ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಆಟೋಮ್ಯಾಟಿಕ್ ಬಿಡುಗಡೆ

Written By:

ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳಲ್ಲಿ ಮಿಟ್ಸುಬಿಸಿ ಒಂದಾಗಿದ್ದು ತನ್ನ ಏಕಮಾತ್ರ ಫ್ಲ್ಯಾಗ್‌ಶಿಪ್ ಪಜೆರೊ ಸ್ಪೋರ್ಟ್ಸ್ ಮಾದರಿಯನ್ನು ಭಾರತಕ್ಕೆ ಒದಗಿಸುತ್ತಿದೆ.

ಇದೀಗ ಸಂಸ್ಥೆಯು ಐಕಾನಿಕ್ ಪಜೆರೊ ಸ್ಪೋರ್ಟ್ಸ್‌ನ ಆಟೋಮ್ಯಾಟಿಕ್ ವೆರಿಯಂಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ಮಾರಾಟಕ್ಕೆ ಇನ್ನಷ್ಟು ಉತ್ತೇಜನ ನೀಡುವ ನಿರೀಕ್ಷೆಯಲ್ಲಿದೆ.

ಬೆಲೆ - 23.55 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಕೇವಲ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮಾತ್ರವಲ್ಲದೆ ಮ್ಯಾನುವಲ್ ಮಾದರಿಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಪಡೆದುಕೊಂಡಿದೆ. ಇನ್ನು ಕಾರಿನೊಳಗೆ ನೇವಿಗೇಷನ್ ಸಿಸ್ಟಂ, ಇಂಟೇಗ್ರೇಟಡ್ ಡಿವಿಡಿ ಪ್ಲೇಯರ್, ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಮತ್ತು ಬೂಟ್‌ನಲ್ಲಿ ಕೂಲರ್ ಬಾಕ್ಸ್ ಮುಂತಾದ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಎಂಜಿನ್

ಇನ್ನು ಕಾರಿನಡಿಯಲ್ಲಿ 2.5 ಲೀಟರ್ ಫೋರ್ ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.

4x4ನಲ್ಲೂ ಲಭ್ಯ

ನಿಮ್ಮ ಮಾಹಿತಿಗಾಗಿ ಹೊಸ ಪಜೆರೊ ಸ್ಪೋರ್ಟ್ಸ್ ಆಟೋಮ್ಯಾಟಿಕ್ 4x4 ಆಯ್ಕೆಯಲ್ಲೂ ಲಭ್ಯವಿರಲಿದೆ. ಆಟೋಮ್ಯಾಟಿಕ್‌ ಮಾದರಿಯಲ್ಲಿ ಫೈವ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹಿಂದುಗಡೆಗೆ ಚೈತನ್ಯ ರವಾನಿಸಲಿದೆ. ಅಲ್ಲದೆ ಅತ್ಯುತ್ತಮ ಇಂಧನ ಕ್ಷಮತೆ ನೀಡಲಿದೆ. ಅಂದ ಹಾಗೆ ಮ್ಯಾನುವಲ್ ಪಜೆರೊ ಸ್ಪೋರ್ಟ್ಸ್ ಮಾದರಿಯು ಪ್ರತಿ ಲೀಟರ್‌ಗೆ 12.1 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಒಟ್ಟಿನಲ್ಲಿ ಒತ್ತಡ ರಹಿತ ಚಾಲನೆಯನ್ನು ಇಷ್ಟಪಡುವ ವಾಹನ ಪ್ರೇಮಿಗಳಿಗೆ ಮಿಟ್ಸುಬಿಸಿ ಪಜೆರೊ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಅತ್ಯುತ್ತಮ ಅನುಭವ ನೀಡಲಿದೆ.

Mitsubishi Pajero Sport AT

ಸ್ಪರ್ಧಿಗಳು

ಹೊಸ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ಸ್ ಪ್ರಮುಖವಾಗಿಯೂ ಹ್ಯುಂಡೈ ಸಾಂಟಾಫೆ, ಹೋಂಡಾ ಸಿಆರ್-ವಿ ಮತ್ತು ಸ್ಯಾಗ್ಯೊಂಗ್ ರೆಕ್ಸ್ಟಾನ್ ಆಟೋಮ್ಯಾಟಿಕ್ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

ಸಮಸ್ಯೆ ಏನು?

ಇಷ್ಟೆಲ್ಲ ಆದರೂ ದೇಶದಲ್ಲಿ ಅತ್ಯಂತ ವಿರಳ ಸೇಲ್ಸ್ ಆಂಡ್ ಸರ್ವಿಸ್ ಕೇಂದ್ರಗಳಿರುವುದು ಸಂಸ್ಥೆಯ ಜೊತೆಗೆ ಮಿಟ್ಸುಬಿಸಿ ಪ್ರೇಮಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

English summary
The Japanese manufacturer Mitsubishi has launched its Pajero Sport AT in India. They have priced their vehicle starting from INR 23,55,000 ex-showroom, Delhi.
Story first published: Monday, November 17, 2014, 10:12 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark