suzuki has introduced limited edition variants Swift and Dzire, badged Swift Silver Plus and DZire Regalia respectively. 
Story first published: Monday, September 22, 2014, 16:54 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark