ಭಾರತದ ಬುಲೆಟ್ ಪ್ರೂಫ್ ಕಾರು ತಿರಸ್ಕರಿಸಿದ ಪಾಕ್ ಪ್ರಧಾನಿ

Written By:

ಮುಂದಿನ ವಾರ ನೇಪಾಳ ರಾಜಧಾನಿ ಕಾಠ್ಮಂಡುವಿನಲ್ಲಿ ಸಾಗಲಿರುವ ದಕ್ಷಿಣ ಏಷ್ಯಾ ರಾಷ್ಟ್ರಗಳ ಸಮಾವೇಶಕ್ಕೆ ತೆರಳಲಿರುವ ಪಾಕಿಸ್ತಾನ ಪ್ರಧಾನ ಮಂತ್ರಿ ನವಾಜ್ ಷರೀಫ್, ಭದ್ರತೆಗಾಗಿ ಏರ್ಪಡಿಸಲಾಗಿದ್ದ ಭಾರತೀಯ ಮೂಲದ ಬುಲೆಟ್ ಪ್ರೂಫ್ ವಾಹನವನ್ನು ತಿರಸ್ಕರಿಸಿರುವುದಾಗಿ ನೇಪಾಳ ಅಧಿಕಾರಿ ಮೂಲಗಳು ತಿಳಿಸಿವೆ.

ಇದರ ಬದಲಾಗಿ ಷರೀಫ್ ತಮ್ಮದೇ ಕಾರಿನಲ್ಲಿ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಇಲ್ಲಿಗೆ ಭೇಟಿ ಕೊಡುವ ಉಳಿದೆಲ್ಲ ನಾಯಕರಿಗೆ ಭದ್ರತಾ ವಾಹನಗಳನ್ನು ಭಾರತದಿಂದ ಕರೆ ತರಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಖಗಾ ನಾಥ್ ಅಧಿಕಾರಿ ತಿಳಿಸಿದ್ದಾರೆ.

Nawaz Sharif

ಪಾಕಿಸ್ತಾನ ಪ್ರಧಾನಿ ಉದ್ದೇಶಪೂರ್ವಕವಾಗಿಯೇ ಭಾರತವನ್ನು ತಿರಸ್ಕರಿಸುವ ಪ್ರಯತ್ನ ಮಾಡಿದ್ದಾರೆ ಎಂಬುದನ್ನು ಹೇಳಲು ನಿರಾಕರಿಸಿರುವ ವಕ್ತಾರರು, ಅಮೆರಿಕ ಅಧ್ಯಕ್ಷರು ಸಹ ತಾವು ಭೇಟಿ ಕೊಡುವ ಪ್ರದೇಶಕ್ಕೆ ತಮ್ಮದೇ ಕಾರಿನಲ್ಲಿ ಸಂಚರಿಸುತ್ತಾರೆ. ಇದೇ ನೀತಿಯನ್ನು ಪಾಕಿಸ್ತಾನ ಪ್ರಧಾನಿ ಅನುಸರಿಸಿರುತ್ತಾರೆ. ಹಾಗಾಗಿ ಸಮಸ್ಯೆಗಳೇನಿಲ್ಲ ಎಂದಿದ್ದಾರೆ.

ಕಳೆದ ಅಕ್ಟೋಬರ್ ತಿಂಗಳಿಂದ ಭಾರತ ಹಾಗೂ ಪಾಕಿಸ್ತಾನ ನಡುವಣ ಪರಿಸ್ಥಿತಿ ಪದೇ ಪದೇ ಬಿಗಡಾಯಿಸುತ್ತಿದ್ದು, ಗಡಿಯಾಚೆಗಿನ ಗುಂಡಿನ ದಾಳಿ ಮುಂದುವರಿಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವಂತಾಗಿದೆ.

ಅಂದ ಹಾಗೆ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ಸಮಾವೇಶದಲ್ಲಿ ಭಾರತ, ಪಾಕಿಸ್ತಾನ ಸೇರಿದಂತೆ ಅಪಘಾನಿಸ್ತಾನ, ಬಾಂಗ್ಲಾದೇಶ, ಭೂತನ್, ಮಾಲ್ದೀವ್, ಶ್ರೀಲಂಕಾ ಮತ್ತು ಆತಿಥ್ಯ ನೇಪಾಳ ರಾಷ್ಟ್ರದ ನಾಯಕರು ಭಾಗವಹಿಸಲಿದ್ದಾರೆ. ಇದು 2014 ನವೆಂಬರ್ 26 ಹಾಗೂ 27ರಂದು ನಡೆಯಲಿದೆ.

English summary
Pakistan's Prime Minister Nawaz Sharif has rejected the use of a bulletproof car provided by rival India for next week's SAARC summit will be held at Kathmandu, Nepal. 
Story first published: Tuesday, November 18, 2014, 12:57 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark