ಚೆಂಗ್ಡು ಮೋಟಾರು ಶೋಗೆ ಹರಡಿದ ರೋಲ್ಸ್ ರಾಯ್ಸ್ ಘೋಸ್ಟ್ ಭೀತಿ

By Nagaraja

ಚೀನಾದಲ್ಲಿ ನಡೆಯುತ್ತಿರುವ ಪ್ರಖ್ಯಾತ 2014 ಚೆಂಗ್ಡು ಮೋಟಾರು ಶೋದಲ್ಲಿ ಬಿಎಂಡಬ್ಲ್ಯು ಎಜಿ ಒಡೆತನದಲ್ಲಿರುವ ಬ್ರಿಟನ್‌ನ ಐಕಾನಿಕ್ ಬ್ರಾಂಡ್ ಆಗಿರುವ ರೋಲ್ಸ್ ರಾಯ್ಸ್ ತನ್ನ ಹೊಸ ಮಾದರಿಯ ಪ್ರದರ್ಶನದೊಂದಿಗೆ ಗಮನ ಸೆಳೆದಿದೆ.

ಹೌದು, ಬ್ರಿಟನ್‌ನ ಈ ದೈತ್ಯ ವಾಹನ ತಯಾರಕ ಸಂಸ್ಥೆಯು ಅತ್ಯಾಕರ್ಷಕ ರೋಲ್ಸ್ ರಾಯ್ಸ್ ಘೋಸ್ಟ್ ಸಿರೀಸ್ II ಮಾದರಿಯನ್ನು ಚೆಂಗ್ಡು ಮೋಟಾರು ಶೋದಲ್ಲಿ ಪ್ರದರ್ಶಿಸಿದೆ.

Rolls Royce Ghost Series II

ಇಡೀ ಜಗತ್ತೇ ಎದುರು ನೋಡುತ್ತಿರುವ ಅತ್ಯಂತ ಐಷಾರಾಮಿ ಕಾರುಗಳಲ್ಲಿ ಒಂದಾಗಿರುವ ಘೋಸ್ಟ್ ಸಿರೀಸ್ II ಹೈ ಎಂಡ್ ಗಾಡಿ ಯಾವಾಗ ಬಿಡುಗಡೆಯಾಗಲಿದೆ ಎಂಬುದು ಕುತೂಹಲವೆನಿಸಿದೆ.

ಹಿಂದಿನ ತಲೆಮಾರಿನ ಘೋಸ್ಟ್ ಮಾದರಿಗಳ ಯಶಸ್ಸನ್ನು ಗಮನಿಸಿದಾಗ ಘೋಸ್ಟ್ ಸಿರೀಸ್ II ಜಾಗತಿಕವಾಗಿ ಗಮನ ಸೆಳೆಯುವುದು ಬಹುತೇಕ ಖಚಿತವಾಗಿದೆ. ಇದರ ಪರಿಷ್ಕೃತ ವಿನ್ಯಾಸ ಹಾಗೂ ಅಪ್ ಗ್ರೇಡ್ ತಂತ್ರಜ್ಞಾನಗಳು ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ನೆರವಾಗಲಿದೆ.

ಇದು 6.6 ಲೀಟರ್ ವಿ12 ಟ್ವಿನ್ ಟರ್ಬೊ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಗರಿಷ್ಠ 563 ಅಶ್ವಶಕ್ತಿ (780 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಅಂತೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ಹಾಗೆಯೇ 4.9 ಸೆಕೆಂಡುಗಳಲ್ಲೇ 0-100 ಕೀ.ಮೀ. ವೇಗವನ್ನು ಪಡೆದುಕೊಳ್ಳಲಿದೆ.

Most Read Articles

Kannada
English summary
Rolls Royce is known to build the most exquisite automobiles in the world. The manufacturer is based in United Kingdom and was founded in March, 1998. The manufacturer of bespoke luxury vehicles is currently owned by BMW AG.
Story first published: Saturday, August 30, 2014, 14:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X